SBI Update: SBI ನಲ್ಲಿ ಖಾತೆ ಇದ್ದವರು ತಕ್ಷಣ ಬ್ಯಾಂಕಿಗೆ ಹೋಗಿ ಸಹಿ ಮಾಡಿ, ಇಲ್ಲವಾದರೆ ಸ್ಥಗಿತವಾಗಲಿದೆ ನಿಮ್ಮ ವ್ಯವಹಾರ

ನಿಗದಿತ ಸಮಯದೊಳಗೆ SBI ಗ್ರಾಹಕರು ಈ ಕೆಲಸ ಮಾಡದಿದ್ದರೆ ಸ್ಥಗಿತವಾಗಲಿದೆ ನಿಮ್ಮ ವ್ಯವಹಾರ.

SBI New Locker Rule And regulations: ಇನ್ನು ದೇಶದ ಎಲ್ಲ ಬ್ಯಾಂಕ್ ಗಳು ಗ್ರಾಹಕರಿಗೆ Bank locker ಸೌಲಭ್ಯವನ್ನು ನೀಡುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಗ್ರಾಹಕರು ತಮ್ಮ ಬೆಲೆ ಬಾಳುವ ವಸ್ತುಗಳನ್ನು, ಮುಖ್ಯ ದಾಖಲೆಗಳನ್ನು ಇರಿಸಲು ಬ್ಯಾಂಕ್ ಲಾಕರ್ ಅನ್ನು ಬಳಸುತ್ತಾರೆ. ಗ್ರಾಹಕರು ತಮ್ಮ ವಸ್ತುಗಳ ಸುರಕ್ಷತೆಗಾಗಿ ಲಾಕರ್ ಅನ್ನು ಬಳಸುತ್ತಾರೆ.

ಸದ್ಯ RBI ಬ್ಯಾಂಕ್ ಲಾಕರ್ ಗೆ ಸಂಬಂಧಿಸಿದಂತೆ ಈಗಾಗಲೇ ಆದೇಶವನ್ನು ಹೊರಡಿಸಿದೆ. ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ ಆದೇಶಿಸಿದೆ. ಸದ್ಯ RBI ಆದೇಶಕ್ಕೆ ಅನುಗುಣವಾಗಿ ದೇಶದ ಈ ಬ್ಯಾಂಕ್ ತಮ್ಮ ಗ್ರಾಹಕರಿಗೆ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ಗಡುವನ್ನು ನೀಡಿದೆ. ನಿಗದಿತ ಸಮಯದೊಳಗೆ SBI ಗ್ರಾಹಕರು ಈ ಕೆಲಸ ಮಾಡದಿದ್ದರೆ ನೀವು ಬ್ಯಾಂಕ್ ಸೇವೆಯಿಂದ ವಂಚಿತರಾಗಬಹುದು.

SBI New Locker Rule
Image Credit: Rightsofemployees

SBI ನಲ್ಲಿ ಖಾತೆ ಇದ್ದವರು ತಕ್ಷಣ ಬ್ಯಾಂಕಿಗೆ ಹೋಗಿ ಸಹಿ ಮಾಡಿ
ಹೆಚ್ಚಿನ ಎಲ್ಲಾ ಬ್ಯಾಂಕುಗಳು ಗ್ರಾಹಕರ ಹಕ್ಕುಗಳನ್ನು ಒಳಗೊಂಡಿರುವ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದವನ್ನು ನೀಡಿವೆ. ಬ್ಯಾಂಕ್ ಲಾಕರ್ ಗ್ರಾಹಕರು ಅದರಲ್ಲಿ ಸಹಿ ಮಾಡಬೇಕಾಗುತ್ತದೆ. ಬ್ಯಾಂಕ್‌ ಗಳು ತಮ್ಮ ಗ್ರಾಹಕರನ್ನು ಫೋನ್ ಕರೆಗಳು, SMS ಮತ್ತು ಇಮೇಲ್‌ ಗಳ ಮೂಲಕ ಬ್ಯಾಂಕ್‌ ಗೆ ಭೇಟಿ ನೀಡುವಂತೆ ಕೇಳುತ್ತಿವೆ. ಅಷ್ಟೇ ಅಲ್ಲ ಬ್ಯಾಂಕ್‌ ಗಳು ಗ್ರಾಹಕರಿಗೆ ಸ್ಟಾಂಪ್ ಪೇಪರ್‌ ಗಳನ್ನು ಇಡುತ್ತಿವೆ.

