School Admission: ಇದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳನ್ನ 1 ನೇ ತರಗತಿಗೆ ಸೇರಿಸುವಂತಿಲ್ಲ, ಪೋಷಕರಿಗೆ ಹೊಸ ರೂಲ್ಸ್

ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ವಯೋಮಿತಿ ಕಡ್ಡಾಯ, ಹೊಸ ನಿಯಮ

School Admission Rule Change: ಸದ್ಯ ದೇಶದಲ್ಲಿ 2023 -24 ನೇ ಸಾಲಿನ ಶಿಕ್ಷಣ ನೀತಿಯಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ಆಗಿದೆ. ಈಗಾಗಲೇ 5, 8,10, 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಹೊಸ ನಿಯಮಗಳು ಬಿಡುಗಡೆಗೊಂಡಿವೆ. ಇದೀಗ 2024 -25 ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಸೇರುವ ವಿದ್ಯಾರ್ಥಿಗಳಿಗೆ ಹೊಸ ನಿಯಮವನ್ನು ಶಿಕ್ಷಣ ಇಲಾಖೆ ಸೂಚಿಸಿದೆ. ಹೊಸ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳನ್ನು ಶಾಲೆ ಸೇರಿಸುವ ಪೋಷಕರು ಈ ನಿಯಮವನ್ನು ತಿಳಿದುವುದು ಅಗತ್ಯವಾಗಿದೆ.

School Admission Rule Change
Image Credit: Connectgujarat

1 ನೇ ತರಗತಿ ದಾಖಲಾತಿಯಲ್ಲಿ ಹೊಸ ನಿಯಮ
ಪ್ರಸ್ತುತ ಶಾಲಾ ವಿದ್ಯಾರ್ಥಿಗಳು 2023 -24 ರ ಶೈಕ್ಷಣಿಕ ಸಾಲಿನ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿದ್ದರೆ. ಇನ್ನೇನು ಕೆಲವೇ ತಿಂಗಳಿನಲ್ಲಿ ವಾರ್ಷಿಕ ಪರೀಕ್ಷೆ ಬರಲಿದ್ದು ವಿದ್ಯಾರ್ಥಿಗಳು ಅದರಲ್ಲಿ ಉತ್ತೀರ್ಣರಾಗಿ ಮುಂದಿನ ತರಗತಿಗೆ ಸೇರಲಿದ್ದಾರೆ. ಸದ್ಯ ಶಿಕ್ಷಣ ಇಲಾಖೆಯು 2024 -25 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಯ ದಾಖಲಾತಿಯಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ವಯೋಮಿತಿಯನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದೆ.

ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ವಯೋಮಿತಿ ಕಡ್ಡಾಯ
ಕೇಂದ್ರದ ಶಿಕ್ಷಣ ಇಲಾಖೆ ಎಲ್ಲಾ ರಾಜ್ಯದ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy) ಜಾರಿಗೊಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (RTE) ಕಾಯಿದೆ, 2009 ಗೆ ಅನುಗುಣವಾಗಿ, 1 ನೇ ತರಗತಿಗೆ ಪ್ರವೇಶಕ್ಕಾಗಿ ಕನಿಷ್ಠ 6 ವಯಸ್ಸನ್ನು ನಿಗದಿಪಡಿಸುವಂತೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

2024-25 ಅಧಿವೇಶನವು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಮತ್ತು ಹೊಸ ಪ್ರವೇಶಗಳು ನಡೆಯುತ್ತವೆ. ನಿಮ್ಮ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಲ್ಲಿ ಕ್ಲಾಸ್-1 ಗೆ ಪ್ರವೇಶದಲ್ಲಿ ವಯಸ್ಸನ್ನು 6 + ಗೆ ನಿಗದಿಪಡಿಸಲಾಗಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವಾಲಯವು ಫೆ. 15 ರಂದು ಪತ್ರದಲ್ಲಿ ಮಾಹಿತಿ ನೀಡಿದೆ.

Join Nadunudi News WhatsApp Group

Join Nadunudi News WhatsApp Group