Galaxy: ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್.

ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಖರೀದಿಯ ಮೇಲೆ 13 % ರಿಯಾಯಿತಿ.

Samsung Galaxy A34 5G Smart Phone: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳ ಮೇಲೆ ಒಲವು ತೋರುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಫೋನ್ ಗಳು ಹೆಚ್ಚು ಹೆಚ್ಚು ಬಿಡುಗಡೆ ಗೊಳ್ಳುತ್ತಿವೆ.

ಜನಪ್ರಿಯ ಮೊಬೈಲ್ ಕಂಪನಿ ಆಗಿರುವ ಸ್ಯಾಮ್ ಸಂಗ್ ವಿಭಿನ್ನ ಶ್ರೇಣಿಯ ಮೊಬೈಲ್ ಗಳ ಜನರ ಗಮನ ಸೆಳೆಯುತ್ತಿದೆ. ಇದೀಗ ನಾವು ಇತ್ತೀಚೆಗಷ್ಟೇ ಬಿಡುಗಡೆಗೊಂಡ ಸ್ಯಾಮ್ ಸಂಗ್ ಗ್ಯಾಲಕ್ಸಿ A 34 5G ಫೋನ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

13% discount on purchase of Samsung Galaxy smartphone.
Image Credit: Hindustantimes

ಸ್ಯಾಮ್ ಸಂಗ್ ಗ್ಯಾಲಕ್ಸಿ A 34 5G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ
ಹೌದು ಇದೀಗ ಸ್ಯಾಮ್ ಸಂಗ್ ಗ್ಯಾಲಕ್ಸಿ A 34 5G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ ಘೋಷಣೆಯಾಗಿದೆ. ಅಮೆಜಾನ್ ಪ್ಲಾಟ್ ಫಾರ್ಮ್ ನಲ್ಲಿ ಗ್ಯಾಲಕ್ಸಿ A 34 5G ಸ್ಮಾರ್ಟ್ ಫೋನ್ 13 % ರಿಯಾಯಿತಿಯಲ್ಲಿ ಖರೀದಿಗೆ ಸಿಗುತ್ತಿದೆ. ಗ್ರಾಹಕರು ಈ ಸ್ಮಾರ್ಟ್ ಫೋನ್ ಅನ್ನು ಅಮೆಜಾನ್ ನಲ್ಲಿ 30999 ರೂಪಾಯಿಗೆ ಖರೀದಿಸಬಹುದಾಗಿದೆ. ಹಾಗೆ ಸ್ಯಾಮ್ ಸಂಗ್ A 34 5G ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಕೆಲವು ಬ್ಯಾಂಕ್ ಗಳು ಡಿಸ್ಕೌಂಟ್ ನೀಡಲಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ A 34 5G ಸ್ಮಾರ್ಟ್ ಫೋನ್ ಡಿಸ್ ಪ್ಲೇ
ಸ್ಯಾಮ್ ಸಂಗ್ A 34 5G ಫೋನ್ 1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯದ 6 .6 ಇಂಚಿನ ಹೆಚ್ ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್ ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್ ಪ್ಲೇ 120 Hz ರಿಫ್ರೆಶ್ ರೇಟ್ ಹೊಂದಿದ್ದು, 1000 nits ಬ್ರೈಟ್ನೆಸ್ ಸಾಮರ್ಥ್ಯ ವನ್ನು ಸಹ ಪಡೆದಿದೆ. ಸ್ಯಾಮ್ ಸಂಗ್ A 34 5G ಪ್ರೊಸೆಸರ್ ಬಗ್ಗೆ ಹೇಳುದಾದರೆ ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಮಾಲಿ -G68 MC4 GPU ಸಪೋರ್ಟ್ ಅನ್ನು ಪಡೆದಿದೆ.

Huge discount on Samsung Galaxy A 34 5G smartphone
Image Credit: Fonearena

ಗ್ಯಾಲಕ್ಸಿ A 34 5G ಫೋನ್ ಕ್ಯಾಮರಾ ಸ್ಪೆಷಲ್
ಸ್ಯಾಮ್ ಸಂಗ್ ಗ್ಯಾಲಕ್ಸಿ A 34 5G ಸ್ಮಾರ್ಟ್ ಫೋನ್ ತ್ರಿವಳಿ ಕ್ಯಾಮರಾ ರಚನೆಯನ್ನು ಹೊಂದಿದೆ. ಪ್ರಾಥಮಿಕ ಕ್ಯಾಮರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ದ್ವಿತೀಯ ಕ್ಯಾಮರಾ 8 ಮೆಗಾಪಿಕ್ಸೆಲ್ ಹಾಗೂ ಮೂರನೇ ಕ್ಯಾಮರಾವು 5 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿವೆ. ಹಾಗೆ ಸೆಲ್ಫಿ ಕ್ಯಾಮರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ.

ಸ್ಯಾಮ್ ಸಂಗ್ A 34 5G ಫೋನ್ ಬ್ಯಾಟರಿ ಬ್ಯಾಕ್ ಅಪ್
ಸ್ಯಾಮ್ ಸಂಗ್ ಗ್ಯಾಲಕ್ಸಿ A 34 5G ಸ್ಮಾರ್ಟ್ ಫೋನ್ 5000 mAh ಬ್ಯಾಟರಿ ಸಾಮರ್ಥ್ಯ ವನ್ನು ಪಡೆದಿದೆ. ಇದ್ದಕೆ ಪೂರಕವಾಗಿ 25W ಪಾಸ್ಟ್ ಚಾರ್ಜಿಂಗ್ ಸೌಲಭ್ಯ ವನ್ನು ಸಹ ಹೊಂದಿದೆ. ಯುಯಸ್ ಬಿ ಟೈಪ್-ಸಿ ಸ್ಟಿರಿಯೊ ಸ್ಪೀಕರ್ ಗಳು ಡಾಲ್ಬಿ ಅಟ್ಮಾರ್ಸ್ ಆಯ್ಕೆ ಗಳನ್ನೂ ಹೊಂದಿದೆ. ಹಾಗೆ ಧೂಳು ಮತ್ತು ನಿರೋಧಕ ಸೌಲಭ್ಯವನ್ನು ಸಹ ಪಡೆದಿದೆ. ಬ್ಲೂ ಟೂತ್ 5 .2 ,ಏನ್ಎಫ್ ಸಿ ಆಯ್ಕೆ ಯನ್ನು ಸಹ ಪಡೆದಿದೆ.

Join Nadunudi News WhatsApp Group

13% discount on purchase of Samsung Galaxy smartphone.
Image Credit: Sammobile

ಇನ್ನು ಈ ಸ್ಮಾರ್ಟ್ ಫೋನ್ ನ ಮೆಮೊರಿ ಹಾಗೂ ಕಲರ್ ಆಯ್ಕೆ ಬಗ್ಗೆ ಹೇಳುದಾದರೆ 8 GB + 128 GB ಮತ್ತು 8 GB + 256 GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಗ್ಯಾಲಕ್ಸಿ A 34 5G ಸ್ಮಾರ್ಟ್ ಫೋನ್ ಲೈಮ್, ಗ್ರಾಫೈಟ್, ಹಾಗೂ ಸಿಲ್ವರ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Join Nadunudi News WhatsApp Group