Salaar Collection: ಸಲಾರ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ…? ಎರಡನೇ ಟ್ರೈಲರ್ ನಿಂದ ಹೆಚ್ಚಾಗಿದೆ ನಿರೀಕ್ಷೆ

ಜನರಲ್ಲಿ ಹೆಚ್ಚಿನ ಕುತೂಹಲ ಸೃಷ್ಟಿಸಿದ ಸಲಾರ್ ಚಿತ್ರದ ಟ್ರೈಲರ್, ಹೆಚ್ಚಾಗಿದೆ ನಿರೀಕ್ಷೆ

Salaar Movie First Day Collection: ಸದ್ಯ ಸಿನಿಪ್ರಿಯಯರನ್ನು ಬಹುನಿರೀಕ್ಷಿತ Salaar ಚಿತ್ರ ಗಮನ ಸೆಳೆಯುತ್ತಿದೆ. ತೆಲುಗು ಚಿತ್ರರಂಗದ ಸ್ಟಾರ್ ನಟ Prabhas ಅವರ Salaar Movie ಬಿಡುಗಡೆಗೂ ಮುನ್ನವೇ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಪ್ರಭಾಸ್ ಆಧಿಪುರುಷ್ ಚಿತ್ರದ ಬಳಿಕ ಇದೀಗ ಮತ್ತೆ ಸಲಾರ್ ಚಿತ್ರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲಿದ್ದಾರೆ. ಈಗಾಗಲೇ ಪ್ರಭಾಸ್ ಅವರ ಸಲಾರ್ ಚಿತ್ರ Trailer ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡುತ್ತಿದೆ.

ಸಲಾರ್ ಚಿತ್ರ ಟ್ರೈಲರ್ ನಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದೆ. ಇನ್ನು ಜುಲೈನ್ ನಲ್ಲಿ ಬಿಡುಗಡೆಗೊಂಡ ಸಲಾರ್ ಟೀಸರ್ ಜನರಲ್ಲಿ ಹೆಚ್ಚು ಕುತೂಹಲ ಮೂಡಿಸಿದ್ದು ಈಗ ಬಿಡುಗಡೆಗೊಂಡ ಟ್ರೈಲರ್ ಜನರಲ್ಲಿ ಹೆಚ್ಚಿನ ಕುತೂಹಲ ಸೃಷ್ಟಿಸಿದೆ ಎನ್ನಬಹುದು. ಇನ್ನು ಸಲಾರ್ ಟ್ರೈಲರ್ ವೈರಲ್ ಆಗುತ್ತಿದ್ದಂತೆ ವ್ಯಾಪಕ ಮೆಚ್ಚುಗೆ ಗಳಿಸಿದೆ. ಸದ್ಯ ಸಲಾರ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

Salaar Movie First Day Collection
Image Credit: Business-Standard

ಸಲಾರ್ ಎರಡನೇ ಟ್ರೈಲರ್ ನಿಂದ ಹೆಚ್ಚಾಗಿದೆ ನಿರೀಕ್ಷೆ
ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಬಿಡುಗಡೆಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿ ಪ್ರಿಯರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಸಲಾರ್ ಚಿತ್ರದ ಎರಡು ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾದ ಝಲಕ್ ಅನ್ನು ನೋಡಿ ಸಿನಿಪ್ರಿಯರು ಬಾರಿ ಕುತುಹರಾಗಿದ್ದಾರೆ.

ಸಾಲಾರ್ ಚಿತ್ರದ ಟ್ರೈಲರ್ ನೋಡುಗರಿಗೆ ಬಾರಿ ಇಷ್ಟವಾಗಿದೆ. ಡಿಸೇಂಬರ್ 1 ರಂದು ಸಲಾರ್ ಚಿತ್ರದ ಮೊದಲ ಟ್ರೈಲರ್ ರಿಲೀಸ್ ಆಗಿದ್ದು, ಸದ್ಯ ಡಿಸೇಂಬರ್ 19 ರಂದು ಎರಡನೇ ಟ್ರೈಲರ್ ಬಿಡುಗಡೆಯಾಗಿದೆ. ಸಲಾರ್ ಚಿತ್ರದ ಎರಡನೇ ಟ್ರೈಲರ್ ನಿಜಕ್ಕೂ ಬಾರಿ ವೈರಲ್ ಆಗುತ್ತಿದೆ. ಸೆಕೆಂಡ್ ಟ್ರೈಲರ್ ನೋಡಿದ ಮೇಲಂತೂ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಚಿತ್ರದ ಬಿಡುಗಡೆಗೂ ಮುನ್ನವೇ ಚಿತ್ರದ ಮೊದಲ ದಿನದ ಕಲೆಕ್ಷನ್ ಬಗ್ಗೆ ಬಾರಿ ಚರ್ಚೆ ಉಂಟಾಗುತ್ತಿದೆ.

Salaar Movie Latest Update
Image Credit: Twitter

ಸಲಾರ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ…?
ಸಲಾರ್ ಮೊದಲ ಟ್ರೈಲರ್ ಬಿಡುಗಡೆಯಾದಾಗ ಉಗ್ರಂ ಚಿತ್ರದ ರಿಮೇಕ್ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಚಿತ್ರ ತಂಡ ಸಲಾರ್ ಅಸಲಿ ಕಥೆ ಬೇರೇನೇ ಇದೆ ಎಂದು ಹೇಳಿಕೊಂಡಿದೆ. ಸದ್ಯ ಸಲಾರ್ ಚಿತ್ರದ ಎರಡನೇ ಟ್ರೈಲರ್ ದಾಖಲೆ ಸೃಷ್ಟಿಸಿದೆ.

Join Nadunudi News WhatsApp Group

ಇನ್ನು ಪ್ರಭಾಸ್ ನಟನೆಯ ಸಲಾರ್ December 22 ರಂದು ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಕಲೆಕ್ಷನ್ ಬಗ್ಗೆ ಮಾಹಿತಿ ಲಭಿಸಿದೆ. ಸಲಾರ್ ಚಿತ್ರ ಬಿಡುಗಡೆಗೊಂಡ ಮೊದಲ ದಿನ 125 ರಿಂದ 135 ಕೋಟಿ ಹಣ ಗಳಿಸಲಿದೆ ಎಂದು ಅಂದಾಜಿಸಲಾಗಿದೆ. ಬರಿ ಟ್ರೈಲರ್ ನಲ್ಲಿಯೇ ಇಷ್ಟೊಂದು ಹವಾ ಸೃಷ್ಟಿಸಿದ ಸಲಾರ್ ರಿಲೀಸ್ ಆದರೆ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

Join Nadunudi News WhatsApp Group