Minimum Balance: ಬ್ಯಾಂಕಿನಲ್ಲಿ ಮಿನಿಮಮ್ ಹಣ ಇಲ್ಲದಿದ್ದರೆ ಎಷ್ಟು ಶುಲ್ಕ ಕಟ್ಟಬೇಕು….? RBI ಸ್ಪಷ್ಟನೆ.
ಇದೀಗ ಬ್ಯಾಂಕಿನಲ್ಲಿ Minimum Balance ಇಲ್ಲದಿದ್ದರೆ ಎಷ್ಟು ಶುಲ್ಕ ಕಟ್ಟಬೇಕು ಎಂದು ತಿಳಿಯಿರಿ.
Saving Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ ಅದರ ನಿರ್ವಹಣೆ ಮಾಡುದು ಕೂಡ ಮುಖ್ಯವಾಗಿರುತ್ತದೆ.
Account ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಿಸುದು ಅತಿ ಅಗತ್ಯವಾಗಿದೆ. Minimum Balance ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಇದೀಗ ಬ್ಯಾಂಕಿನಲ್ಲಿ Minimum Balance ಇಲ್ಲದಿದ್ದರೆ ಎಷ್ಟು ಶುಲ್ಕ ಕಟ್ಟಬೇಕು ಎಂದು ನಾವೀಗ ತಿಳಿಯೋಣ.
![Saving Bank Account Minimum Balance](https://nadunudi.in/wp-content/uploads/2023/09/Saving-Bank-Account-Minimum-Balance.png)
ಬ್ಯಾಂಕ್ ಖಾತೆಯಲ್ಲಿ Minimum Balance ಇಲ್ಲದಿದ್ದರೆ ದಂಡ ಖಚಿತ
Minimum Balance ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ದಂಡದ ಮೊತ್ತ ಎಷ್ಟು ಎಂಬುದನ್ನು ಆಯಾ ಬ್ಯಾಂಕ್ ಗಳು ನಿರ್ಧಾರ ಮಾಡುತ್ತವೆ. ಗ್ರಾಮೀಣ ಭಾಗದ ಬ್ಯಾಂಕು ಗಳು Minimum Balance ಬಗ್ಗೆ ಹೆಚ್ಚು ಗಮನ ಹರಿಸುದಿಲ್ಲ ಆದರೆ ನಗರ ಭಾಗದ ಬ್ಯಾಂಕುಗಳಲ್ಲಿ ದಂಡ ವಿಧಿಸುವ ಪ್ರಕ್ರಿಯೆ ಹೆಚ್ಚಾಗಿರುತ್ತದೆ. ಇದೀಗ Minimum Balanceಗೆ ಸಂಬಂಧಿಸಿದಂತೆ RBI ನ ನಿಯಮ ಏನು ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.
Minimum Balance
HDFC, Axis ಇತ್ಯಾದಿ ಬ್ಯಾಂಕ್ ಗಳ ಸೇವಿಂಗ್ ಅಕೌಂಟ್ ನಲ್ಲಿ ಕನಿಷ್ಠ 10000 ಹಣ ಹೊಂದಿರಬೇಕು. ಇನ್ನು ಕೆಲ ಬ್ಯಾಂಕ್ ಗಳಲ್ಲಿ 1000 Minimum Balance ಆಗಿರುತ್ತದೆ. ಒಂದು ತಿಂಗಳಲ್ಲಿ ಅಕೌಂಟ್ ನ Minimum Balance ಎಷ್ಟು ಎಂಬುದನ್ನು ಎಣಿಸಲು ಒಂದು ಕ್ರಮ ಇದೆ. ಪ್ರತೀ ದಿನದ ಅಂತ್ಯದಲ್ಲಿ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ಪರಿಗಣಿಸಲಾಗುತ್ತದೆ. ಅದನ್ನು ಒಟ್ಟುಮಾಡಿ 30 ಅಥವಾ 31 ದಿನಗಳಿಂದ ಅದನ್ನು ಭಾಗಿಸಿ ಸರಾಸರಿ ಮೊತ್ತವನ್ನು ಪಡೆಯಲಾಗುತ್ತದೆ. ಇದೆ Minimum Balance ಆಗಿದೆ.
![RBI rule regarding Minimum Balance](https://nadunudi.in/wp-content/uploads/2023/09/RBI-4.png)
Minimum Balance ಬಗ್ಗೆ RBI ನಿಯಮ
Saving Bank Account ನಲ್ಲಿ ಹಣವು Minimum Balance ಕ್ಕಿಂತ ಕಡಿಮೆ ಇದ್ದಾಗ ಬ್ಯಾಂಕ್ ಗಳು ಏಕಾಏಕಿ ದಂಡ ವಿಧಿಸುವಂತಿಲ್ಲ. ಈ ಸಂದರ್ಭದಲ್ಲಿ ಗ್ರಾಹಕರಿಗೆ SMS ಅಥವಾ Email ಮೂಲಕ ಸಂದೇಶ ಕಳುಹಿಸಬೇಕು. ಹಾಗೆ Minimum Balance ತುಂಬಲು ಗ್ರಾಹಕರಿಗೆ ಒಂದು ತಿಂಗಳು ಗಳ ಕಾಲ ಸಮಯಾವಕಾಶವನ್ನು ನೀಡಬೇಕು.
ನಂತರ ದಂಡವನ್ನು ಹಾಕಬಹುದು ಎಂದು RBI 2014ರಲ್ಲಿ ರೂಪಿಸಿದ ನಿಯಮದಲ್ಲಿ ಸ್ಪಷ್ಟಪಡಿಸಿದೆ.
ಇದಲ್ಲದೆ ಎಲ್ಲಾ ಪ್ರಕರಣದಲ್ಲೂ ಒಂದೇ ರೀತಿಯ ದಂಡ ವಿಧಿಸುವಂತಿಲ್ಲ. ಕನಿಷ್ಠ ಮೊತ್ತಕ್ಕಿಂತ ಎಷ್ಟು ಕಡಿಮೆ ಇದೆ ಎಂದು ತಿಳಿದು ಅದಕ್ಕೆ ಅನುಗುಣವಾದ ದಂಡವನ್ನು ವಿಧಿಸಬೇಕು ಎಂದು RBI ನಿಯಮ ಹೇಳುತ್ತದೆ.