SBI Credit Card: SBI ಕ್ರೆಡಿಟ್ ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ, ಇನ್ನುಮುಂದೆ ಸಿಗಲ್ಲ ಈ ಸೇವೆ.

SBI ಕ್ರೆಡಿಟ್ ಬಳಸುವವರು ಈಗ ಹಣಕಾಸಿನ ವ್ಯವಹಾರದ ಮೇಲೆ ಯಾವುದೇ ರೀತಿಯ ಕ್ಯಾಶ್ ಪಡೆಯಲು ಸಾಧ್ಯವಿಲ್ಲ.

State Bank Of India: ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ (SBI) ಇದೀಗ ತನ್ನ ಗ್ರಾಹಕರಿಗೆ ಬೇಸರದ ಸುದ್ದಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಎಸ್ ಬಿಐ ಬ್ಯಾಂಕ್ ನಲ್ಲಿನ ಕೆಲವು ನಿಯಮಗಳು ಬದಲಾಗುತ್ತಲೇ ಇವೆ.

ಇನ್ನು ಎಸ್ ಬಿಐ ತನ್ನ ಗ್ರಾಹಕರಿಗಾಗಿ ಡೆಬಿಟ್ ಕಾರ್ಡ್ (Debit Card) ಹಾಗೂ ಕ್ರೆಡಿಟ್ ಕಾರ್ಡ್ (Credit Card) ಗಳ ಸೌಲಭ್ಯವನ್ನು ಒದಗಿಸಿದೆ. ಆದರೆ ಇನ್ನು ಮುಂದೆ ಎಸ್ ಬಿಐ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನಲ್ಲಿ ಕೆಲವು ಸೌಲಭ್ಯಗಳು ಸಿಗುವುದಿಲ್ಲ. ಕ್ರೆಡಿಟ್ ಹೊಂದಿರುವ ಎಸ್ ಬಿಐ ಗ್ರಾಹಕರಿಗೆ ಹೊಸ ನಿಯಮವೊಂದು ಜಾರಿಗೆ ಬಂದಿದೆ.

A new rule has been implemented for SBI credit card holders and some services have been stopped
Image Credit; tfipost

ಎಸ್ ಬಿಐ ಗ್ರಾಹಕರಿಗೆ ಬೇಸರದ ಸುದ್ದಿ
ಎಸ್ ಬಿಐ ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿಷಯವಾಗಿ ವಿಶೇಷ ಘೋಷಣೆಯನ್ನು ಹೊರಡಿಸಿದೆ. ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿದವರು ಇನ್ನುಮುಂದೆ ಈ ಸೌಲಭ್ಯವನ್ನು ಪಡೆಯಲು ಆಗುವುದಿಲ್ಲ. ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಇನ್ನುಮುಂದೆ ವಿಮಾನ ನಿಲ್ದಾಣದಲ್ಲಿ ದೇಶಿಯ ಲಾಂಜ್ ಗಳನ್ನೂ ಬಳಸಲು ಸಾಧ್ಯವಾಗುವುದಿಲ್ಲ.

SBI credit users can now not get any kind of cash on financial transactions.
Image Credit: teluguwiki

ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ
ಎಸ್ ಬಿಐ ಕ್ರೆಡಿಟ್ ಕಾರ್ಡ್ ನಲ್ಲಿನ ಹೊಸ ನಿಯಮವು ಮೇ 1 2023 ರಿಂದ ಜಾರಿಗೆ ಬರಲಿದೆ.
ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, ಆನ್ಲೈನ್ ಮತ್ತು ಆಫ್ ಲೈನ್ ಖರ್ಚುಗಳಿಗಾಗಿ ಕ್ಯಾಶ್ ಬ್ಯಾಕ್ SBI ಕಾರ್ಡ್ ಗ್ರಾಹಕರಿಗೆ ಗರಿಷ್ಟ 5000 ರೂ. ವರೆಗೆ ಕ್ಯಾಶ್ ಬ್ಯಾಕ್ ಕ್ರೆಡಿಟ್ ಮಾಡಲಾಗುತ್ತದೆ.

SBI ಕ್ರೆಡಿಟ್ ಬಳಸುವವರು ಈಗ ಹಣಕಾಸಿನ ವ್ಯವಹಾರದ ಮೇಲೆ ಯಾವುದೇ ರೀತಿಯ ಕ್ಯಾಶ್ ಪಡೆಯಲು ಸಾಧ್ಯವಿಲ್ಲ. ಇನ್ನುಮುಂದೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಇತರ ಹಣಕಾಸು ವಹಿವಾಟುಗಳಲ್ಲಿ ಕ್ಯಾಶ್ ಬ್ಯಾಕ್ ಸೌಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ಸ್ ಮೂಲಕ ಎಷ್ಟೇ ಹಣಕಾಸಿನ ವ್ಯವಹಾರ ಮಾಡಿದರು ಯಾವುದೇ ರೀತಿಯ ಕ್ಯಾಶ್ ಬ್ಯಾಕ್ ಸಿಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group