Saving Scheme: ದೇಶದ ಎಲ್ಲಾ ಮಹಿಳೆಯರಿಗಾಗಿ, ಪೋಸ್ಟ್ ಆಫೀಸ್ ನ ಈ ಯೋಜನೆಗೆ ಇಂದೇ ಅರ್ಜಿ ಹಾಕಿ ಲಕ್ಷ ರಿಟರ್ನ್ ಪಡೆದುಕೊಳ್ಳಿ.

ಲಕ್ಷ ಲಕ್ಷ ರಿಟರ್ನ್ ಸಿಗುವ ಹಲವು ಯೋಜನೆಗಳು ಮಹಿಳೆಯರಿಗಾಗಿ, ಪೋಸ್ಟ್ ಆಫೀಸ್ ನಲ್ಲಿ ಇಂದೇ ಅರ್ಜಿ ಹಾಕಿ.

Post Office Small Saving Scheme For Ladies: Indian Post Office ಈಗಾಗಲೇ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಪೋಸ್ಟ್ ಆಫೀಸ್ ನಲ್ಲಿ ಸಾಕಷ್ಟು ಯೋಜನೆಗಳಿವೆ.

ಇನ್ನು Post Office ದೇಶದ ಮಹಿಳೆಯರಿಗಾಗಿ ಕೂಡ ವಿವಿಧ ರೀತಿಯ ಹೂಡಿಕೆಯ ಯೋಜನೆಗಳನ್ನು ಪರಿಚಯಿಸಿದೆ. ಉತ್ತಮ ಆದಾಯವನ್ನು ನೀಡಲು ಅಂಚೆ ಇಲಾಖೆಯ ಯೋಜನೆಗಳು ಸಹಾಯವಾಗುತ್ತದೆ. ಇದೀಗ ಅಂಚೆ ಇಲಾಖೆ ಮಹಿಳೆಯರಿಗಾಗಿ ಪರಿಚಯಿಸಿರುವ ಯೋಜನೆಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Public Provident Fund
Image Credit: Fisdom

*Public Provident Fund
ವೈಯಕ್ತಿಕ ಉಳಿತಾಯ ಯೋಜನೆಗಳಲ್ಲಿ Public Provident Fund ಕೂಡ ಒಂದಾಗಿದೆ. PPF ನಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಶೇ.7.1ರಷ್ಟು ಬಡ್ಡಿಯನ್ನು ಸರಕಾರ ನೀಡುತ್ತದೆ. ಈ ಯೋಜನೆಯಲ್ಲಿ ಗರಿಷ್ಟ 1.5 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಮಾಡಿದ ಹೂಡಿಕೆಯ ಮೇಲೆ ಆದಾಯ ತೆರಿಗೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಹ ಲಭ್ಯವಿದೆ. PPF ಯೋಜನೆಯಲ್ಲಿ ಹೂಡಿಕೆ ಮಾಡಲುಕನಿಷ್ಠ ವಯಸ್ಸು 15 ವರ್ಷಗಳಾಗಿರಬೇಕು.

*Sukanya Samriddhi Yojana
Sukanya Samriddhi Yojana ಕೇಂದ್ರ ಮೋದಿ ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆಗೆ ಅನುಕೂಲ ಮಾಡಿಕೊಡುತ್ತದೆ. ಈ ಯೋಜನೆ ಮೂಲಕ ನೀವು ಕಡಿಮೆ ಹೂಡಿಕೆಯಲ್ಲಿ ನಿಮ್ಮ ಮಗಳ ಶಿಕ್ಷಣ ಅಥವಾ ಮದುವೆಗಾಗಿ 64 ಲಕ್ಷ ಹಣವನ್ನು ಪಡೆಯಬಹುದು.

ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. 10 ವರ್ಷದ ದಾಟಿದ ಮಗುವಿನ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ.

Join Nadunudi News WhatsApp Group

mahila samman yojana
Image Credit: Newsonair

*Mahila Samman Yojana
ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಮಹಿಳೆಯರು ಮತ್ತು ಹುಡುಗಿಯರು ಎರಡು ವರ್ಷಗಳ ಅವಧಿಗೆ 2 ಲಕ್ಷ ರೂ. ವರೆಗಿನ ಹೂಡಿಕೆಯ ಮೇಲೆ ಶೇ. 7 .5 ರಷ್ಟು ನಿಶ್ಚಿತ ಬಡ್ಡಿಯನ್ನು ಪಡೆಯುತ್ತಾರೆ. ಸರಕಾರದ ಅಧಿಸೂಚನೆಯ ಪ್ರಕಾರ, MSSC ಮೇಲಿನ ಬಡ್ಡಿಯನ್ನು ತ್ರೈಮಾಸಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಮತ್ತು ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.

*National Saving Certificate
ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕೇವಲ 100 ರೂಪಾಯಿಗಳೊಂದಿಗೆ ನಿಮ್ಮ ಹೂಡಿಕೆಯನ್ನು ಪ್ರಾರಂಭಿಸಬಹುದು. 100 ರೂಪಾಯಿ ಹೂಡಿಕೆ ಮಾಡಿದರೆ ನೀವು 20 ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ಹೂಡಿಕೆದಾರರು ವರ್ಷಕ್ಕೆ 6 .8 ಬಡ್ಡಿ ಪಡೆಯುತ್ತಾರೆ. ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಮುಕ್ತಾಯ ಅವಧಿಯು 5 ವರ್ಷಗಳಾಗಿರುತ್ತದೆ.

post office time deposit scheme
Image Credit: TV9telugu

*Post Office Time Deposit scheme
ಇನ್ನು ಜನರಿಗೆ ಆರ್ಥಿಕವಾಗಿ ಬೆಂಪಾಲ ನೀಡುತ್ತಿರುವ ಉಳಿತಾಯ ಯೋಜನೆಗಳಲ್ಲಿ Post Office Time Deposit scheme ಕೂಡ ಒಂದಾಗಿದೆ. ಯೋಜನೆಯಲ್ಲಿ ಹೂಡಿಕೆಯ ಅವಧಿಯು ಒಂದು ವರ್ಷದಿಂದ ಐದು ವರ್ಷಗಳ ವರೆಗೆ ಇರುತ್ತದೆ. ಇದರ ಅಡಿಯಲ್ಲಿ, ನೀವು ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕು. ಅಂಚೆ ಕಛೇರಿಯು 5 ವರ್ಷಗಳ ಅವಧಿಗೆ ಠೇವಣಿ ಮೊತ್ತದ ಮೇಲೆ ಶೇಕಡಾ 7.5 ಬಡ್ಡಿದರವನ್ನು ನೀಡುತ್ತದೆ.

Join Nadunudi News WhatsApp Group