Salaar Movie: ಶೂಟಿಂಗ್ ಮುಗಿಯುವ ಮುನ್ನವೇ RRR ದಾಖಲೆಯನ್ನು ಮುರಿದ ಸಾಲಾರ್.

ನಿಡುಗಡೆ ಮುನ್ನವೇ ಸಾಲಾರ್ ಚಿತ್ರ RRR ಚಿತ್ರದ ದಾಖಲೆಯನ್ನ ಮುರಿದಿದ್ದು ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಳ ಆಗಿದೆ.

Actor Prabhas Salaar Movie OTT Sale: ಬಾಹುಬಲಿ ನಟ ಪ್ರಭಾಸ್ (Prabhas)ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಪ್ರಭಾಸ್ ಅವರು ಸಾಲಾರ್ (Salaar) ಸಿನಿಮಾದ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದಾರೆ.

ಬಹುನಿರೀಕ್ಷಿತ ಸಾಲಾರ್ ಸಿನಿಮಾ ಎರಡು ವರ್ಷಗಳಿಂದ ಶೂಟಿಂಗ್ ನಡೆಯುತ್ತಿದ್ದು ಬಿಡುಗಡೆಗೂ ಮುನ್ನವೇ ಹೆಚ್ಚು ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಸಿನಿಮಾ ದೊಡ್ಡ ಕ್ರೇಜ್ ಅನ್ನು ಹುಟ್ಟು ಹಾಕುತ್ತಿದೆ. ನಟ ಪ್ರಭಾಸ್ ಅಭಿಮಾನಿಗಳು ಈ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

Prabhas Salaar Movie OTT Sale
Image Source: India Today

ಆರ್ ಆರ್ ಆರ್ ಸಿನಿಮಾದ ದಾಖಲೆಯನ್ನು ಮುರಿಯಲು ಹೊರಟಿರುವ ಸಾಲಾರ್ ಸಿನಿಮಾ
ನಟ ಪ್ರಭಾಸ್ ನಟನೆಯ ಸಾಲಾರ್ ಸಿನಿಮಾ ದೊಡ್ಡ ಕ್ರೇಜ್ ಸೃಷ್ಟಿ ಮಾಡುತ್ತಿದೆ. ಈ ಸಿನಿಮಾದ ಚಿತ್ರೀಕರಣ ಮುಗಿಯುವ ಮುನ್ನವೇ ಭಾರಿ ಮೊತ್ತದ ಆಫರ್ ಗಳು ಬರುತ್ತಿದ್ದು ಈಗಾಗಲೇ ಆರ್.ಆರ್.ಆರ್ ಸಿನಿಮಾದ ಒಂದು ದಾಖಲೆಯನ್ನು ಮುರಿದಾಗಿದೆ ಸಾಲಾರ್ ಸಿನಿಮಾ.

Prabhas Salaar Movie OTT Sale
Image Source: Koimoi

ಬಿಡುಗಡೆಗೂ ಮುನ್ನ ಆರ್.ಆರ್.ಆರ್ ದಾಖಲೆಯನ್ನು ಮುರಿದ ಸಾಲಾರ್ ಸಿನಿಮಾ
ಸಾಲಾರ್ ಸಿನಿಮಾದ ಓವರ್ ಸೀನ್ ಬಿಡುಗಡೆ ಹಕ್ಕನ್ನು ಬರೋಬ್ಬರಿ 90 ಕೋಟಿಗೆ ಮಾರಾಟ ಮಾಡಲಾಗಿದೆಯಂತೆ. ದಕ್ಷಿಣ ಕನ್ನಡದ ಬೇರೆ ಯಾವುದೇ ಸಿನಿಮಾ ಸಹ ಬಿಡುಗಡೆ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲವಂತೆ.

ವಿದೇಶದಲ್ಲಿ ಮೋಡಿ ಮಾಡಿದ ಇತ್ತೀಚೆಗಿನ ತೆಲುಗು ಸಿನಿಮಾ ಆರ್.ಆರ್.ಆರ್ ನ ವಿದೇಶಿ ಬಿಡುಗಡೆ ಹಕ್ಕು ಸಹ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ. ಆರ್ ಆರ್ ಆರ್ ಸಿನಿಮಾ ಓವರ್ ಸೀನ್ ಮಾರಾಟವಾಗಿದ್ದು 70 ಕೋಟಿ ರೂಪಾಯಿಗೆ. ಇದು ಈವರೆಗಿನ ದೊಡ್ಡ ಮೊತ್ತವಾಗಿತ್ತು. ಆದರೆ ಸಾಲಾರ್ ಸಿನಿಮಾದ ಓವರ್ ಸೀನ್ ಹಕ್ಕು 90 ಕೋಟಿಗೆ ಮಾರಾಟವಾಗಿದೆ.

Join Nadunudi News WhatsApp Group

Prabhas Salaar Movie OTT Sale
Image Source: Koimoi

Join Nadunudi News WhatsApp Group