Temple Rule: ಇನ್ನುಮುಂದೆ ದೇವಸ್ಥಾನದಲ್ಲಿ ಈ ವಸ್ತುಗಳನ್ನ ಮಾರಾಟ ಮಾಡುವಂತಿಲ್ಲ, ಸರ್ಕಾರದ ಇನ್ನೊಂದು ಘೋಷಣೆ.

ದೇವಸ್ಥಾನಗಳ ಮುಂದೆ ಅಂಗಡಿ ಹಾಕಿಕೊಂಡವರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮ.

Tobacco Sales Ban In Temple: ಸಾಮಾನ್ಯವಾಗಿ ಹಿಂದೂ ಧರ್ಮದವರು ದೇವರ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಪ್ರತಿ ಊರಿನಲ್ಲಿ ಕೂಡ ಒಂದಕ್ಕಿಂತ ಹೆಚ್ಚು ದೇವಾಲಯಗಳು ಇದ್ದೆ ಇರುತ್ತದೆ. ಇನ್ನು ರಾಜ್ಯದಲ್ಲಿ ಕೂಡ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಕರ್ನಾಟಕ ರಾಜ್ಯದ ಪ್ರಸ್ತಿದ್ದ ದೇವಾಲಯಗಳಿಗೆ ದೇಶ ವಿದೇಶದಿಂದ ಲಕ್ಷಾಂತರ ಮಂದಿ ಭಕ್ತರು ಪ್ರತಿ ನಿತ್ಯ ಬರುತ್ತಾರೆ.

Selling tobacco in front of temples is prohibited.
Image Credit: flickr

ರಾಜ್ಯದ ದೇವಾಲಯಗಳಿಂದ ಹೊಸ ನಿಯಮ ಜಾರಿ
ಸಾಮಾನ್ಯವಾಗಿ ದೇವಸ್ಥಾನ ಪವಿತ್ರತೆಯ ಸಂಕೇತವಾಗಿದೆ. ದೇವಸ್ಥಾನದ ಪಾವಿತ್ರತೆಯನ್ನು ಭಕ್ತರು ಎಂದು ಹಾಳುಮಾಡಬಾರದು ಎನ್ನುವ ಉದ್ದೇಶದಿಂದ ದೇವಸ್ತಾನದಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಭಕ್ತರು ದೇವಸ್ಥಾನದಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯವಾಗುತ್ತದೆ. ಇದೀಗ ರಾಜ್ಯದ ದೇವಾಲಯಗಳಲ್ಲಿ ಹೊಸ ನಿಯಮವನ್ನು ಅಳವಡಿಸಾಲಾಗಿದೆ.

ಇನ್ನುಮುಂದೆ ದೇವಸ್ಥಾನದಲ್ಲಿ ಈ ವಸ್ತುಗಳನ್ನ ಮಾರಾಟ ಮಾಡುವಂತಿಲ್ಲ
ದೇವಸ್ಥಾನದ ಒಳಾಂಗಣದ ಸ್ವಚ್ಛತೆಯ ಜೊತೆಗೆ ದೇವಸ್ಥಾನದ ಹೊರ ವಾತಾವರಣವನ್ನು ಸ್ವಚ್ಛವಾಗಿರಿಸುವ ಉದ್ದೇಶದಿಂದ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ದೇವಾಲಯಗಳ ಆವರಣದ ಸುತ್ತಮುತ್ತ ಮೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳಾದಂತಹ ಗುಟ್ಕಾ, ಸಿಗರೇಟ್, ಪಾನ್ ಮಸಾಲಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇನ್ನು ಈ ವಸ್ತುಗಳ ಮಾರಾಟದ ಜೊತೆಗೆ ದೇವಸ್ಥಾನದಲ್ಲಿ ಇಂತಹ ವಸ್ತುಗಳ ಬಳಕೆಯನ್ನು ಕೂಡ ನಿಷೇಧಿಸಲು ಸರ್ಕಾರ ಮುಂದಾಗಿದೆ.

For the purpose of cleanliness, tobacco cannot be sold in front of temples anymore
Image Credit: flickr

ಸದ್ಯದಲ್ಲೇ ಜಾರಿಯಾಗಲಿದೆ ಹೊಸ ನಿಯಮ
ಸದ್ಯದಲ್ಲೇ ಈ ಹೊಸ ನಿಯಮದ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಜಾರಿಯಾಗಲಿದೆ. ಈ ಹಿಂದೆ ಸರ್ಕಾರ ಶಾಲಾ ಕಾಲೇಜುಗಳ ಆವರಣದ ವ್ಯಾಪ್ತಿಯ ನೂರು ಮೀಟರ್ ಗಳಲ್ಲಿ ಯಾವುದೇ ಅಂಗಡಿಗಳಲ್ಲಿ ಬಿಡಿ, ಗುಟ್ಕಾ, ಸಿಗರೇಟ್, ಪಾನ್ ಮಸಾಲಾ ಮಾರಾಟವನ್ನು ಸಂಪೂರ್ಣವಾಗಿ ನಿಷೇದಿಸಿತ್ತು. ಇದೀಗ ಈ ನಿಯಮವನ್ನು ರಾಜ್ಯದ ದೇವಾಲಯಗಳಲ್ಲಿಯೂ ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಸದ್ಯದಲ್ಲೇ ದೇವಸ್ಥಾನದ ಸುತ್ತ ಮುತ್ತಲು ತಂಬಾಕು ವಸ್ತುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ.

Join Nadunudi News WhatsApp Group

Join Nadunudi News WhatsApp Group