Samantha Devotion: ಪ್ರತಿನಿತ್ಯ ಸಮಂತಾ ಪೂಜೆ ಮಾಡುವ ಈ ದೇವರು ಯಾವುದು, ಸಾಕಷ್ಟು ಜನರಿಗೆ ತಿಳಿದಿಲ್ಲ ಈ ದೇವರ ಮಹಿಮೆ.

ನಟಿ ಸಮಂತಾ ರುತ್ ಪ್ರಭು ಪ್ರತಿನಿತ್ಯ ಪೂಜೆ ಮಾಡುವ ದೇವರು ಯಾವುದು ಅನ್ನುವುದರ ಬಗ್ಗೆ ಈಗ ಸುದ್ದಿ ವೈರಲ್ ಆಗಿದೆ.

Actress Samantha Ruth Prabhu Devotion: ಟಾಲಿವುಡ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ತಮ್ಮ ಹೊಸ ಹೊಸ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಸಮಂತಾ ಅವರು ಈ ಹಿಂದೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಚೇತರಿಸಿಕೊಂಡಿದ್ದಾರೆ. ಮತ್ತೆ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ.

ಸಮಂತಾ ಅವರ ವೈವಾಹಿಕ ಜೀವನದಲ್ಲಿ ಕಳೆದ ವರ್ಷ ಬಿರುಕು ಉಂಟಾಗಿ ಮದುವೆಯ ಸಂಬಂಧದಿಂದ ಹೊರನಡೆದಿದ್ದರು.

Samantha is a worshiper of Linga Bhairavi Devi
Image Credit: sumantv

ಈ ವೇಳೆ ನಟಿ ದೈಹಿಕ , ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇನ್ನು ನಟಿ ತಮ್ಮ ಕಷ್ಟದ ಸಮಯದಲ್ಲಿ ದೇವಿಯ ಆರಾಧನೆಯಲ್ಲಿ ಸಮಯ ಕಳೆಯುತ್ತಿದ್ದರು.ಇದೀಗ ನಟಿ ಸಮಂತಾ ರುತ್ ಪ್ರಭು ಅವರು ನಂಬಿದ ದೇವಿ ಯಾರು ಹಾಗೆಯೆ ಆ ದೇವಿಯ ಮಹಿಮೆಯ ಬಗ್ಗೆ ಮಾಹಿತಿ ತಿಳಿಯೋಣ.

ಲಿಂಗ ಭೈರವಿ ದೇವಿಯ ಆರಾಧಕಿ ಸಮಂತಾ
ನಟಿ ಸಮಂತಾ ಲಿಂಗ ಭೈರವಿ (Linga Bhairavi) ದೇವಿಯನ್ನು ಆರಾಧಿಸುತ್ತಾರೆ. ದೇವಿಯ ಮೇಲೆ ನಟಿ ಪವಿತ್ರ ಭಕ್ತಿಯನ್ನು ಹೊಂದಿದ್ದಾರೆ. ಇನ್ನು ತಮ್ಮ ಮನೆಯಲ್ಲಿ ಲಿಂಗ ಭೈರವಿ ದೇವಿಯ ಸಣ್ಣ ಗೂಡು ಕಟ್ಟಿ ಪ್ರತಿನಿತ್ಯ ದೇವರ ಮುಂದೆ ನಟಿ ದ್ಯಾನಕೆ ಕೂರುತ್ತಾರೆ.

 Actress Samantha Ruth Prabhu Latest News
Image Credit: gulte

ಇನ್ನು ನಟಿ ಸಮಂತಾ ಅವರು ದೇವಿಯ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ದೇವಿಯ ಆರಾಧನೆಯಿಂದ ತಮ್ಮ ವೈಯಕ್ತಿಕ ತೊಂದರೆಗಳಿಂದ ದೂರ ಆಗಿದ್ದೇನೆ ಎಂದು ನಟಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group

ಲಿಂಗ ಭೈರವಿ ದೇವಿಯ ಮಹಿಮೆ
ಕೊಯಂಬತ್ತೂರಿನ ವೆಲ್ಲಿಯಂಗಿರಿ ತಪ್ಪಲಿನಲ್ಲಿ ಲಿಂಗ ಭೈರವಿಯ ಗುಡಿ ಇದೆ. ದೈವಿಕ ಸ್ತ್ರೀತತ್ವವನ್ನು ಲಿಂಗದ ರೂಪದಲ್ಲಿ ಪೂಜಿಸುವುದೇ ಲಿಂಗ ಭೈರವಿಯ ಆರಾಧನೆಯ ಉದ್ದೇಶವಾಗಿದೆ.

ಲಿಂಗದ ರೂಪದ್ಲಲಿರುವ ಏಕೈಕ ದೇವಿಯಾಗಿದ್ದಾರೆ. ಇನ್ನು ಏಕಕಾಲದಲ್ಲಿ ಉಗ್ರ ರೂಪವನ್ನು ಹಾಗೆಯೆ ಕರುಣಾಮಯಿ ರೂಪವನ್ನು ಹೊಂದುವ ಶಕ್ತಿ ಲಿಂಗ ಭೈರವೈಯಲ್ಲಿದೆ. ನಟಿ ಸಮಂತಾ ಅವರ ಜೊತೆಗೆ ನಟಿ ತಮನ್ನಾ ಕೂಡ ಈ ದೇವಿಯ ಭಕ್ತೆಯಾಗಿದ್ದಾರೆ.

Join Nadunudi News WhatsApp Group