KSRTC Ticket: ಬಸ್ಸಿನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಗುಡ್ ನ್ಯೂಸ್, ಇನ್ಮುಂದೆ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದುಕೊಳ್ಳಿ.

KSRTC ಬಸ್ಸಿನಲ್ಲಿ ಇನ್ಮುಂದೆ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದುಕೊಳ್ಳಿ

Scanner For KSRTC Bus Ticket: ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಜಾರಿಯಾಗುತ್ತಿದೆ. ರಾಜ್ಯದ ಜನತೆ ಕರ್ನಾಟಕ ಸರ್ಕಾರ ನೀಡುತ್ತಿರುವ ಎಲ್ಲ ರೀತಿಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇನ್ನು ಬಸ್ ಪ್ರಯಾಣದಲ್ಲಿ ತೊಂದರೆ ಆಗದಿರಲು ಸರ್ಕಾರ ಹೆಚ್ಚಿನ ನಿಗಾ ವಹಿಸುತ್ತಿದೆ. ಮೊದಲೆಲ್ಲ ಬಸ್ ಗಳಲ್ಲಿ ಚಿಲ್ಲರೆಗಾಗಿ ಬಾರಿ ಜಗಳಗಳು ಉಂಟಾಗುತ್ತಿದ್ದವು. ಇನ್ನು ಉಚಿತ ಪ್ರಯಾಣ ಜಾರಿಗೆ ಬಂದಾಗಿನಿಂದ ಮಹಿಳೆಯರು ಯಾವುದೇ ಹಣವನ್ನು ನೀಡದೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ.

ಆದರೆ ಪುರುಷ ಪ್ರಯಾಣಿಕರು ಬಸ್ ಗಳಲ್ಲಿ ಪ್ರಯಾಣಿಸುವ ಹಣವನ್ನು ನೀಡಬೇಕಾಗಿದೆ. ಪುರುಷರಿಗೆ ಉಚಿತ ಬಸ್ ಪ್ರಯಾಣದ ಅನುಕೂಲವಿಲ್ಲ. ಪುರುಷರು ಇಂದಿಗೂ ಕೂಡ ಬಸ್ ನಲ್ಲಿ ಚಿಲ್ಲರೆಗಾಗಿ ಕಂಡಕ್ಟರ್ ಜೊತೆ ಜಗಳವಾಡುವುದನ್ನ ನಾವು ಹಲವು ಬಾರಿ ನೋಡಿದ್ದೇವೆ. ಇದೀಗ ಕರ್ನಾಟಕ ಸರ್ಕಾರ ಬಸ್ ಪ್ರಯಾಣದಲ್ಲಿ ಚಿಲ್ಲರೆಗಾಗಿ ಉಂಟಾಗುವ ಸಮಸ್ಯೆಗೆ ಹೊಸ ರೀತಿಯ ಪರಿಹಾರವನ್ನು ಕಂಡುಹಿಡಿದಿದೆ. ಕರ್ನಾಟಕ ಸರ್ಕಾರದ ಈ ಹೊಸ ಸೌಲಭ್ಯದಿಂದ ಜನರು ಹೆಚ್ಚಿನ ಅನುಕೂಲವನ್ನು ಪಡೆಯಬಹುದಾಗಿದೆ.

Scanner For KSRTC Bus Ticket
Image Credit: onmanorama

ಬಸ್ಸಿನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಗುಡ್ ನ್ಯೂಸ್
ಈಗ ದೇಶದ ಜನರು ಕ್ಯಾಶ್ ಲೆಸ್ ಮೋಡ್‌ ನತ್ತ ಮುಖ ಮಾಡಿದ್ದಾರೆ. ಹಣ ತೆಗೆದುಕೊಂಡು ಹೋಗುವುದನ್ನು ಮರೆತಿದ್ದಾರೆ. ಫೋನ್ ಇದ್ದರೆ ಸಾಕು ಎಂದು ಅವರು ಭಾವಿಸುತ್ತಾರೆ. ಎಲ್ಲೆಡೆ ಯುಪಿಎ ಬಳಕೆ ಹೆಚ್ಚಾಗಿದೆ. ಇದನ್ನು ಮನಗಂಡ KSRTC, ಬಸ್ ಗಳಲ್ಲಿ ಟಿಕೆಟ್ ಕೊಳ್ಳಲು ಯುಪಿಎ ಪಾವತಿಗೂ ಅವಕಾಶ ಕಲ್ಪಿಸಲಿದೆ. ಇದೇ ಜೂನ್ 25 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಗಳ ಮೂಲಕ ಪಾವತಿಸಬಹುದು.

ಇನ್ಮುಂದೆ ಸ್ಕ್ಯಾನ್ ಮಾಡಿ ಟಿಕೆಟ್ ಪಡೆದುಕೊಳ್ಳಿ
KSRTC ಜೂನ್ 25 ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ETM) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ. ಎಲ್ಲಾ ಕಂಡಕ್ಟರ್‌ ಗಳಿಗೆ ತರಬೇತಿ ನೀಡಿದ ನಂತರ ಕೆಲವೇ ವಾರಗಳಲ್ಲಿ ಇದನ್ನು ಎಲ್ಲಾ ಬಸ್‌ ಗಳಿಗೆ ವಿಸ್ತರಿಸಲಾಗುವುದು. ಸಾರಿಗೆ ನಿಗಮವು 10,245 ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂ. ಬಾಡಿಗೆಗೆ ತೆಗೆದುಕೊಂಡಿದೆ. ಮೊದಲು ಪ್ರಯೋಗ ನಡೆಸಿ ಎಲ್ಲೆಡೆ ಅಳವಡಿಸಲು ಪ್ರಯತ್ನಿಸುತ್ತೇವೆ ಎಂದು ಕೆಎಸ್ ಆರ್ ಟಿಸಿ ಎಂಡಿ ಅನ್ಬುಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇನ್ನುಮುಂದೆ ಬಸ್ ನಲ್ಲಿ ಪುರುಷರು ತಮ್ಮ ಮೊಬೈಲ್ ಮೂಲಕ ಸ್ಕಾನ್ ಮಾಡಿ ಹಣ ಪವತಿಸಿ ಟಿಕೆಟ್ ಪಡೆದುಕೊಳ್ಳಬಹುದು.

 KSRTC Bus Ticket Latest News
Image Credit: Economic Times

Join Nadunudi News WhatsApp Group

Join Nadunudi News WhatsApp Group