SBI Asha Scholarship: 6 ರಿಂದ 12 ನೇ ತರಗತಿ ಮಕ್ಕಳಿಗೆ SBI ನಿಂದ ಸಿಗಲಿದೆ 10,000 ರೂ ವಿದ್ಯಾರ್ಥಿವೇತನ, ಇಂದೇ ಅರ್ಜಿ ಸಲ್ಲಿಸಿ.

6 ರಿಂದ 12 ನೇ ತರಗತಿ ಮಕ್ಕಳಿಗೆ SBI ನಿಂದ ವಿದ್ಯಾರ್ಥಿವೇತನ.

SBI Asha Scholarship for 6th To 12th Class Students: ಸದ್ಯ ದೇಶದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ.

ಸದ್ಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ದೇಶದ ಜನಪ್ರಿಯ ಸರ್ಕಾರೀ ಬ್ಯಾಂಕ್ ಆಗಿರುವ State Bank Of India ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಹೌದು SBI ಈಗ ಮಕ್ಕಳಿಗಾಗಿ ವಿದ್ಯಾರ್ಥಿವೇತನ ಬಿಡುಗಡೆ ಮಾಡಿದ್ದು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದರ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

SBI Asha Scholarship
Image Credit: Leverageedu

6 ರಿಂದ 12 ನೇ ತರಗತಿ ಮಕ್ಕಳಿಗೆ SBI ನಿಂದ ವಿದ್ಯಾರ್ಥಿವೇತನ
ಆರ್ತಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಇದೀಗ SBI ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. 6 ರಿಂದ 12 ನೇ ತರಗತಿ ಮಕ್ಕಳು SBI Scholarship ಅನ್ನು ಪಡೆದುಕೊಳ್ಳಬಹುದು.

State Bank of India (SBI) ಫೌಂಡೇಶನ್ ಶಾಲಾ ವಿದ್ಯಾರ್ಥಿಗಳಿಗೆ SBI ಆಶಾ ವಿದ್ಯಾರ್ಥಿವೇತನ ಕಾರ್ಯಕ್ರಮ 2023 ಅನ್ನು ಪ್ರಾರಂಭಿಸಿದೆ. ಎಸ್‌ ಬಿಐ ಫೌಂಡೇಶನ್‌ ನ ಎಜುಕೇಶನ್ ವರ್ಟಿಕಲ್ – ಇಂಟಿಗ್ರೇಟೆಡ್ ಲರ್ನಿಂಗ್ ಮಿಷನ್ (ಐಎಲ್‌ಎಂ) ಭಾಗವಾಗಿ, ಈ ಉಪಕ್ರಮವು ಭಾರತದಾದ್ಯಂತ ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ.

SBI Asha Scholarship for 6th To 12th Class Students
Image Credit: Live Uttar Pradesh

SBI ನಿಂದ ಸಿಗಲಿದೆ 10000 ರೂ ವಿದ್ಯಾರ್ಥಿವೇತನ
•ಈ ವಿದ್ಯಾರ್ಥಿವೇತನವು 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ.

Join Nadunudi News WhatsApp Group

•ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು.

•ಭಾರತದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

•ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ಆದಾಯ 3 ಲಕ್ಷ ರೂ.ಗಿಂತ ಮೀರಿರಬಾರದು.

•SBIF ಆಶಾ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

•ಇನ್ನು https://www.sbifoundation.in/focus-area-detail/SBIF-Asha-Scholarship ಅಧಿಕೃತ ವೆಬ್‌ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group