Deposit Tax: ಬ್ಯಾಂಕ್ ಖಾತೆ ಇದ್ದವರಿಗೆ ಇನ್ನೊಂದು ಘೋಷಣೆ, ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಕಟ್ಟಬೇಕು ತೆರಿಗೆ.
ಇದೀಗ RBI ಬ್ಯಾಂಕ್ ಖಾತೆದಾರರಿಗೆ ಬ್ಯಾಂಕ್ ನಲ್ಲಿ ಹಣ ಇರಿಸುವ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
Saving Account Deposit Limit: ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ನಿಯಮ ಸಾಕಷ್ಟು ಬದಲಾಗಿವೆ. ಆರ್ ಬಿಐ ಬ್ಯಾಂಕುಗಳಿಗೆ ವಿವಿಧ ನಿಯಮವನ್ನು ಜಾರಿಮಾಡಿದೆ. ದೇಶದ ಎಲ್ಲಾ ಬ್ಯಾಂಕ್ ಗಳು ಆರ್ ಬಿಐ ನಿಯಮದ ಪ್ರಕಾರ ವಹಿವಾಟನ್ನು ನೆಡಸಬೇಕಿದೆ. ಬ್ಯಾಂಕ್ ಖಾತೆದಾರರು ಆರ್ ಬಿಐ (RBI) ಜಾರಿಗೊಳಿಸಿರುವ ನಿಯಮವನ್ನು ಪಾಲಿಸಬೇಕಿದೆ.
ಇನ್ನು ಇತ್ತೀಚೆಗಷ್ಟೇ ಆರ್ ಬಿಐ ಕೆಲ ಸಹಕಾರಿ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆರ್ ಬಿಐ ನಿಯಮಗಳನ್ನು ಪಾಲಿಸದ ಕೆಲವು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಕಡಿಮೆ ಹೂಡಿಕೆ ಮತ್ತು ಬಂಡವಾಳದ ಕೊರತೆಯಿಂದಾಗಿ ಕೆಲ ಸಹಕಾರಿ ಬ್ಯಾಂಕ್ ಗಳ ಪರವಾನಗಿ ರದ್ದಾಗಿದೆ. ಕರ್ನಾಟಕದ ಒಂದೆರಡು ಸಹಕಾರಿ ಬ್ಯಾಂಕ್ ಗಳ ಪರವಾನಗಿ ಕೂಡ ರದ್ದಾಗಿದೆ.
ಬ್ಯಾಂಕ್ ಖಾತೆ ಇದ್ದವರಿಗೆ ಇನ್ನೊಂದು ಘೋಷಣೆ
ಸಾಮನ್ಯವಾಗಿ ಎಲ್ಲರು ಕೂಡ ಬ್ಯಾಂಕ್ ಖಾತೆಯನ್ನು ಹೊಂದುತ್ತಾರೆ. ದೇಶದ ವಿವಿಧ ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ರೀತಿಯ ಆಯ್ಕೆಯನ್ನು ನೀಡುತ್ತದೆ. ಉಳಿತಾಯ ಖಾತೆ, ಜಂಟಿ ಖಾತೆ, ಚಾಲ್ತಿ ಖಾತೆ ಹೀಗೆ ವಿವಿಧ ಆಯ್ಕೆಗಳು ಲಭ್ಯವಿರುತ್ತದೆ. ಇನ್ನು ಸಾಮಾನ್ಯವಾಗಿ ಜನರು ಉಳಿತಾಯ ಖಾತೆಯಲ್ಲಿನ ಹೂಡಿಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದೀಗ ಆರ್ ಬಿಐ ಬ್ಯಾಂಕ್ ಖಾತೆದಾರರಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ಬ್ಯಾಂಕ್ ನಲ್ಲಿ ಇರಿಸಲಾಗುವ ಹಣದ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿದೆ.
ಬ್ಯಾಂಕ್ ನಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಕಟ್ಟಬೇಕು ತೆರಿಗೆ
ಆರ್ ಬಿಐ ಈಗಾಗಲೇ ಬ್ಯಾಂಕುಗಳ ವಹಿವಾಟು ಪ್ರಕ್ರಿಯೆಗೆ ಸಾಕಷ್ಟು ನಿಯಮವನ್ನು ವಿಧಿಸಿದೆ. ಉಳಿತಾಯ ಖಾತೆಯಲ್ಲಿ ಇರಿಸಬಹುದಾದ ಹಣಕ್ಕೆ ಮಿತಿಯನ್ನು ಅಳವಡಿಸಲಾಗಿದೆ. ಇನ್ನು ಖಾತೆದಾರರು 7 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಇರಿಸಲು ಅನುಮತಿ ನೀಡಲಾಗುತ್ತದೆ.
7 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಈ ಹಣಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಯಾವುದೇ ಸಂಸ್ಥೆ, ವೇತನ ಸೇರಿದಂತೆ ಇನ್ನಿತರ ಯಾವುದೇ ವ್ಯವಹಾರದಿಂದ ಗಳಿಸಿದ 7 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಅಂತಹ ಹಣಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.
ಇಂತಹ ಹಣಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ
ಇನ್ನು 7 ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ತೆರಿಗೆ ವಿಧಿಸಿರುವ ಸರ್ಕಾರ ಕೆಲ ಮೂಲಗಳಿಂದ ಬಂದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ಕೂಡ ವಿಧಿಸಿದೆ. ಇನ್ನು ಉಳಿತಾಯ ಖಾತೆಯಲ್ಲಿ 7 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ, ಈ ಆದಾಯವು ದೇಣಿಗೆ ರೂಪದಲ್ಲಿ, ಉಡುಗೊರೆಯಾಗಿ ಬಂದರೆ ಅಂತಹ ಹಣಕ್ಕೆ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ. ವ್ಯವಹಾರದಿಂದ ಬಂದ ಹಣಕ್ಕೆ ಮಾತ್ರ ತೆರಿಗೆ ಅನ್ವಯವಾಗುತ್ತದೆ .