Salaar Song: YouTube ನಲ್ಲಿ ದಾಖಲೆ ನಿರ್ಮಾಣ ಮಾಡಿದ ಸಾಲಾರ್, ಈ ಚಿತ್ರ ಇತಿಹಾಸ ಸೃಷ್ಟಿ ಮಾಡುವುದು ಖಚಿತ

ಯೌಟ್ಯೂಬ್ ನಲ್ಲಿ ದಾಖಲೆ ನಿರ್ಮಾಣ ಮಾಡಿದ ಸಾಲಾರ್ ಚಿತ್ರದ ಟ್ರೈಲರ್

Salaar Movie Trailer: ಡಾರ್ಲಿಂಗ್ ಪ್ರಭಾಸ್ (Prabhas) ಅಭಿನಯದ ಸಾಲಾರ್ (Salaar) ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ ಇನ್ನೇನು ಡಿಸೆಂಬರ್ 22 ಕ್ಕೆ ಈ ಸಿನಿಮಾ ದೇಶದಾದ್ಯಂತ ಪ್ರದರ್ಶನ ಹೊಂದಲಿದ್ದು, ಸಿನಿ ಪ್ರಿಯರು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೈಲರ್ (Salaar Trailer) ರಿಲೀಸ್ ಆಗಿದೆ.

ಫ್ರೆಂಡ್‌ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಷ್ಟೇ ಅಲ್ಲದೆ ಈ ಸಿನಿಮಾ ಕೋಟಿ ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದು, ಯಾವ ಮಟ್ಟಿಗೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು ಕಾದು ನೋಡಬೇಕಿದೆ.

Salaar Movie Trailer
Image Credit: Original Source

ರಿಲೀಸ್ ಗೆ ಸಿದ್ದವಾದ ಸಾಲಾರ್ ಸಿನಿಮಾ

ಸಲಾರ್ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ (Censor) ಮಂಡಳಿ ಪ್ರಮಾಣ ಪತ್ರವನ್ನು ನೀಡಿದೆ. ತೀವ್ರಗತಿಯ ಸಾಹಸ ಸನ್ನಿವೇಶಗಳು ಇರುವ ಕಾರಣದಿಂದಾಗಿ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಭಾರತದಲ್ಲಿನ ಪ್ರದರ್ಶನಕ್ಕಾಗಿ ‘ಎ’ ಮತ್ತು ಹೊರ ದೇಶದಲ್ಲಿನ ಪ್ರದರ್ಶನಕ್ಕಾಗಿ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 55 ನಿಮಿಷ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಸಾಲಾರ್ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಸಾಲಾರ್ ಸಿನಿಮಾದಲ್ಲಿ ದಿಗ್ಗಜ ನಟ ನಟಿಯರದ್ದೇ ಹವಾ

Join Nadunudi News WhatsApp Group

ಈ ತಿಂಗಳಲ್ಲಿ ರಿಲೀಸ್ ಆಗಲಿರುವ ಪ್ರಭಾಸ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಸಿನಿಮಾ ಈಗಾಗಲೇ ಎಲ್ಲಾ ಕಡೆ ಸುದ್ದಿಯಲ್ಲಿದೆ. ಸಾಲಾರ್ ಸಿನಿಮಾದಲ್ಲಿ ಅನೇಕ ದಿಗ್ಗಜ ನಟ ನಟಿಯರು ನಟಿಸಿದ್ದು, ಅದರಲ್ಲೂ ವಿಶೇಷವಾಗಿ ಮಲಯಾಳಂನ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ (Pruthviraj Sukumaran) ಹೊಸಬಗೆಯ ಪಾತ್ರ ಮಾಡಿದ್ದಾರೆ. ವಿಶೇಷವೆಂದರೆ ಪೃಥ್ವಿರಾಜ್ ಸುಕುಮಾರನ್ ಅವರು ತಮ್ಮ ಪಾತ್ರಕ್ಕೆ ಐದೂ ಭಾಷೆಗಳಲ್ಲಿ ತಾವೇ ಡಬ್ ಮಾಡಿದ್ದಾರೆ.

Salaar Movie Release Date
Image Credit: ottplay

ಸಾಲಾರ್ ಸಿನಿಮಾದ ಮೊದಲ ಹಾಡು ರಿಲೀಸ್

ಬಹುನಿರೀಕ್ಷಿತ ಸಾಲಾರ್ ಸಿನಿಮಾದ ಮೊದಲ ಹಾಡು ಇಂದು ಬಿಡುಗಡೆ ಆಗಲಿದೆ. ಒಟ್ಟು ಐದು ಭಾಷೆಗಳಲ್ಲಿ ಹಾಡು ಬಿಡುಗಡೆಯಾಗಲಿದ್ದು, ಮೊದಲ ಹಾಡಿಗಾಗಿ ಅಭಿಮಾನಿಗಳು ತುದಿಗಾಲಿಲ್ಲ ಕಾಯುತ್ತಿದ್ದಾರೆ. ಬಿಡುಗಡೆಯ ಸಮಯವನ್ನು ಹೊಂಬಾಳೆ ಸಂಸ್ಥೆ ತಿಳಿಸದೇ ಇದ್ದರೂ, ಇಂದು ಪಕ್ಕಾ ಹಾಡು ಬಿಡುಗಡೆ ಮಾಡುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

ಸಾಲಾರ್ ಸಿನಿಮಾದ ಟ್ರೈಲರ್ ನಂತರ ಮೊದಲ ಹಾಡು ರಿಲೀಸ್ ಆಗಲಿದ್ದು ಈ ಹಾಡನ್ನು ಕೇಳಲು ಅಭಿಮಾನಿಗಳು ತುದಿಕಾಲಿನಲ್ಲಿ ನಿಂತಿದ್ದಾರೆ. ಯೌಟ್ಯೂಬ್ ನಲ್ಲಿ ಸಾಲಾರ್ ಚಿತ್ರದ ಹಾಡು ಮತ್ತು ಟ್ರೈಲರ್ ಸಕತ್ ಟ್ರೆಂಡಿಂಗ್ ಆಗಿದ್ದು ಕೋಟಿ ಕೋಟಿ ವೀಕ್ಷಣೆಯನ್ನ ಕೂಡ ಪಡೆದುಕೊಳ್ಳುತ್ತಿದೆ. (Salaar Trailer And Song Trending In Youtube) ಯೌಟ್ಯೂಬ್ ನಲ್ಲಿ ಸಾಲಾರ್ ಟ್ರೈಲರ್ ಅನ್ನು ತೆಲುಗು ಭಾಷೆಯಲ್ಲಿ ಸುಮಾರು 7 ಕೋಟಿಗೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.

Join Nadunudi News WhatsApp Group