ಸ್ಥಗಿತವಾಗಲಿದೆ ನಿಮ್ಮ ವ್ಯವಹಾರ

ಹೀಗಾಗಿ ಗ್ರಾಹಕರು ಬ್ಯಾಂಕ್‌ ಗೆ ಬಂದು ಸಹಿ ಹಾಕುವುದು ಅವಶ್ಯಕವಾಗಿದೆ. ಗ್ರಾಹಕರು ಬ್ಯಾಂಕ್‌ ಗೆ ಹೋಗಿ ತಮ್ಮ ಆಧಾರ್, ಪ್ಯಾನ್ ಮತ್ತು ಫೋಟೋವನ್ನು ನೀಡಬೇಕು. ಅಲ್ಲದೆ, ಸ್ಟಾಂಪ್ ಪೇಪರ್ ಮತ್ತು ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ. 31 ಡಿಸೆಂಬರ್ 2023 ರೊಳಗೆ ಬ್ಯಾಂಕ್ ಲಾಕರ್ ಹೊಂದಿರುವವರು ಹೊಸ ಒಪ್ಪಂದಕ್ಕೆ ಸಹಿ ಹಾಕುವಂತೆ State Bank Of India ತನ್ನ ಗ್ರಾಹಕರಿಗೆ ಆದೇಶಿಸಿದೆ. ನೀವು SBI ಬ್ಯಾಂಕ್ ಗ್ರಾಹಕರಾಗಿದ್ದರೆ ಇಂದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಲಾಕರ್ ಒಪ್ಪಂದವನ್ನು ಪೂರ್ಣಗೊಳಿಸಿಕೊಳ್ಳಿ.

Join Nadunudi News WhatsApp Group

SBI Locker Charges
Image Credit: ETV Bharat

SBI Locker charges
*ಬ್ಯಾಂಕ್ ನಗರ ಮತ್ತು ಮೆಟ್ರೋ ಗ್ರಾಹಕರಿಗೆ ರೂ 2000 + ಜಿಎಸ್‌ಟಿ ಮತ್ತು ಗ್ರಾಮೀಣ ಮತ್ತು ಅರೆ-ನಗರ ಗ್ರಾಹಕರಿಗೆ ರೂ 1500 + ಜಿಎಸ್‌ಟಿ ವಿಧಿಸುತ್ತದೆ.

*SBI ಬ್ಯಾಂಕ್ ನಗರ ಮತ್ತು ಮೆಟ್ರೋ ಗ್ರಾಹಕರಿಗೆ ರೂ 4000 + GST ​​ಮತ್ತು ಗ್ರಾಮೀಣ ಮತ್ತು ಅರೆ ನಗರ ಗ್ರಾಹಕರಿಗೆ ರೂ 3000 + GST ​​ವಿಧಿಸುತ್ತದೆ.

*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಗರ ಮತ್ತು ಮೆಟ್ರೋ ಗ್ರಾಹಕರಿಗೆ ರೂ.8,000+GST ಮತ್ತು ಗ್ರಾಮೀಣ ಮತ್ತು ಅರೆ-ನಗರ ಗ್ರಾಹಕರಿಗೆ ರೂ.6,000+GST ವಿಧಿಸುತ್ತದೆ.

*ಎಸ್ ಬಿಐ ನಗರ ಮತ್ತು ಮೆಟ್ರೋ ಗ್ರಾಹಕರಿಗೆ 12,000 ಶುಲ್ಕವನ್ನು ವಿಧಿಸಿದೆ.

Join Nadunudi News WhatsApp Group