Sachin Tendulkar: ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದ ಸಚಿನ್, ಸಚಿನ್ ಕನ್ನಡ ಮಾತಿಗೆ ಅಪಾರ ಮೆಚ್ಚುಗೆ

ಸಚಿನ್ ತೆಂಡೂಲ್ಕರ್ ಅವರ ಕನ್ನಡ ಮಾತಿಗೆ ಕನ್ನಡಿಗರು ಫಿದಾ

Sachin Tendulkar Kannada Speech: ಸ್ಟಾರ್ ಕ್ರಿಕೆಟರ್ Sachin Tendulkar ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಆಟಗಾರ ಎಂದು ಹೇಳಿದರೆ ತಪ್ಪಾಗಲಾರದು. ಕ್ರಿಕೆಟ್ ನಲ್ಲಿ ನಿವೃತ್ತಿ ಪಡೆದಿದ್ದರು ಕೂಡ ಸಚಿನ್ ಅವರಿಗೆ ಸಿಗುವ ಅಭಿಮಾನದಲ್ಲಿ ಯಾವುದೇ ಕೊರತೆ ಇಲ್ಲ ಎನ್ನಬಹುದು. ಸಚಿನ್ ಅವರನ್ನು ಕ್ರಿಕೆಟ್ ದೇವರು ಎಂದು ಕೂಡ ಕರೆಯುವುದು ವಿಶೇಷವಾಗಿದೆ.

ಸದ್ಯ ಸಚಿನ ತೆಂಡೂಲ್ಕರ್ ಅವರು ಕನ್ನಡಿಗರ ಮನ್ನಸ್ಸನು ಮತ್ತೊಮ್ಮೆ ಗೆದಿದ್ದಾರೆ. ಕಾರಣ ಕಾರ್ಯಕ್ರಮ ಒಂದರಲ್ಲಿ ಸಚಿನ್ ಅವರು ಕನ್ನಡದಲ್ಲಿಯೇ ಮಾತನಾಡಿರುವುದು ಕನ್ನಡಿಗರಿಗೆ ಖುಷಿಯ ವಿಚಾರವಾಗಿದೆ. One World One Family cup ವಿಶೇಷ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ಪಾಲ್ಗೊಂಡಿದ್ದರು, ಈ ವೇಳೆ ಕನ್ನಡಲ್ಲಿ ತಮ್ಮ ಮಾತನ್ನು ಆರಂಭಿಸಿ ಇದೀಗ ಸಕತ್ ವೈರಲ್ ಆಗಿದ್ದಾರೆ.

Sachin Tendulkar Kannada Speech
Image Credit: Sportskeeda

ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದ ಸಚಿನ್
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸಾಯಿಕೃಷ್ಣನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ವಿಶೇಷ ಕ್ರಿಕೆಟ್ ಪಂದ್ಯಕ್ಕೆ ಕರ್ನಾಟಕಕ್ಕೆ ಆಗಮಿಸಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕನ್ನಡದಲ್ಲಿ ಭಾಷಣ ಆರಂಭಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

“ಎಲ್ಲರಿಗೂ ನಮಸ್ಕಾರ” ಎನ್ನುವ ಮೂಲಕ ಕರ್ನಾಟಕದ ಜನತೆಯನ್ನುದ್ದೇಶಿಸಿ ಸಚಿನ್ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಪಂದ್ಯ ಹಾಗೂ ಇದರ ಹಿಂದಿನ ಉದ್ದೇಶದ ಕುರಿತು ಮಾತನಾಡಿದ ಅವರು ಯುವಕರು, ಮಕ್ಕಳು ಎಲ್ಲರೂ ಇಲ್ಲಿ ನೆರದಿದ್ದೀರಿ, ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬೇಡಿ ಎಂದು ಸಚಿನ್ ಹೇಳಿದ್ದಾರೆ.

One World One Family Cup
Image Credit: News 18

ಸಚಿನ್ ಕನ್ನಡ ಮಾತಿಗೆ ಅಪಾರ ಮೆಚ್ಚುಗೆ
ಭಾರತದಲ್ಲಿ ಪ್ರತಿಯೊಬ್ಬರೂ ಹೆಚ್ಚು ಫಿಟ್ ಆಗಿರಬೇಕು. ಇದು ಕೇವಲ ಆಟಗಾರರಾಗಿರಬೇಕಾಗಿಲ್ಲ. ಇಂಜಿನಿಯರ್‌ ಗಳು, ವೈದ್ಯರು, ಯಾರಾದರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಸದ್ಗುರು ಸಾಯಿ ಮಧುಸೂದನ್ ಅವರ ಈ ಸೇವಾ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Join Nadunudi News WhatsApp Group

ಆರೋಗ್ಯಕರ ಸಮಾಜ ನಿರ್ಮಾಣದ ಜತೆಗೆ ಶೈಕ್ಷಣಿಕ ಸೇವೆಯೂ ಮಹತ್ವದ್ದು. ಇದರ ಅಂಗವಾಗಿ ಆಯೋಜಿಸಿರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಎಂಬ ಈ ವಿಶೇಷ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಿರುವುದು ನನಗೂ ಖುಷಿ ತಂದಿದೆ ಎಂದರು. ಸಚಿನ್ ಅವರ ಕನ್ನಡ ಮಾತಿಗೆ ಕನ್ನಡಿಗರು ಫಿದಾ ಆಗಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group