SA-2 Exam: 5 8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷಾ ಪ್ರಶ್ನೆ ಪತ್ರಿಕೆ ಈ ರೀತಿಯಲ್ಲಿ ಇರಲಿದೆ, ಮಾದರಿ ಪ್ರಶ್ನೆ ಪತ್ರಿಕೆ.

5 , 8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷಾ ಪ್ರಶ್ನೆ ಪತ್ರಿಕೆ ಪ್ರಕಟ

SA-2 Exam Latest Update: ರಾಜ್ಯದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. ಸರ್ಕಾರ ಶಾಲಾ ವಿದ್ಯಾರ್ಥಿಗಳ ಒಳಿತಿಗಾಗಿ ಸಾಕಷ್ಟು ನಿಯಮಾವಳಿಗಳು ರೂಪಿಸಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಗುರಿ ಹೊಂದಿರುವ ಕಾರಣ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಹೆಚ್ಚಿನ ಕ್ರಮ ಕೈಗೊಂಡಿದೆ. ಸದ್ಯ ರಾಜ್ಯ ಸರ್ಕಾರ 5, 8, 9 ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ.

SA-2 Exam Latest Update
Image Credit: Scroll

5 , 8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷಾ ಪ್ರಶ್ನೆ ಪತ್ರಿಕೆ ಪ್ರಕಟ
ರಾಜ್ಯದಲ್ಲಿ 2023-24ರ ಸಾಲಿನಲ್ಲಿ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾದ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮಾದರಿ ಪರೀಕ್ಷಾ ಪತ್ರಿಕೆಗಳನ್ನು ಪ್ರಕಟಿಸುವ ಕುರಿತು ಮಂಡಳಿಯ ವೆಬ್‌ ಸೈಟ್‌ ನಲ್ಲಿ ಆದೇಶವನ್ನು ಪ್ರಕಟಿಸಲಾಗಿದೆ.

ಹಾಗೆಯೆ 2023-24ರ ಸಾಲಿನಲ್ಲಿ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾದ ಸಂಕಲನಾತ್ಮಕ ಮೌಲ್ಯಮಾಪನ-2 ಕಾರ್ಯವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ KSQAAC ವತಿಯಿಂದ ನಡೆಸಲಾಗುತ್ತದೆ.

ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ 5, 8 ಮತ್ತು 9 ನೇ ತರಗತಿಯ ಮಾದರಿ ಪ್ರಶ್ನೋತ್ತರಗಳನ್ನು ಮಂಡಳಿಯ ವೆಬ್‌ಸೈಟ್ https://kseeb.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಸದರಿ ಮಾದರಿ ಪ್ರಶ್ನೋತ್ತರಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅಭ್ಯಸಿಸುವಂತೆ ಕ್ರಮ ಕೈಗೊಳ್ಳೂ ಸೂಚನೆ ನೀಡಲಾಗಿದೆ.

5, 8, 9 Standard Students S-A 2 Exam
Image Credit: Scroll

5 ,8 ಮತ್ತು 9 ನೇ ತರಗತಿ ಮಕ್ಕಳ ಪರೀಕ್ಷೆಯಲ್ಲಿ ಬದಲಾವಣೆ
5 ನೇ ತರಗತಿ ಬೋರ್ಡ್ ಪರೀಕ್ಷೆಗೆ, 2023-24 ನೇ ತರಗತಿಯ ಶೈಕ್ಷಣಿಕ ಮಾರ್ಗಸೂಚಿಗಳಲ್ಲಿ ನವೆಂಬರ್‌ ನಿಂದ ಫೆಬ್ರವರಿ 2024 ರ ವರೆಗಿನ ಪಠ್ಯ ವಸ್ತುಗಳನ್ನು ಮತ್ತು ಎಂಟನೇ ತರಗತಿಗೆ ಜೂನ್ 2023 ರಿಂದ ಫೆಬ್ರವರಿ 2024 ರ ವರೆಗಿನ ಪಠ್ಯ ವಸ್ತು ಪರಿಗಣಿಸಲು ಸೂಚಿಸಲಾಗಿದೆ.

Join Nadunudi News WhatsApp Group

9ನೇ ತರಗತಿಯ ಮೌಲ್ಯಮಾಪನದಲ್ಲಿ ಪ್ರಥಮ ಭಾಷೆಗೆ 100 ಅಂಕಗಳಿಗೆ, ದ್ವಿತೀಯ ಭಾಷೆ, ತೃತೀಯ ಭಾಷೆ ಮತ್ತು ಕೋರ್ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಬೇಕು. ಅಂತಿಮವಾಗಿ, ಆಂತರಿಕ ಮೌಲ್ಯಮಾಪನ ಅಂಕ, ಎಸ್‌ಎ-2 ಬದಲಿಗೆ ನಡೆಸಿದ ಲಿಖಿತ ಮೌಲ್ಯಮಾಪನ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

Join Nadunudi News WhatsApp Group