SBI Card Rule: SBI ಕಾರ್ಡ್ ಬಳಸುವವರಿಗೆ ಮತ್ತೆ ಬೇಸರದ ಸುದ್ದಿ, ಜೂನ್ 1 ರಿಂದ ಹೊಸ ರೂಲ್ಸ್.

ಜೂನ್ ನಿಂದ SBI Credit Card ಬಳಕೆದಾರರಿಗೆ ಹೊಸ ನಿಯಮ

SBI Credit Card New Rule From June 1st: ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಆಗಿರುವ SBI ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ತಮ್ಮ ಖಾತೆಯನ್ನು ತೆರೆದಿದ್ದರೆ. ಇನ್ನು SBI ತನ್ನ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಇನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಗ್ರಾಹಕರಿಗೆ ಹಣಕಾಸಿನ ವಹಿವಾಟು ಸುಲಭವಾಗಲಿ ಎನ್ನುವ ಉದ್ದೇಶದಿಂದ Credit Card ಸೌಲಭ್ಯವನ್ನು ನೀಡುತ್ತದೆ.

ಬ್ಯಾಂಕ್ ನೀಡುವ ಕ್ರೆಡಿಟ್ ಕಾರ್ಡ್ ಸೌಲಭ್ಯಕ್ಕೆ ಅದರದ್ದೇ ಆದಂತಹ ನಿಯಮಗಳಿರುತ್ತದೆ. ಸದ್ಯ ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ SBI ತನ್ನ Credit Card Rule ಅನ್ನು ಚೇಂಜ್ ಮಾಡಿದೆ. ಈ ಮೂಲಕ SBI ಗ್ರಾಹಕರಿಗೆ ಬಿಗ್ ಅಪ್ಡೇಟ್ ನೀಡಿದೆ. ಜೂನ್ ನಿಂದ SBI Credit Card ಬಳಕೆದಾರರಿಗೆ ಹೊಸ ನಿಯಮ ಅನ್ವಯವಾಗಲಿದೆ.

SBI Credit Card New Rule
Image Credit: Live Mint

SBI ಕಾರ್ಡ್ ಬಳಸುವವರಿಗೆ ಮತ್ತೆ ಬೇಸರದ ಸುದ್ದಿ
SBI ಕಾರ್ಡ್ ಇತ್ತೀಚೆಗೆ ಒಂದು ಪ್ರಮುಖ ಘೋಷಣೆ ಮಾಡಿದೆ. ರಿವಾರ್ಡ್ ಪಾಯಿಂಟ್‌ ಗಳ ಬಗ್ಗೆ ಗ್ರಾಹಕರಿಗೆ ಬಹುದೊಡ್ಡ ಘೋಷಣೆಯನ್ನು ಹೊರಡಿಸಿದೆ. ಇನ್ನು ಮುಂದೆ ಸರ್ಕಾರಿ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ ಗಳನ್ನು ನೀಡುವುದಿಲ್ಲ ಎಂದು ಎಸ್‌ಬಿಐ ಕಾರ್ಡ್ ಬಹಿರಂಗಪಡಿಸಿದೆ. ಅಂದರೆ ನೀವು SBI ಕಾರ್ಡ್ ಮೂಲಕ ಸರ್ಕಾರಿ ವಹಿವಾಟುಗಳನ್ನು ಮಾಡಿದರೆ ನೀವು ಯಾವುದೇ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ.

