Meteor 350: ಹೊಸ ಮಾದರಿಯ 350cc ಬೈಕ್ ಮಾರುಕಟ್ಟೆಗೆ ಪರಿಚಯಿಸಿದ ರಾಯಲ್ ಎಂಫಿಎಲ್ಡ್, ಕಡಿಮೆ ಬೆಲೆ ಆಕರ್ಷಕ ಮೈಲೇಜ್

ಹೊಸ ಮಾದರಿಯ 350cc ಬೈಕ್ ಮಾರುಕಟ್ಟೆಗೆ ಪರಿಚಯಿಸಿದ ರಾಯಲ್ Enfield

Royal Enfield Meteor 350 Bike: ಮಾರುಕಟ್ಟೆಯಲ್ಲಿ Royal Enfield ಕಂಪನಿಯು ವಿಭಿನ್ನ ಮಾದರಿಯ ಬುಲೆಟ್ ಬೈಕ್ ಗಳನ್ನೂ ಆಗಾಗ ಪರಿಚಯಿಸುತ್ತಿರುತ್ತವೆ. ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಕ್ಲಾಸಿಕ್ 350 , ಹಿಮಾಲಯನ್, ಹಂಟರ್ 350 , ಬುಲೆಟ್ 650 , ಸೇರಿದಂತೆ ಇನ್ನು ಅನೇಕ ರೀತಿಯ ಮಾಡೆಲ್ ಗಳನ್ನೂ ರಾಯಲ್ ಏನ್ ಫೀಲ್ಡ್ ಕಂಪನಿಯು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Royal Enfield Meteor 350 Bike Price
Image Credit: BIke Wale

Royal Enfield Meteor 350
ಸದ್ಯ ಮಾರುಕಟ್ಟೆಯಲ್ಲಿ Royal Enfield ತನ್ನ Royal Enfield Meteor 350 ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹಳೆಯ ಮಾದರಿಗಿಂತ ನವೀಕರಣಗೊಂಡ ಹೊಸ ಆವೃತ್ತಿಯು ಸಾಕಷ್ಟು ಬದಲಾವಣೆಗಳನ್ನು ಒಳಗೊಂಡಿದೆ. ಈ ನವೀಕರಿಸಿದ ಆವೃತ್ತಿಯಲ್ಲಿ ನಾವು 5 ಪ್ರಮುಖ ವಿಷಯಗಳನ್ನು ಕಾಣಬಹುದು. ಆಕರ್ಷಕ ವಿನ್ಯಾಸವನ್ನು, ಹೆಚ್ಚಿನ ಮೈಲೇಜ್ ಅನ್ನು ನೀಡಲಿರುವ ನವೀಕೃತ Royal Enfield Meteor 350 ಬೈಕ್ ನ ಬಗೆ ಸಂಪೂರ್ಣ ವಿವರ ಇಲ್ಲಿದೆ.

ಮೆಟಿಯರ್ 350 ಮೋಟಾರ್‌ ಸೈಕಲ್‌ ನ ಉತ್ತಮ ವೈಶಿಷ್ಟ್ಯಗಳ ವಿವರ
•Royal Enfield Meteor 350 ರೂಪಾಂತರಗಳಲ್ಲಿ, ‘ಅರೋರಾ’ ಹೊಸದಾಗಿ ಬಿಡುಗಡೆಯಾದ ರೂಪಾಂತರವಾಗಿದ್ದು, ಬೆಲೆ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಟಾಪ್ ಸ್ಪೆಕ್ ಸೂಪರ್ನೋವಾ ರೂಪಾಂತರಕ್ಕಿಂತ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.

•ನವೀಕರಿಸಿದ ರಾಯಲ್ ಎನ್‌ ಫೀಲ್ಡ್ ಮೆಟಿಯರ್ 350 ಮೋಟಾರ್‌ ಸೈಕಲ್‌ ನಲ್ಲಿನ ಹೊಸ ವೈಶಿಷ್ಟ್ಯಗಳ ನೋಟವೆಂದರೆ LED ಹೆಡ್‌ ಲೈಟ್‌ ಗಳು, ಅಲ್ಯೂಮಿನಿಯಂ ಸ್ವಿಚ್‌ ಗಿಯರ್ (ಸೂಪರ್ನೋವಾ), ಟ್ರಿಪ್ಪರ್ ನ್ಯಾವಿಗೇಷನ್, ಸ್ಪೋಕ್ಡ್ ವೀಲ್‌ ಗಳು ಸೇರಿದಂತೆ ಇನ್ನು ಹತ್ತು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Royal Enfield Meteor 350 Bike
Image Credit: BIke Wale

•Royal Enfield Meteor 350 ಬೈಕ್ 349.34cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಇದು J- ಸರಣಿ ರಾಯಲ್ ಎನ್‌ ಫೀಲ್ಡ್ ಮೋಟಾರ್‌ ಸೈಕಲ್‌ ಗಳಿಗೆ ಶಕ್ತಿ ನೀಡುತ್ತದೆ. ಈ ಎಂಜಿನ್ 6,100rpm ನಲ್ಲಿ 19.94bhp ಪವರ್ ಮತ್ತು 4,000rpm ನಲ್ಲಿ 27Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

•ನವೀಕರಿಸಿದ ರಾಯಲ್ ಎನ್‌ ಫೀಲ್ಡ್ ಮೆಟಿಯರ್ 350 ಬೇಸ್ ಫೈರ್‌ ಬಾಲ್ ರೂಪಾಂತರದ ಬೆಲೆ ರೂ. 2.06 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಆದರೆ ಟಾಪ್-ಸ್ಪೆಕ್ ಸೂಪರ್ನೋವಾ ರೂಪಾಂತರದ ಬೆಲೆ ರೂ. 2.30 ಲಕ್ಷ ಇರಲಿದೆ.

•ಹೊಸ ರಾಯಲ್ ಎನ್‌ ಫೀಲ್ಡ್ ಮೆಟಿಯರ್ 350 ಗ್ರಾಹಕರಿಗೆ 4 ರೂಪಾಂತರಗಳಲ್ಲಿ ಲಭ್ಯವಿದೆ. ಫೈರ್ಬಾಲ್, ಸ್ಟೆಲ್ಲಾರ್, ಅರೋರಾ ಮತ್ತು ಸೂಪರ್ನೋವಾ ರೂಪಾಂತರಗಳಾಗಿವೆ.

Join Nadunudi News WhatsApp Group