ಮಾಜಿ ಪತಿ ನಾಗಚೈತನ್ಯ ಬೇರೆ ನಟಿ ಜೊತೆ ತಿರುಗಿದ್ದಕ್ಕೆ ನಟಿ ಸಮಂತಾ ಹೇಳಿದ್ದೇನು ಗೊತ್ತಾ, ಬೇಕಿತ್ತಾ ಇದು.

ನಟಿ ಸಮಂತಾ ಮತ್ತು ನಟ ನಾಗಚೈತನ್ಯ ವಿಚ್ಛೇಧನವನ್ನ ಪಡೆದುಕೊಂಡು ಕೆಲವು ತಿಂಗಳುಗಳೇ ಕಳೆದಿದೆ, ಆದರೆ ಅಭಿಮಾನಿಗಳು ಮಾತ್ರ ಇನ್ನೂ ಕೂಡ ಅದರ ಕುರಿತು ಮಾತನಾಡುತ್ತಲೇ ಇದ್ದಾರೆ. ಇನ್ನು ಇದರ ನಡುವೆ ಸಮಂತಾ ಮತ್ತು ನಾಗಚೈತನ್ಯ ಕುರಿತಂತೆ ಹಲವು ಸುಲು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಇನ್ನು ನಟ ನಾಗಚೈತನ್ಯ ಎಲ್ಲಾ ಮರೆತು ಈಗ ಇನ್ನೊಬ್ಬ ಖ್ಯಾತ ನಟಿ ಅನಿಸಿಕೊಂಡಿರುವ ಶೋಭಿತ ಜೊತೆ ತಿರುಗಾಡುತ್ತಿದ್ದು ಇದನ್ನ ನೋಡಿದ ಅಭಿಮಾನಿಗಳು ಸಮಂತಾ ಅವರ ಹೆಸರನ್ನ ಎಳೆದು ಕಾಮೆಂಟ್ ಮಾಡುತ್ತಿದ್ದಾರೆ. ಹಲವು ದಿನಗಳಿಂದ ಈ ವಿಚಾರದಲ್ಲಿ ಸುಮ್ಮನೆ ಇರುವ ನಟಿ ಸಮಂತಾ ಅವರು ಮತ್ತೆ ಈಗ ನಾಗಚೈತನ್ಯ ವಿಷಯದಲ್ಲಿ ಅಭಿಮಾನಿಗಳಿಗೆ ತಿರುಗೇಟನ್ನ ನೀಡಿದ್ದಾರೆ. ಹಾಗಾದರೆ ನಟಿ ಸಮಂತಾ ಹೇಳಿದ್ದೇನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹೌದು ನಟಿ ಸಮಂತಾ ಅವರ ಮಾಜಿ ಪತಿ ನಾಗಚೈತನ್ಯ ಖ್ಯಾತ ನಟಿ ಶೋಭಿತ ಅವರ ಜೊತೆ ಸುತ್ತಾಡುತ್ತಿದ್ದು ಇಬ್ಬರು ಮದುವೆಯಾಗುತ್ತಾರೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ಈ ಸುದ್ದಿಯನ್ನ ನೋಡಿದ ಕೆಲವು ಅಭಿಮಾನಿಗಳು ಸಮಂತಾ ಅವರೇ ಈ ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ ಎಂದು ಆರೋಪವನ್ನ ಮಾಡಿದ್ದಾರೆ. ಇನ್ನು ಈ ವಿಷಯವಾಗಿ ಕೆಲವು ಸಮಯಗಳಿಂದ ಸುಮ್ಮನೆ ಇದ್ದ ನಟಿ ಸಮಂತಾ ಅವರು ಶೋಭಿತ ಮತ್ತು ನಾಗಚೈತನ್ಯ ಮದ್ಯೆ ತನ್ನನ್ನ ಎಳೆದವರಿಗೆ ಸಕತ್ ತಿರುಟಿಗೇಟು ನೀಡಿದ್ದಾರೆ.

Samanta angry fans

ಕೆಲವು ಅಭಿಮಾನಿಗಳಿಗೆ ತಿರುಗೇಟು ನೀಡಿರುವ ನಟಿ ಸಮಂತಾ ಅವರು, ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನು ಬಿಟ್ಟು ಮುಂದೆ ಸಾಗಿದ್ದಾರೆ, ನೀವೂ ಇದನ್ನು ಬಿಟ್ಟು ಮುಂದೆ ಸಾಗಿ ಮತ್ತು ನಿಮ್ಮ ಕೆಲಸ ನೋಡಿಕೊಳ್ಳಿ, ನಿಮ್ಮ ಕುಟುಂಬದ ಕಡೆ ಗಮನ ನೀಡಿ ಎಂದು ಟೀಕಾಕಾರರಿಗೆ ಸಮಂತಾ ತಿರುಗೇಟು ನೀಡಿದ್ದಾರೆ.

ನಟಿ ಶೋಭಿತ ಮತ್ತು ನಾಗಚೈತನ್ಯ ನಡುವೆ ಭಾಂದವ್ಯ ಬಹಳ ಚನ್ನಾಗಿದೆ ಮತ್ತು ಅವರು ಒಂದೇ ಕಾರಿನಲ್ಲಿ ಕೆಲವು ದಿನಗಳಿಂದ ತಿರುಗಾಡುತ್ತಿರುವುದನ್ನ ಮತ್ತು ಕೆಲವು ಪಾರ್ಟಿಯಲ್ಲಿ ನಾಗಚೈತನ್ಯ ಜೊತೆ ಶೋಭಿತ ಅವರನ್ನ ನೋಡಿದ ಅಭಿಮಾನಿಗಳು ಇವರಿಬ್ಬರ ನಡುವೆ ಏನೋ ಇದೆ ಎಂದು ಹೇಳುತ್ತಿದ್ದಾರೆ. ಯಾವ ವಿಚಾರವಾಗಿ ಇಬ್ಬರು ಒಟ್ಟಿಗೆ ತಿರುಗುತ್ತಿದ್ದಾರೆ ಅನ್ನುವುದು ಇಲ್ಲಿಯತನಕ ಸರಿಯಾಗಿ ತಿಳಿದುಬಂದಿಲ್ಲ. ಸದ್ಯ ಇದರ ವಿಚಾರವಾಗಿ ತನ್ನಮೇಲೆ ಆರೋಪ ಮಾಡಿದ ಕೆಲವು ಜನರಿಗೆ ನಟಿ ಸಮಂತಾ ತಿರುಗೇಟು ಕೊಟ್ಟಿದ್ದು ಸದ್ಯ ಈ ಸುದ್ದಿ ಸಕತ್ ವೈರಲ್ ಆಗಿದೆ.

Join Nadunudi News WhatsApp Group

Samanta angry fans

Join Nadunudi News WhatsApp Group