ಸರ್ಕಾರಿ ವಹಿವಾಟುಗಳನ್ನು ಇನ್ನು ಮುಂದೆ ಮರ್ಚೆಂಟ್ ಕೆಟಗರಿ ಕೋಡ್ಸ್ (MCC) 9399 ಮತ್ತು 9311 ಅಡಿಯಲ್ಲಿ ಪರಿಗಣಿಸಲಾಗುವುದು ಎಂದು SBI ಕಾರ್ಡ್ ವಿವರಿಸಿದೆ. SBI ಕಾರ್ಡ್‌ ನ ನಿರ್ಧಾರದೊಂದಿಗೆ, ಅಂತಹ ಸರ್ಕಾರಿ ವಹಿವಾಟುಗಳ ಮೇಲೆ ಇನ್ನು ಮುಂದೆ ರಿವಾರ್ಡ್ ಪಾಯಿಂಟ್‌ ಗಳು ಸೇರುವುದಿಲ್ಲ ಎಂದು ಹೇಳಬಹುದು. ಈ ಬಗ್ಗೆ ಎಸ್‌ಬಿಐ ಕಾರ್ಡ್ ಕಂಪನಿ ತನ್ನ ಗ್ರಾಹಕರಿಗೆ ಇಮೇಲ್ ಕಳುಹಿಸಿದೆ.

SBI Credit Card New Rule From June 1st
Image Credit: Krishijagran

ಜೂನ್ 1 ರಿಂದ ಹೊಸ ರೂಲ್ಸ್
ಮತ್ತೊಂದೆಡೆ ಯೆಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಈಗಾಗಲೇ ತಮ್ಮ ಗ್ರಾಹಕರಿಗೆ ಶಾಕ್ ನೀಡಿದೆ. ಯುಟಿಲಿಟಿ ಬಿಲ್ ಪಾವತಿದಾರರು ಪ್ರತಿಕೂಲ ಪರಿಣಾಮ ಬೀರುತ್ತಾರೆ. ಎಲ್ಲಾ ರೀತಿಯ ಯುಟಿಲಿಟಿ ಬಿಲ್‌ಗಳ ಮೇಲೆ ಶೇಕಡಾ ಒಂದರಷ್ಟು ಶುಲ್ಕ ವಿಧಿಸುವುದಾಗಿ ಈ ಬ್ಯಾಂಕ್‌ಗಳು ಬಹಿರಂಗಪಡಿಸಿವೆ. ಈ ನಿಯಮವನ್ನು ಈಗಾಗಲೇ ಜಾರಿಗೆ ತರಲಾಗಿದೆ. ನಿಮ್ಮ ಮಾಸಿಕ ಕರೆಂಟ್ ಬಿಲ್ ರೂ.1500 ಆಗಿದ್ದರೆ, ನೀವು ಈ ಬಿಲ್ ಅನ್ನು ಯೆಸ್ ಬ್ಯಾಂಕ್ ಅಥವಾ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ನಿಮಗೆ ಹೆಚ್ಚುವರಿ ಬಿಲ್ ಮೊತ್ತ ರೂ. 15 ತೆಗೆದುಕೊಳ್ಳುತ್ತದೆ.

Join Nadunudi News WhatsApp Group

ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ರೂ. 15 ಸಾವಿರ ಉಚಿತ ಬಳಕೆಯ ಮಿತಿ, IDFC ಫಸ್ಟ್ ಬ್ಯಾಂಕ್ ರೂ. ಮಿತಿ 20 ಸಾವಿರದವರೆಗೆ ಬರುತ್ತದೆ. ಅಂದರೆ ಕ್ರೆಡಿಟ್ ಕಾರ್ಡ್ ಬಿಲ್ ಸೈಕಲ್‌ ನಲ್ಲಿ ರೂ. 15 ಸಾವಿರಕ್ಕಿಂತ ಕಡಿಮೆ ಯುಟಿಲಿಟಿ ಬಿಲ್ ಪಾವತಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ. ಈ ಮಿತಿ ಮೀರಿ ಬಿಲ್ ಪಾವತಿಸಿದರೆ ಶೇ. 1 ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇದು 18 ಪ್ರತಿಶತ ಜಿಎಸ್‌ಟಿ ಯನ್ನೂ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಮೂರು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವವರು ಈ ಹೊಸ ನಿಯಮಗಳನ್ನು ಪರಿಶೀಲಿಸಬೇಕು. SBI Credit Card ನ ಹೊಸ ನಿಯಮವು ಜೂನ್ 1 ರಿಂದ ಜಾರಿಗೆ ಬರಲಿದೆ.

SBI Credit Card Rules
Image Credit: Indiatimes

Join Nadunudi News WhatsApp Group