Samantha Health: ಸಮಂತಾ ಆರೋಗ್ಯದಲ್ಲಿ ಮತ್ತೆ ಏರುಪೇರು, ಭಯಪಡುವ ಅಗತ್ಯ ಇಲ್ಲ ಅಂದ ನಟಿ.

ನಟಿ ಸಮಂತಾ ಅವರಿಗೆ ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿದ್ದು ಅಭಿಮಾನಿಗಳು ಆತಂಕವನ್ನ ವ್ಯಕ್ತಪಡಿಸಿದ್ದಾರೆ.

Samantha Ruth Prabhu Health Condition: ತೆಲುಗು ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಇದೀಗ ಸುದ್ದಿಯಲ್ಲಿದ್ದಾರೆ. ನಟಿ ಸಮಂತಾ ರುತ್ ಪ್ರಭು ಹಲವು ತಿಂಗಳಿಂದ ಮಯೋಸಿಟೀಸ್ ಎಂಬ ಕಾಯಿಲೆಗೆ ತುತ್ತಾಗಿದ್ದು, ಇದೀಗ ಚೇತರಿಸಿಕೊಂಡು ಖುಷಿ ಸಿನಿಮಾದ ಶೂಟಿಂಗ್ ನಲ್ಲಿ ಸಹ ಭಾಗವಹಿಸಿ ಅದನ್ನು ಮುಗಿಸಿದ್ದಾರೆ.

Actress Samantha said that there is no need to panic as her health has deteriorated again.
Image Credit: filmfare

ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ (Naga Chaitanya)ಜೊತೆಗಿನ ವಿಚ್ಛೇಧನದ ನಂತರ ಸ್ಟ್ರಾಂಗ್ ಆಗಿದ್ದಾರೆ. ನಟಿ ಸಮಂತಾ ರುತ್ ಪ್ರಭು ಅವರು ಶಾಕುಂತಲಂ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನಟಿ ಸಮಂತಾ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

Image Credit: hindustantimes

ಮತ್ತೆ ಅನಾರೋಗ್ಯಕ್ಕೆ ತುತ್ತಾದ ನಟಿ ಸಮಂತಾ
ಖ್ಯಾತ ನಟಿ ಸಮಂತಾ ಅವರಿಗೆ ಜ್ವರ ಬಂದಿದ್ದು, ನಾನು ಧ್ವನಿಯನ್ನು ಸಹ ಕಳೆದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ತಮ್ಮ ಆರೋಗ್ಯ ಚೆನ್ನಾಗಿ ಇಲ್ಲ ಎಂದು ತಿಳಿಸಿದ್ದಾರೆ.

ಆನಾರೋಗ್ಯ ಕಾರಣದಿಂದಾಗಿಯೇ ಹೈದರಾಬಾದ್ ಕಾಲೇಜಿನಲ್ಲಿ ನಿಗದಿಯಾಗಿರುವ ಪ್ರಮೋಷನ್ ಇವೆಂಟ್ ನಲ್ಲಿ ಭಾಗವಹಿಸುತ್ತಿಲ್ಲ ಎಂದು ನಟಿ ತಿಳಿಸಿದ್ದಾರೆ. ನಟಿ ಸಮಂತಾ ಅನಾರೋಗ್ಯದ ಸುದ್ದಿ ಕೇಳಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

ಆತಂಕದಲ್ಲಿರುವ ಸಮಂತಾ ಅಭಿಮಾನಿಗಳು
ನಾನು ನನ್ನ ಶಾಕುಂತಲಂ ಸಿನಿಮಾದ ಬಿಡುಗಡೆಯ ಖುಷಿಯಲ್ಲಿದ್ದೇನೆ. ಆದರೆ ವೀಪರೀತ ಜ್ವರದಿಂದ ಕೆಲಸಗಳಿಗೆ ಬ್ರೇಕ್ ತೆಗೆದುಕೊಳ್ಳುವಂತೆ ಆಗಿದೆ. ನಾನು ಜ್ವರದಿಂದ ಮಲಗಿದ್ದೇನೆ. ನನ್ನ ಧ್ವನಿಯನ್ನು ಕಳೆದುಕೊಂಡಿದ್ದೇನೆ ಎಂದು ನಟಿ ಸಮಂತಾ ತಿಳಿಸಿದ್ದಾರೆ. ನಿಮ್ಮೆಲ್ಲರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ನಟಿ ಸಮಂತಾ ಅಭಿಮಾನಿಗಳು ಅನಾರೋಗ್ಯದ ಸುದ್ದಿ ಕೇಳುತ್ತಿದ್ದಂತೆಯೇ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Join Nadunudi News WhatsApp Group