Sandalwood Cultivation: ಸರ್ಕಾರದ ಸಹಾಯದಿಂದ ಆರಂಭಿಸಿ ಶ್ರೀಗಂಧ ಮರದ ಕೃಷಿ, ಪ್ರತಿ ತಿಂಗಳು ಕೋಟಿ ಕೋಟಿ ಆದಾಯ.

ಸರ್ಕಾರದ ಸಹಾಯದಿಂದ ಪ್ರಾರಂಭಿಸಿ ಶ್ರೀಗಂಧ ಮರದ ಕೃಷಿ.

Sandalwood Cultivation Business Tip: ಯಾರೇ ಆಗಲಿ ಸ್ವಂತ ವ್ಯವಹಾರದ ಕನಸು ಕಾಣುವುದು ಸಹಜ. ಸ್ವಂತವಾಗಿ ವ್ಯವಹಾರವನ್ನು ಪ್ರಾರಂಭಿಸಲು ಸಾಕಷ್ಟು ಆಯ್ಕೆಗಳಿರುತ್ತದೆ. ನಾವು ಯಾವ ವ್ಯವಹಾರವನ್ನು ಆಯ್ಕೆ ಮಾಡಿಕೊಳ್ಳುತ್ತೀವಿ ಎನ್ನುವುದರ ಮೇಲೆ ವ್ಯಾಪಾರದ ಲಾಭ ಅವಲಂಬಿಸಿರುತ್ತದೆ.

ಸ್ವಂತ ವ್ಯಾಪಾರಕ್ಕೆ ಕೃಷಿ ಒಂದು ರೀತಿಯ ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಕೃಷಿಯಲ್ಲಿ ಅನೇಕ ರೀತಿಯ ಕೃಷಿಗಳಿರುತ್ತವೆ. ಎಲ್ಲಾ ಕೃಷಿಯ ಮೂಲವು ಕೂಡ ಒಂದು ರೀತಿಯಲ್ಲಿ ಉತ್ತಮ ಆದಾಯವನ್ನು ನೀಡುತ್ತದೆ. ಇದೀಗ ಸಣ್ಣ ಭೂಮಿಯಲ್ಲಿ ಪ್ರಾರಂಭಿಸಬಹುದಾದ ಗಂಧದ ಮರದ ಕೃಷಿಯ (Sandalwood Cultivation) ಬಗ್ಗೆ ಒಂದಿಷ್ಟು ವಿವರಣೆಯನ್ನು ತಿಳಿಯೋಣ.

Sandalwood Cultivation business tips
Image Credit: bhuviassociates

ಸರ್ಕಾರದ ಸಹಾಯದಿಂದ ಪ್ರಾರಂಭಿಸಿ ಶ್ರೀಗಂಧ ಮರದ ಕೃಷಿ
ಶ್ರೀಗಂಧದ ಮರವನ್ನು ನೆಟ್ಟರೆ ನೀವು ಸರ್ಕಾರದ ಸಹಾಯದಿಂದಲೇ ಸಾಕಷ್ಟು ಹಣವನ್ನು ಗಳಿಸಿಕೊಳ್ಳಬಹುದು. ಸರ್ಕಾರ ನಿಮಗೆ ಶ್ರೀಗಂಧದ ಮರದ ವ್ಯಾಪಾರಕ್ಕೆ ಹೇಗೆ ಸಹಾಯ ಮಾಡುತ್ತದೆ ಎನ್ನುವ ಬಗ್ಗೆ ವಿವರಣೆ ಇಲ್ಲಿದೆ. ಇನ್ನು ಕಾನೂನು 2017 ರಲ್ಲಿಯೇ ಶ್ರೀಗಂಧದ ಮರದ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಆದರೂ ಕೂಡ ನೀವು ಸರ್ಕಾರದ ಅನುಮತಿಯ ಮೇರೆಗೆ ಶ್ರೀಗಂಧದ ಮರಗಳನ್ನು ನೆಟ್ಟು ಮಾರಾಟ ಮಾಡಬಹುದು. ನೀವು ಶ್ರೀಗಂಧದ ಮರಗಳನ್ನು ಅರಣ್ಯ ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲು ಅವಕಾಶ ಇರುತ್ತದೆ. ಅರಣ್ಯ ಅಧಿಕಾರಿಗಳು ನಿಮ್ಮಿಂದ ಮರಗಳನ್ನು ಖರೀದಿಸಿ ಅದಕ್ಕೆ ಹಣವನ್ನು ನೀಡುತ್ತಾರೆ.

