Sanchar Saathi: ಸರ್ಕಾರವೇ ಹುಡುಕಿಕೊಡಲಿದೆ ಮೊಬೈಲ್, ಮೊಬೈಲ್ ಕಳೆದುಹೋದರೆ ಭಯಪಡುವ ಅಗತ್ಯ ಇಲ್ಲ.

ಇನ್ನುಮುಂದೆ ಮೊಬೈಲ್ ಕಳೆದುಹೋದರೆ ಸಂಚಾರ ಸಾಥಿ ಪೋರ್ಟಲ್ ಮೂಲಕ ಹುಡುಕಿಕೊಡಲಾಗುವುದು.

Sanchar Saathi Portal: ಸಾಮಾನ್ಯವಾಗಿ ಹೆಚ್ಚಿನ ಜನರು ಸ್ಮಾರ್ಟ್ ಫೋನ್ (Smart Phone) ಗಳನ್ನೂ ಬಳಸುತ್ತಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಇದೆ. ಇನ್ನು ಮೊಬೈಲ್ ನಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಬೆಳಕಿಗೆ ಬರುತ್ತಿದೆ. ಇದೀಗ ನಿಮ್ಮ ಸ್ಮಾರ್ಟ್ ಫೋನ್ ಅನ್ನು ನೀವು ಕಳೆದುಕೊಂಡರೆ ಅದನ್ನು ಹೇಗೆ ಮರಳಿ ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Sanchar Saathi Portal
Image Source: India Today

ಸ್ಮಾರ್ಟ್ ಫೋನ್ ಕಳೆದುಹೋದರೆ ಮರಳಿ ಪಡೆಯುವುದು ಹೇಗೆ
ದೇಶದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಂತೂ ಮೊಬೈಲ್ ಫೋನ್ ಅಗತ್ಯದ ವಸ್ತುವಾಗಿದೆ. ಇನ್ನು ಮೊಬೈಲ್ ಫೋನ್ ಗಳಲ್ಲಿ ವ್ಯಕ್ತಿಯ ವೈಯಕ್ತಿಕ ದಾಖಲೆಗಳ ವಿವರ ಕೂಡ ಇರುತ್ತದೆ. ಬ್ಯಾಂಕ್ ವಿವರ, ಎಟಿಎಂ ಪಾಸ್ ವಾರ್ಡ್ ಸೇರಿದಂತೆ ಇನ್ನಿತರ ಮುಖ್ಯ ಮಾಹಿತಿಗಳು ಮೊಬೈಲ್ ಫೋನ್ ನಲ್ಲಿ ಇರುತ್ತದೆ.

ಒಂದು ವೇಳೆ ನಿಮ್ಮಾ ಸ್ಮಾರ್ಟ್ ಫೋನ್ ಕಳೆದು ಹೋದರೆ ಅದರಿಂದ ನಿಮಗೆ ತುಂಬಾ ನಷ್ಟವಾಗಲಿದೆ. ಆದರೆ ಇನ್ನುಮುಂದೆ ನೀವು ಸ್ಮಾರ್ಟ್ ಫೋನ್ ಕಳೆದುಹೋದರೆ ಚಿಂತಿಸುವ ಅಗತ್ಯವಿಲ್ಲ. ಸರ್ಕಾರ ಇದೀಗ ಸ್ಮಾರ್ಟ್ ಫೋನ್ ಅನ್ನು ಹುಡುಕಿಸಲು ಹೊಸ ತಂತ್ರಜ್ಞವನ್ನು ಕಂಡುಹಿಡಿದಿದೆ. ಸ್ಮಾರ್ಟ್ ಫೋನ್ ಅನ್ನು ಹುಡುಕಿಕೊಡಲು ಸರಕಾರ ನಿಮಗೆ ಸಹಾಯಮಾಡಲಿದೆ.

Sanchar Saathi Portal
Image Source: Kannada News

ಸಂಚಾರ ಸಾಥಿ ಪೋರ್ಟಲ್ (Sanchar Saathi Portal) 
ಇದೀಗ ಸರ್ಕಾರ ಜನರ ಮೊಬೈಲ್ ಫೋನ್ ಗಳ ಕಳ್ಳತನಕ್ಕೆ ಪಾರಿಹಾರ ಕಂಡುಹಿಡಿದಿದೆ. ಜನರ ಕಳ್ಳತನವಾದ ವಸ್ತುಗಳನ್ನು ಹುಡುಕಿಕೊಡುವುದು ಸರ್ಕಾರದ ಉದ್ದೇಶವಾಗಿದೆ. ಮೇ 17 ರಿಂದ ಜನರಿಗೆ ಈ ಸೇವೆ ಲಭ್ಯವಾಗಲಿದೆ. ಮೇ 17 ವಿಶ್ವ ಟೆಲಿಕಾಂ ದಿನವಾಗಿದ್ದು ಅಂದು ಸಂಚಾರ ಸಾಥಿ ಅನಾವರಣಗೊಳ್ಳಲಿದೆ. ಇದರ ಅಡಿಯಲ್ಲಿ ಬಳಕೆದಾರರು ತಮ್ಮ ಫೋನ್ ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಹಾಗೂ ಫೋನ್ ಅನ್ನು ಸ್ವಿಚ್ ಆಫ್ ಮಾಡಬಹುದು.

Sanchar Saathi Portal
Image Source: India Today

Join Nadunudi News WhatsApp Group

Join Nadunudi News WhatsApp Group