Salary Allowance: ಸರ್ಕಾರೀ ನೌಕರರಿಗೆ ಮತ್ತೆ ಭರ್ಜರಿ ಗುಡ್ ನ್ಯೂಸ್, ಮಾರ್ಚ್ ತಿಂಗಳಿನ ಸಂಬಳದಲ್ಲಿ ಹೆಚ್ಚಳ.

ಮಾರ್ಚ್ ತಿಂಗಳಲ್ಲಿ ಸರ್ಕಾರೀ ನೌಕರರ ಸಂಬಳ ಮತ್ತೆ ಹೆಚ್ಚಳ

Salary Allowance Hike For These Govt Employees: ಸದ್ಯ ದೇಶದಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಇನ್ನು 7 ನೇ ವೇತನದಡಿ ಸರ್ಕಾರೀ ನೌಕರರ ತುಟ್ಟಿಭತ್ಯೆಯನ್ನು ಈಗಾಗಲೇ ಸರ್ಕಾರ ಘೋಷಿಸಿದೆ. ಸರ್ಕಾರೀ ನೌಕರರು ಈ ವರ್ಷದಲ್ಲಿ ಹೆಚ್ಚಿನ ವೇತನವನ್ನು ಪಡೆಯುವ ಸಾಧ್ಯತೆ ಇದೆ.

ತುಟ್ಟಿಭತ್ಯೆ ಹಾಗೂ 18 ತಿಂಗಳ ಬಾಕಿ ವೇತನವನ್ನು ಆದಷ್ಟು ಬೇಗ ಪಾವತಿ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿದೆ. ಇದಲ್ಲೆದರ ಮದ್ಯೆ ಈ ರಾಜ್ಯ ಸರ್ಕಾರ ಸರ್ಕಾರೀ ನೌಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

Salary Allowance Hike For These Govt Employees
Image Credit: Bshopit

ಸರ್ಕಾರೀ ನೌಕರರಿಗೆ ಮತ್ತೆ ಭರ್ಜರಿ ಗುಡ್ ನ್ಯೂಸ್
ಲೋಕಸಭೆ ಚುನಾವಣೆಗೂ ಮುನ್ನ ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಸರ್ಕಾರ ವಾಚ್ ಮನ್ ಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ರಾಜ್ಯ ಸರ್ಕಾರ ಕಾವಲುಗಾರರ ಗೌರವಧನ ಮತ್ತು ಭತ್ಯೆಯಲ್ಲಿ ಭಾರಿ ಹೆಚ್ಚಳ ಮಾಡಿದೆ. ಈ ಕುರಿತು ಅಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆಯೂ ಅಧಿಸೂಚನೆ ಹೊರಡಿಸಿದೆ. ಹೊಸ ದರಗಳು ನವೆಂಬರ್‌ ನಿಂದ ಅನ್ವಯವಾಗಲಿದ್ದು, ನೌಕರರ ವೇತನದಲ್ಲಿ 15,000 ರೂ.ನಿಂದ 20,000 ರೂ.ವರೆಗೆ ಏರಿಕೆಯಾಗಲಿದೆ. ಹರಿಯಾಣ ಸರ್ಕಾರೀ ನೌಕರರ ವೇತನ ಮುಂದಿನ ತಿಂಗಳಿಂದ ಬದಲಾಗಲಿದೆ

ಮಾರ್ಚ್ ತಿಂಗಳಿನ ಸಂಬಳದಲ್ಲಿ ಹೆಚ್ಚಳ
ಈವರೆಗೂ ಹರಿಯಾಣದ ವಾಚ್‌ ಮೆನ್‌ ಗಳಿಗೆ 7 ಸಾವಿರ ರೂ. ಗೌರವಧನ ಸಿಗುತ್ತಿತ್ತು, ಆದರೆ ರಾಜ್ಯ ಸರ್ಕಾರ ಅದನ್ನು 4 ಸಾವಿರ ರೂ. ಹೆಚ್ಚಿಸಿದೆ. ಈ ಹೆಚ್ಚಳದ ನಂತರ ಈಗ ವಾಚ್‌ ಮೆನ್‌ ಗಳಿಗೆ 11 ಸಾವಿರ ರೂ. ಗೌರವಧನ ಸಿಗಲಿದೆ. ಚೌಕಿದಾರರು ನವೆಂಬರ್ 1, 2023 ರಿಂದ ಹೆಚ್ಚಿದ ಗೌರವಧನವನ್ನು ಪಡೆಯುತ್ತಾರೆ. ಚೌಕಿದಾರರಿಗೆ ಈಗ ವರ್ಷಕ್ಕೆ 4,000 ರೂ. ಗಳ ಸಮವಸ್ತ್ರ ಭತ್ಯೆ ಮತ್ತು ಮೂರು ವರ್ಷಕ್ಕೆ 3,500 ರೂ. ಬೈ-ಸೈಕಲ್ ಭತ್ಯೆ ನೀಡಲಾಗುವುದು.

Salary Allowance Hike
Image Credit: NDTV

ಇದರ ಜೊತೆಗೆ ಐದು ವರ್ಷಗಳಿಗೊಮ್ಮೆ ಕಾವಲುಗಾರರು ಹೊಸ ಸೈಕಲ್‌ ಗಳನ್ನು ಪಡೆಯುತ್ತಾರೆ. ಸ್ಟಿಕ್ ಮತ್ತು ಬ್ಯಾಟರಿಗಳಿಗೆ ಪ್ರತಿ ವರ್ಷ 1000 ರೂ. ಪಡೆಯಬಹುದು. ಮರಣ ದಾಖಲಾತಿಗೆ ಮಾಸಿಕ 300 ರೂ. ಗಳ ಬದಲಿಗೆ 400 ರೂ.ಗಳನ್ನು ನೀಡಲಾಗುವುದು. ಗ್ರಾಮೀಣ ಚೌಕಿದಾರರಿಗೆ ನಿವೃತ್ತಿಯ ನಂತರ 2 ಲಕ್ಷ ರೂ. ನೀಡಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group