May Rule: ಮೇ 1 ರಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ.

ಮೇ ತಿಂಗಳ ಮೊದಲ ವಾರದಲ್ಲೇ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು

New Rule From May 1st: ಏಪ್ರಿಲ್ ತಿಂಗಳು ಮುಗಿದು ಮೇ ತಿಂಗಳು ಆರಂಭವಾಗಿದೆ. ಇನ್ನು ಹೊಸ ಹಣಕಾಸು ವರ್ಷದ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗುತ್ತ ಬಂದಿದೆ. ಹಾಗೆಯೆ ಪ್ರತಿ ತಿಂಗಳ ಆರಂಭದಲ್ಲಿ ಅನೇಕ ಹಣಕಾಸೇತರ ನಿಯಮಗಳು ಬದಲಾಗುತ್ತಿವೆ.

ಸದ್ಯ ಮೇ ತಿಂಗಳ ಆರಂಭದ ಕಾರಣ ಈ ತಿಂಗಳಿನಲ್ಲಿ ಕೂಡ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುವುದು ಬಾಕಿ ಇದೆ. ಮೇ 1 ರಿಂದ ದೇಶದಲ್ಲಿ ಈ ನಿಯಮಗಳು ಬದಲಾಗುವುದು ಸಹಜ. ನೀವು ಬದಲಾಗಿರುವ ನಿಯಮಗಳನ್ನು ತಿಳಿಯಲು ಈ ಲೇಖನವನ್ನು ಓದಿ. ನಾವೀಗ ಈ ಲೇಖನದಲ್ಲಿ ಮೇ ನಲ್ಲಿ ಬದಲಾಗಲಿರುವ ಮಹತ್ವದ ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

New Rule From May 1st
Image Credit: TV9telugu

ಮೇ 1 ರಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ
•ತೈಲ ಕಂಪನಿಗಳು ಮೇ 1 ರಿಂದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 19 ರೂ. ಕಡಿಮೆ ಮಾಡಿದೆ. IOC ಪ್ರಕಾರ, ಮೇ 1 ರಿಂದ ದೆಹಲಿಯಲ್ಲಿ 19 ಕೆಜಿ ಇಂಡೇನ್ ಎಲ್ಪಿಜಿ ಸಿಲಿಂಡರ್ ರೂ. 1764.50 ರ ಬದಲಿಗೆ ರೂ. 1745.50 ಕ್ಕೆ ಲಭ್ಯವಿರುತ್ತದೆ. ಮಾರ್ಚ್ ನಲ್ಲಿ ಇದು ರೂ. 1795 ಪಡೆಯುತ್ತಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.

•ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ತನ್ನ ಉಳಿತಾಯ ಖಾತೆ ನಿಯಮಗಳನ್ನು ಬದಲಾಯಿಸಿದೆ. ಡೆಬಿಟ್ ಕಾರ್ಡ್ ಶುಲ್ಕಗಳು, ಚೆಕ್ ಬುಕ್ ಡೆಲಿವರಿ ಶುಲ್ಕಗಳು, IMPS ಮುಂತಾದ ಹಲವು ಸೇವಾ ಶುಲ್ಕಗಳನ್ನು ಬ್ಯಾಂಕ್ ಬದಲಾಯಿಸಿದೆ. ಈ ನಿಯಮಗಳು ಬುಧವಾರ, ಮೇ 1, 2024 ರಿಂದ ಜಾರಿಗೆ ಬರುತ್ತವೆ.

•ಯೆಸ್ ಬ್ಯಾಂಕ್ ತನ್ನ ಉಳಿತಾಯ ಖಾತೆ ಶುಲ್ಕವನ್ನು ಬದಲಾಯಿಸಿದೆ. ಬ್ಯಾಂಕಿನ ಹೊಸ ಶುಲ್ಕಗಳು 1 ಮೇ 2024 ರಿಂದ ಜಾರಿಗೆ ಬರುತ್ತವೆ. ಇದಲ್ಲದೆ, ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸಿದೆ. ಈಗ ನೀವು ರೂ. 15,000 ಕ್ಕಿಂತ ಹೆಚ್ಚಿನ ಯುಟಿಲಿಟಿ ಬಿಲ್ ಪಾವತಿಗಳ ಮೇಲೆ 1% ಜಿಎಸ್‌ಟಿ ಪಾವತಿಸಬೇಕು. ಹೊಸ ನಿಯಮಗಳು ಇಂದಿನಿಂದ ಜಾರಿಗೆ ಬರಲಿವೆ.

Join Nadunudi News WhatsApp Group

HDFC Bank FD Scheme
Image Credit: ABP Live

•IDFC ಫಸ್ಟ್ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಕೂಡ ಬದಲಾಯಿಸಿದೆ. ಈಗ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ರೂ. 20,000 ಕ್ಕಿಂತ ಹೆಚ್ಚಿನ ಯುಟಿಲಿಟಿ ಬಿಲ್‌ ಗಳನ್ನು ಪಾವತಿಸುವ ಗ್ರಾಹಕರು 18% ಜಿಎಸ್‌ಟಿ ಮತ್ತು 1% ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

•ತಿಂಗಳ ಪ್ರತಿ ಭಾನುವಾರ ಬ್ಯಾಂಕ್ ಗೆ ರಜೆ ಇರುವುದು ಸಾಮಾನ್ಯವಾದ ವಿಷಯ. ಹಾಗೆಯೇ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಮೇ ತಿಂಗಳಿನಲ್ಲಿ ಒಟ್ಟು 14 ದಿನಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಬ್ಯಾಂಕ್ ರಜಾ ದಿನಗಳ ಸಮಯದಲ್ಲಿ ಗ್ರಾಹಕರು Online Banking ಸೇವೆಯನ್ನು ಪಡೆಯಬಹುದು. ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾ ದಿನದ ಕಾರಣ ಬ್ಯಾಂಕ್ ಗಳು ಮುಚ್ಚಿರುತ್ತದೆ.

•HDFC ಬ್ಯಾಂಕ್ ತನ್ನ ವಿಶೇಷ ಹಿರಿಯ ಆರೈಕೆ FD ಗಡುವನ್ನು ಮೇ 10 ರವರೆಗೆ ವಿಸ್ತರಿಸಿದೆ. ಈ 5 ರಿಂದ 10 ವರ್ಷಗಳ FD ಯೋಜನೆಯು 7.75% ಬಡ್ಡಿಯನ್ನು ಪಡೆಯುತ್ತಿದೆ.

Gas Cylinder Price
Image Credit: Livemint

Join Nadunudi News WhatsApp Group