Sania Mirza: ಶೀಘ್ರದಲ್ಲಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆ, ವೈರಲ್ ಆಗಿದೆ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆಯ ವಿಷಯ

Sania Mirza And Mohammed Shami Marriage: ಭಾರತದ ಟೆನ್ನಿಸ್​ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಟೆನ್ನಿಸ್ ನಲ್ಲಿ ಅನೇಕ ಸಾಧನೆ ಮಾಡಿದ ಈಕೆ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.

ಸಾನಿಯಾ ಮಿರ್ಜಾ ಅವರು ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದವರಾಗಿದ್ದಾರೆ. ಸಾನಿಯಾ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​ ಮಲಿಕ್​ರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಈ ವಿಚಾರವಾಗಿ ಹಲವು ಟೀಕೆಗೂ ಕೂಡ ಒಳಗಾಗಿದ್ದಾರೆ. ಸದ್ಯಕ್ಕೆ ಈಗ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

Sania Mirza And Mohammed Shami Marriage
Image Credit: Thecricketlounge

ಸಾನಿಯಾ ಹಾಗು ಮಲಿಕ್ ವಿವಾಹ ವಿಚ್ಛೇದನ ಪಡೆದಿದ್ದಾರೆ

ಸಾನಿಯಾ ಮಿರ್ಜಾ ಹಾಗು ಮಲಿಕ್ ಪ್ರೀತಿಸಿ ಮದುವೆ ಆಗಿ ಇವರಿಬ್ಬರಿಗೂ ಇಝಾನ್​ ಎಂಬ ಒಬ್ಬ ಮಗನಿದ್ದಾನೆ. ಹಲವು ವರ್ಷಗಳಿಂದ ಈ ಜೋಡಿ ನಡುವೆ ಬಿರುಕು ಮೂಡಿರುವ ವಿಚಾರ ಹರಿದಾಡುತ್ತಿದ್ದು, ಮಲಿಕ್​ ಮೂರನೇ ವಿವಾಹವಾಗುವ ಮೂಲಕ ವದಂತಿಗೆ ಮುಕ್ತಯ ನೀಡಿದ್ದಾರೆ. ಪಾಕ್​ ನಟಿ ಸನಾ ಜಾವೇದ್​ರನ್ನು ಮಲಿಕ್​ ಮೂರನೇ ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಸಾನಿಯಾ ರನ್ನು ಮದುವೆ ಆಗುವ ಮುಂಚೆ 3 ವರ್ಷಗಳ ಕಾಲ ಆಕೆಯೊಂದಿಗೆ ಶೋಯಿಬ್​ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಮೊಹಮ್ಮದ್​ ಶಮಿ ಜೊತೆ ಸಾನಿಯಾ ಮಿರ್ಜಾ ಹೆಸರು ಕೇಳಿಬರುತ್ತಿದೆ

Join Nadunudi News WhatsApp Group

ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಜತೆ ಸಾನಿಯಾಗೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಶಮಿ ಕೂಡ ತಮ್ಮ ಮಾಜಿ ಪತ್ನಿ ಹಸಿನಾ ಜಹಾನ್​ರಿಂದ ದೂರಾಗಿದ್ದಾರೆ. ಶಮಿ ವಿರುದ್ಧ ಜಹಾನ್​ ಕೌಟುಂಬಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಈ ವಿಚಾರ ಕೋರ್ಟ್​ ಮೆಟ್ಟಿಲು ಸಹ ಏರಿದ್ದು, ಇಬ್ಬರು ಡಿವೋರ್ಸ್​ ಪಡೆದುಕೊಂಡಿದ್ದಾರೆ.

Sania Mirza Latest News
Image Credit: Instagram

ಇದರ ನಡುವೆ ಸಾನಿಯಾ ಮತ್ತು ಶಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದು ಸುಳ್ಳು ಸುದ್ದಿ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಇಬ್ಬರು ಕ್ರೀಡಾಪಟುಗಳ ಆಪ್ತರು ಈ ವದಂತಿಯನ್ನು ತಳ್ಳಿಹಾಕಿದ್ದು, ಇಬ್ಬರ ಖಾಸಗಿತನವನ್ನು ಗೌರವಿಸಿ ಎಂದು ಕೇಳಿಕೊಂಡಿದ್ದಾರೆ. ಸುಳ್ಳು ಮಾಹಿತಿ ಅಥವಾ ಊಹಾಪೋಹಗಳು ಖ್ಯಾತಿಯನ್ನು ಹಾನಿಗೊಳಿಸುವುದಲ್ಲದೆ ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.

Join Nadunudi News WhatsApp Group