SBI Bank Deadline: SBI ಖಾತೆ ಇದ್ದವರಿಗೆ ಇದು ಕೊನೆಯ ಅವಕಾಶ, ಮಾರ್ಚ್ 31 ರೊಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ

SBI ನಲ್ಲಿ ಖಾತೆ ಹೊಂದಿದವರು ಈ ಮೂರೂ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.

SBI Bank 31 March 2024 Financial Deadline: ಪ್ರಸ್ತುತ 2024 ರ ಮೂರನೇ ತಿಂಗಳು March ಆರಂಭವಾಗಿದೆ. ಇನ್ನು ವರ್ಷದ ಪ್ರತಿ ತಿಂಗಳ ಆರಂಭದಲ್ಲಿ ಹೆಚ್ಚಿನ ನಿಯಮಗಳು ಬದಲಾಗುತ್ತದೆ. ಪ್ರತಿ ತಿಂಗಳು ಆರಂಭವಾಗುತ್ತಿದ್ದಂತೆ ಜನರು ಹೊಸ ಹೊಸ ನಿಯಮಗಳ ಬಗ್ಗೆ ತಿಳಿಯುವುದು ಅಗತ್ಯವಾಗಿರುತ್ತದೆ.

ಮಾರ್ಚ್ ತಿಂಗಳು ಆರ್ಥಿಕ ವರ್ಷದ ಕೊನೆಯ ತಿಂಗಳಾಗಿದೆ. ಇನ್ನು ಈ ತಿಂಗಳ ಅಂತ್ಯದೊಳಗೆ ಜನಸಾಮಾನ್ಯರು ಮುಗಿಸಿಕೊಳ್ಳಬೇಕಾದ ಸಾಕಷ್ಟು ಕೆಲಸಗಳಿರುತ್ತದೆ. ಇದೀಗ SBI ನಲ್ಲಿ ಖಾತೆ ಹೊಂದಿದವರು ಈ ಮೂರೂ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.

SBI Amrit Kalash Deadline
Image Credit: Vaaninews

*SBI Amrit Kalash Deadline
ಅಮೃತ್ ಕಲಶ ಯೋಜನೆಯು SBI ನ FD ಯೋಜನೆಯಾಗಿದೆ. ಇದರಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ 31 ಮಾರ್ಚ್ 2024 ಆಗಿದೆ. ಇದು SBI ನ ವಿಶೇಷ ಹೂಡಿಕೆ ಯೋಜನೆಯಾಗಿದೆ. ಬ್ಯಾಂಕ್‌ನ Website ಪ್ರಕಾರ, ಅಮೃತ್ ಕಲಶ ವಿಶೇಷ ಯೋಜನೆಯಲ್ಲಿ ಯಾರಾದರೂ 400 ದಿನಗಳ ಅವಧಿಯೊಂದಿಗೆ ಹೂಡಿಕೆ ಮಾಡಬಹುದು, ಇದಕ್ಕೆ ಶೇಕಡಾ 7.10 ಬಡ್ಡಿಯನ್ನು ನೀಡಲಾಗುತ್ತಿದೆ.

ಅಮೃತ್ ಕಲಾಶ್ FD ಯಲ್ಲಿ ಠೇವಣಿ ಮಾಡಿದ ಹಣವನ್ನು 400 ದಿನಗಳ ಅವಧಿಯ ಮೊದಲು ಹಿಂಪಡೆದರೆ, ಬ್ಯಾಂಕ್ ದಂಡವಾಗಿ ಅನ್ವಯವಾಗುವ ದರಕ್ಕಿಂತ 0.50% ರಿಂದ 1% ರಷ್ಟು ಕಡಿಮೆ ಬಡ್ಡಿದರವನ್ನು ಕಡಿತಗೊಳಿಸಬಹುದು.

SBI Wecare FD Scheme
Image Credit: Jagran

*SBI Wecare FD Scheme
WeCare FD ಯೋಜನೆಯಲ್ಲಿ ಹೂಡಿಕೆಗೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಬ್ಯಾಂಕ್ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಯಾವುದೇ FD ಮೇಲೆ 0.50 ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. SBI Wecare 7.50% ಬಡ್ಡಿಯನ್ನು ಪಡೆಯುತ್ತಿದೆ. ಯೋಜನೆಯಡಿಯಲ್ಲಿ ಹೂಡಿಕೆಗಳನ್ನು ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ 10 ವರ್ಷಗಳವರೆಗೆ ಮಾಡಲಾಗುತ್ತದೆ. ಈ ದರಗಳು ಹೊಸ ಮತ್ತು ನವೀಕರಿಸಬಹುದಾದ FD ಗಳಲ್ಲಿ ಲಭ್ಯವಿರುತ್ತವೆ.

Join Nadunudi News WhatsApp Group

SBI Home Loan Interest Rate
Image Credit: Mymoneymantra

*SBI Home Loan Interest Rate
SBI ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. SBI ಗೃಹ ಸಾಲಗಳ ಮೇಲೆ 31 ಮಾರ್ಚ್ 2024 ರವರೆಗೆ ಕೊಡುಗೆಗಳನ್ನು ನೀಡುತ್ತಿದೆ. CIBIL ಸ್ಕೋರ್ 750-800 ಕ್ಕಿಂತ ಹೆಚ್ಚಿರುವ ಗ್ರಾಹಕರಿಗೆ ಶೇಕಡಾ 8.60 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. Offer ಇಲ್ಲದ ಗೃಹ ಸಾಲದ ಬಡ್ಡಿ ದರವು ಶೇಕಡಾ 9.15 ಆಗಿದೆ.

Join Nadunudi News WhatsApp Group