ಶ್ರೀಗಂಧದ ಮರಗಳನ್ನು ಬೆಳೆಸುವ ವಿಧಾನ ಹೇಗೆ..?
ನೀವು ಶ್ರೀಗಂಧದ ಮರಗಳನ್ನು ಸಾವಯವ ಕೃಷಿ ಅಥವಾ ಸಾಂಪ್ರದಾಯಿಕ ಕೃಷಿಯ ವಿಧಾನದ ಮೂಲಕ ಬೆಳಸಬಹುದು. ಈ ಎರಡು ವಿಧಾನಗಳಿಂದ ಕೂಡ ಶ್ರೀಗಂಧದ ಮರದ ಕೃಷಿ ಸಾಧ್ಯ. ಸಾವಯವ ವಿಧಾನದ ಮೂಲಕ ಶ್ರೀಗಂಧದ ಮರಗಳನ್ನು ಬೆಳೆಸಲು ಸುಮಾರು 10 ರಿಂದ 15 ವರ್ಷಗಳು ಬೇಕಾಗುತ್ತದೆ ಮತ್ತು ಸಾಂಪ್ರದಾಯಿಕ ವಿಧಾನದ ಮೂಲಕ ಮರವನ್ನು ಬೆಳೆಸಲು ಸುಮಾರು 20 ರಿಂದ 25 ವರ್ಷಗಳು ಬೇಕಾಗುತ್ತದೆ.

Join Nadunudi News WhatsApp Group

Sandalwood Cultivation business profit
Image Credit: indiamart

ಮೊದಲ 8 ವರ್ಷಗಳ ವರೆಗೆ ಯಾವುದೇ ಬಾಹ್ಯ ರಕ್ಷಣೆ ಅಗತ್ಯವಿಲ್ಲ. ಅದರ ನಂತರ ವಾಸನೆ ಪ್ರಾರಂಭವಾಗುತ್ತದೆ. ಮರಗಳನ್ನು ಮರಳು ಮತ್ತು ಹಿಮಭರಿತ ಪ್ರದೇಶಗಳನ್ನು ಹೊರತುಪಡಿಸಿ ಎಲ್ಲೆಡೆ ಬೆಳೆಸಬಹುದು.

ಶ್ರೀಗಂಧದ ಕೃಷಿಯಿಂದ ಗಳಿಸಬಹುದು ಲಕ್ಷ ಲಕ್ಷ ಆದಾಯ
ನೀವು ಕೇವಲ 5 ರಿಂದ 10 ಮರಗಳನ್ನು ನೆಟ್ಟರೆ ನೀವು ಒಂದು ವರ್ಷದಲ್ಲಿ ದೊಡ್ಡ ಆದಾಯವನ್ನು ಗಳಿಸಬಹುದು. ಇನ್ನು ಸರಿಸುಮಾರು 100 ಶ್ರೀಗಂಧದ ಮರವನ್ನು ಬೆಳಸಿ ಅದನ್ನು ಮಾರಾಟ ಮಾಡಿದರೆ, ಹೆಚ್ಚು ಕಡಿಮೆ 5 ಕೋಟಿ ರೂ. ಗಳನ್ನೂ ಗಳಿಸುವ ಅವಕಾಶ ಇರುತ್ತದೆ. ಇನ್ನು 2 ರಿಂದ 2 .5 ವರ್ಷದ ಶ್ರೀಗಂಧದ ಗಿಡ 150 ರಿಂದ 200 ರೂ. ಮೌಲ್ಯವನ್ನು ಹೊಂದಿರುತ್ತದೆ. ನೀವು ಕಡಿಮೆ ಖರ್ಚಿನ ವ್ಯವಹಾರವನ್ನು ಹುಡುಕುತ್ತಿದ್ದರೆ ಈ ಶ್ರೀಗಂಧದ ಮರದ ವ್ಯಾಪಾರ ನಮಗೆ ಉತ್ತಮ ಆಯ್ಕೆ ಎನ್ನಬಹುದು.

Join Nadunudi News WhatsApp Group