Sapthami Gowda: ಡಾಲಿ ಧನಂಜಯ್ ಗೆ ಬೈದ ಕಾಂತಾರ ಬೆಡಗಿ, ಘಟನೆ ಹೇಳಿಕೊಂಡ ನಟಿ ಸಪ್ತಮಿ.

ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಡಾಲಿ ಧನಂಜಯ್ ಬಗ್ಗೆ ಮಾತನಾಡಿದ ನಟಿ ಸಪ್ತಮಿ ಗೌಡ

Daali Dhananjay And Sapthami Gowda: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ (Daali Dhananjay) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ವೀಕೆಂಡ್ ವಿತ್ ಸೀಸನ್ 5 ಗೆ (Weekend With Ramesh) ನಟ ಡಾಲಿ ಧನಂಜಯ್ ಅವರು 5 ನೇ ಅತಿಥಿಯಾಗಿ ಬಂದಿದ್ದಾರೆ.

ಇವರು ಬಂದಿರುವ ಎಪಿಸೋಡ್ ನಿನ್ನೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ. ಸಾಧಕರ ಕುರ್ಚಿಯಲ್ಲಿ ಕುಳಿತು ಡಾಲಿ ಧನಂಜಯ್ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Daali Dhananjay And Sapthami Gowda
Image Source: Zee Kannada

ಧನಂಜಯ್ ಜೊತೆ ಸಿನಿಮಾ ಮಾಡುವಾಗ ಅವರಿಗೆ ಬೈದಿದ್ದೆ ಎಂದ ನಟಿ ಸಪ್ತಮಿ ಗೌಡ
ಇನ್ನು ವೀಕೆಂಡ್ ವಿತ್ ರಮೇಶ್ ಶೋ ಗೆ ಡಾಲಿ ಧನಂಜಯ್ ಅವರ ಎಪಿಸೋಡ್ ನಲ್ಲಿ ಕಾಂತಾರ ನಟಿ ಲೀಲಾ ಬಂದಿದ್ದಾರೆ. ಡಾಲಿ ಅವರ ಬಗ್ಗೆ ಅವರು ಏನು ಅಂದುಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಫಸ್ಟ್ ಹೀರೋಹಿನ್ ಅನಿಸುತ್ತೆ ನಾನು, ಇವರನ್ನು ಬೈದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಂದು ಸಪ್ತಮಿ ಗೌಡ ಅವರು ಹೇಳಿದ್ದಾರೆ.

ಧನಂಜಯ್ ಅವರ ಜೊತೆ ಸಿನಿಮಾ ಮಾಡುವಾಗ ಅವರನ್ನು ಬೈದುಕೊಂಡಿದ್ದರಂತೆ. ನಾನು ಎಲ್ಲರಿಗೂ ಟಿಪ್ಸ್ ಕೊಡಬೇಕು. ಡಾಲಿ ಧನಂಜಯ್ ಅವರನ್ನು ಬೈದುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಆಗಿದ್ದೆ, ಬ್ಲಾಕ್ ಬ್ಲಸ್ಟರ್ ಆಗುತ್ತೀರಿ ಎಂದು ಹೇಳಿ ಸಪ್ತಮಿ ಗೌಡ ನಕ್ಕಿದ್ದಾರೆ.

ಸಪ್ತಮಿ ಗೌಡ ಅವರು ಡಾಲಿ ಧನಂಜಯ್ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಮಾಡುವಾಗ ಧನಂಜಯ್ ಅವರನ್ನು ಬೈದುಕೊಂಡಿದ್ದೆ ಎಂದು ಲೀಲಾ ಹೇಳಿದ್ದಾರೆ.

Join Nadunudi News WhatsApp Group

Daali Dhananjay And Sapthami Gowda
Image Source: Times Of India

ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಡಾಲಿಗೆ ವಿಶ್ ಮಾಡಲು ಬಂದ ಸಪ್ತಮಿ ಗೌಡ
ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಡಾಲಿಗೆ ಹಲವಾರು ಸ್ನೇಹಿತರು ಬಂದು ವಿಶ್ ಮಾಡಿದ್ದಾರೆ. ಅದರಲ್ಲಿ ನಟಿ ಸಪ್ತಮಿ ಗೌಡ ಸಹ ಒಬ್ಬರು. ವೀಕೆಂಡ್ ವಿತ್ ರಮೇಶ್ ಶೋ ನಿಂದ ಡಾಲಿ ಧನಂಜಯ್ ಅವರ ಕುಟುಂಬದ ಪರಿಚಯ ವೀಕ್ಷಕರಿಗೆ ಆಗಿದೆ.

ನಟ ಡಾಲಿ ಅವರಿಗೆ ಅವರ ಅಕ್ಕ ಈ ಶೋ ಗೆ ಬಂದಿರುವುದು ಹೆಚ್ಚು ಸರ್ಪ್ರೈಸ್ ಎನಿಸಿದೆ. ಡಾಲಿ ಅವರ ತಂದೆ ತಾಯಿಗೆ ನಾಲ್ಕು ಜನ ಮಕ್ಕಳಂತೆ. ನಟ ಧನಂಜಯ್ ಅವರ ಒಬ್ಬ ಅಕ್ಕ ವಿಶೇಷ ಚೇತನ ಎಂಬುದು ಈ ಶೋ ಮೂಲಕ ಎಲ್ಲರಿಗೂ ತಿಳಿದಿದೆ. ಯಾವತ್ತೂ ಆ ವಿಶೇಷ ಅಕ್ಕನ ತೋರಿಸಿರಲಿಲ್ಲ ಅನ್ನುವುದನ್ನು ನಟ ಡಾಲಿ ಧನಂಜಯ್ ಅವರು ಹೇಳಿದ್ದಾರೆ.

Daali Dhananjay And Sapthami Gowda
Image Source: Zee Kannada

Join Nadunudi News WhatsApp Group