SBI ATM Card: SBI ಏಟಿಎಂ ಕಾರ್ಡ್ ಬಳಸುವವರಿಗೆ ಬೇಸರದ ಸುದ್ದಿ, ಇನ್ಮುಂದೆ ಕಟ್ಟಬೇಕು ಅಧಿಕ ಶುಲ್ಕ

SBI ಗ್ರಹಕರಿಗೆ ಬಿಗ್ ಅಪ್ಡೇಟ್,ಡೇವಿಟ್ ಕಾರ್ಡ್ ಗಳ ವಾರ್ಷಿಕ ನಿರ್ವಹಣಾ ಶುಲ್ಕ ಹೆಚ್ಚಳ.

SBI Debit Card New Rule From April 1st: ಹೊಸ ಹಣಕಾಸು ವರ್ಷ ಇನ್ನು ಕೇವಲ ಎರಡು ದಿನಗಳಲ್ಲಿ ಆರಂಭಗೊಳ್ಳಲಿದೆ. ಹೊಸ ಹಣಕಾಸು ವರ್ಷ 2024 -25 ರಿಂದ ದೇಶದಲ್ಲಿ ಅನೇಕ ಹೊಸ ಹೊಸ ನಿಯಮಗಳು ಪರಿಚಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಹೊಸ ಹಣಕಾಸು ವರ್ಷದಿಂದ ಬ್ಯಾಂಕ್ ಸಂಬಂಧಿತ ಅನೇಕ ನಿಯಮಗಳು ಬದಲಾಗಲಿವೆ.

ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಹೊಸ ನಿಯಮಗಳನ್ನು ಜಾರಿಗೊಳಿಸಲಿದೆ. ಸದ್ಯ ದೇಶದ ಜನಪ್ರಿಯ ಸರ್ಕಾರೀ ಬ್ಯಾಂಕ್ ಆಗಿರುವ State Bank OF India ತನ್ನ ಗ್ರಾಹಕರಿಗೆ ಹೊಸ ಹಣಕಾಸು ವರ್ಷ ಆರಂಭಕ್ಕೂ ಮುನ್ನವೇ ಹೊಸ ನಿಯಮವನ್ನು ಜಾರಿಗೊಳಿಸಿದೆ. SBI ಡೆಬಿಟ್ ಕಾರ್ಡ್ ಬಳಕೆದಾರರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.

SBI Debit Card New Rule
Image Credit: Informal News

SBI ಗ್ರಾಹಕರಿಗೆ ಬಿಗ್ ಅಪ್ಡೇಟ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬಿಗ್ ಅಪ್ಡೇಟ್ ನೀಡಿದೆ. SBI ಕೆಲವು Debit Crad ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣೆ ಶುಲ್ಕದಲ್ಲಿ 75 ರೂಪಾಯಿಗಳ ಹೆಚ್ಚಳವನ್ನು ಘೋಷಿಸಿದೆ. SBI Website ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ವಾರ್ಷಿಕ ನಿರ್ವಹಣಾ ಶುಲ್ಕಗಳ ಹೊರತಾಗಿ Debit Crad ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ಸಹ SBI ವಿವರಿಸಿದೆ. ಕಾರ್ಡ್‌ ಗೆ ಅನುಗುಣವಾಗಿ ವಿತರಣಾ ಶುಲ್ಕಗಳು ಬದಲಾಗುತ್ತವೆ ಎಂದು SBI ಸ್ಪಷ್ಟಪಡಿಸಿದೆ.

ಡೇವಿಟ್ ಕಾರ್ಡ್ ಗಳ ವಾರ್ಷಿಕ ನಿರ್ವಹಣಾ ಶುಲ್ಕ ಹೆಚ್ಚಳ
ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಮತ್ತು ಕಾಂಟ್ಯಾಕ್ಟ್‌ ಲೆಸ್ ಡೆಬಿಟ್ ಕಾರ್ಡ್‌ ಗಳ ವಿತರಣಾ ಶುಲ್ಕ ಶೂನ್ಯವಾಗಿದ್ದರೆ, ಪ್ಲಾಟಿನಂ ಡೆಬಿಟ್ ಕಾರ್ಡ್‌ ಗೆ ವಿತರಣಾ ಶುಲ್ಕ ರೂ. 300 ಜಿಎಸ್‌ಟಿ ಎಂದು ಎಸ್‌ಬಿಐ ಮಾಹಿತಿ ನೀಡಿದೆ. ಇದಲ್ಲದೆ, ಗ್ರಾಹಕರು ಡೆಬಿಟ್ ಕಾರ್ಡ್ ರಿಪ್ಲೇಸ್ಮೆಂಟ್ (ರೂ. 300 ಜಿಎಸ್‌ಟಿ), ನಕಲಿ ಪಿನ್/ಪಿನ್ ರೀ ಜನರೇಷನ್ (ರೂ. 50 ಜಿಎಸ್‌ಟಿ) ಮತ್ತು ಅಂತರಾಷ್ಟ್ರೀಯ ವಹಿವಾಟುಗಳಂತಹ ಸೇವೆಗಳಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

SBI Debit Card New Rule From April 1st
Image Credit: Economic Times

ಅಂತರರಾಷ್ಟ್ರೀಯ ವಹಿವಾಟು ಶುಲ್ಕಗಳು ಎಟಿಎಂಗಳಲ್ಲಿ ಬ್ಯಾಲೆನ್ಸ್ ವಿಚಾರಣೆಗಾಗಿ ರೂ. 25 +ಜಿಎಸ್‌ಟಿ, ಕನಿಷ್ಠ 100 ರೂಪಾಯಿ ಅದರೊಂದಿಗೆ ಎಟಿಎಂ ನಗದು ಹಿಂಪಡೆಯುವ ವಹಿವಾಟುಗಳ ವಹಿವಾಟಿನ ಮೊತ್ತದ 3 .5 % ಮತ್ತು ಪಾಯಿಂಟ್ ಆಫ್ ಸೆಲ್ (PoS ) ಹಾಗೂ ಇಕಾಮಾರ್ಸ್ ವಹಿವಾಟುಗಳಿಗೆ ವಹಿವಾಟಿನ ಮೊತ್ತದ 3 % ಮತ್ತು GST ಇರಲಿದೆ. ಉಲ್ಲೇಖಿಸಲಾದ ಎಲ್ಲ ಶುಲ್ಕಗಳು 18 % GST ಗೆ ಒಳಪಟ್ಟಿರುತ್ತದೆ ಎಂದು SBI ವಿವರಿಸಿದೆ.

Join Nadunudi News WhatsApp Group

SBI Debit Card Latest Update
Image Credit: Businesstoday

Join Nadunudi News WhatsApp Group