Samantha Eye: ಲೈಟ್ ಬೆಳಕಿಗೆ ಕಣ್ಣು ನೋವಿನಿಂದ ಒದ್ದಾಡಿದ ನಟಿ ಸಮಂತಾ, ವಿಡಿಯೋ ವೈರಲ್ ಆಗಿದೆ.

ಫ್ಲಾಶ್ ಲೈಟ್ ಗೆ ಕಣ್ಣು ಬಿಡಲು ಕಷ್ಟಪಟ್ಟ ನಟಿ ಸಮಂತಾ, ಕಣ್ಣು ಸಮಸ್ಯೆ ಉಂಟಾಗಿದೆ ಎಂದು ಅನುಮಾನ ಹೊರಹಾಕಿದ ಅಭಿಮಾನಿಗಳು.

Samantha Ruth Prabhu Health: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇನ್ನು ನಟಿ ಸಮಂತಾ ಹಲವು ತಿಂಗಳಿಂದ ಮಯೋಸಿಟೀಸ್ (Myositis)ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಇದೀಗ ಚೇತರಿಸಿಕೊಂಡು ಅವರು ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿರುವುದು ಎಲ್ಲರಿಗೂ ತಿಳಿದೇ ಇದೆ. ನಟಿ ಸಮಂತಾ ಮಯೋಸಿಟೀಸ್ ಎಂಬ ಕಾಯಿಲೆಗೆ ಒಳಪಟ್ಟು ಈಗಲೂ ಸಹ ಅವರು ಇದರಿಂದ ಹೆದರುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.

Samantha Ruth Prabhu Health
Image Source: Prokerala

ಫ್ಲ್ಯಾಶ್ ಲೈಟ್ ನಿಂದ ಕಣ್ಣು ಮಿಟುಕಿಸಲಾಗದೆ ಒದ್ದಾಡಿದ ನಟಿ ಸಮಂತಾ
ನಟಿ ಸಮಂತಾ ವೈಟ್ ಕಲರ್ ಡ್ರೆಸ್ ಧರಿಸಿದ್ದು ನಿನ್ನೆ ಸಂಜೆ ಮುಂಬೈನಲ್ಲಿ ಶಟರ್ ಬಗ್ ಗಳ ಕ್ಯಾಮೆರಾಗಳಿಂದ ಪದೇ ಪದೇ ಫ್ಲಾಶ್ ಗಳಿಂದ ಕಣ್ಣು ತೆರೆಯಲು ಮತ್ತು ಮುಂದೆ ನಡೆಯಲು ಕಷ್ಟಪಟ್ಟಿದ್ದಾರೆ. ನಟಿ ಸಮಂತಾ ಅವರಿಗೆ ಫ್ಲಾಶ್ ಲೈಟುಗಳಿಂದ ಸರಿಯಾಗಿ ಪೋಸ್ ನೀಡಲು ಸಾಧ್ಯವಾಗದೆ ಕ್ಷಮೆಯಾಚಿಸಿ ಹೋಗಿದ್ದಾರೆ.

ನಟಿ ಮಯೋಸಿಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಚಿಕೆತ್ಸೆ ಪಡೆದು ಸಮಂತಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಕಣ್ಣುಗಳಿಗೆ ಫ್ಲಾಶ್ ಲೈಟ್ ಬಿದ್ದರೆ ಆಗಲ್ಲ ಅಂತೇ.

Samantha Ruth Prabhu Health
Image Source: India Today

ನಟಿ ಸಮಂತಾ ಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು
ಸಮಂತಾ ಅವರು ಬಿಳಿ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿದ ಫೋಟೋ ನೋಡಿ ಅಭಿಮಾನಿಗಳು ಗಾಬರಿಗೊಂಡಿದ್ದಾರೆ. ಏಕೆಂದರೆ ಅವರು ಸಮಂತಾ ಫ್ಲ್ಯಾಶ್ ಲೈಟ್ ಗೆ ಕಣ್ಣು ಮಿಟುಕಿಸಲಾಗದ ಫೋಟೋ ನೋಡಿ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

ಸಮಂತಾ ಅವರಿಗೆ ಮಯೋಸಿಟೀಸ್ ಎಂಬ ಕಾಯಿಲೆ ಇದೆ. ಫ್ಲ್ಯಾಶ್ ಲೈಟ್ ಅನ್ನು ಆಫ್ ಮಾಡಬೇಕಿತ್ತು. ಅವರಿಗೆ ಫ್ಲ್ಯಾಶ್ ಲೈಟ್ ಅನ್ನು ನಿಭಾಯಿಸಲು ಆಗುವುದಿಲ್ಲ. ನಿಜವಾಗಲೂ ಬೇಸರವಾಗುತ್ತಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

Samantha Ruth Prabhu Health
Image Source: Times of india

Join Nadunudi News WhatsApp Group