School Holiday: 2024 -25 ನೇ ಸಾಲಿನ ಶಾಲಾ ಮಕ್ಕಳ ಮತ್ತು ಶಿಕ್ಷಕರ ರಜಾ ಪಟ್ಟಿ ಬಿಡುಗಡೆ, ಇಷ್ಟು ದಿನ ರಜೆ ಘೋಷಣೆ.

2024 -25 ನೇ ಸಾಲಿನ ಶಾಲಾ ಮಕ್ಕಳ ಮತ್ತು ಶಿಕ್ಷಕರ ರಜಾ ಪಟ್ಟಿ ಬಿಡುಗಡೆ

School Holiday Details: ಪ್ರಸ್ತುತ 2023 -24 ರ ಶೈಕ್ಷಣಿಕ ವರ್ಷ ಮುಗಿಯುತ್ತಿದೆ. ರಾಜ್ಯ ಪಠ್ಯಕ್ರಮದ ಸರ್ಕಾರೀ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024 -25 ಸಾಲಿನ ಶೈಕ್ಷಣಿಕ ವರ್ಷ ಇನ್ನೇನ್ನು ಸದ್ಯದಲ್ಲೇ ಆರಂಭವಾಗಲಿದೆ.

ವಿದ್ಯಾರ್ಥಿಗಳಿಗೆ ಪ್ರಸಕ್ತ ತರಗತಿಯ ಫಲಿತಾಂಶ ಪ್ರಕಟಿಸಿ, ಬೇಸಿಗೆ ರಜೆ ಘೋಷಣೆ ಆಗಲಿದೆ. ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿ ಶಾಲಾ ಮಕ್ಕಳ ರಜಾ ಪಟ್ಟಿ ಬಿಡುಗಡೆ ಮಾಡುವುದರ ಜೊತೆಗೆ 2024 -25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕೆಲ ಮಾರ್ಗಸೂಚಿಯನ್ನು ಪ್ರಕಟಿಸಿದೆ.

School Holiday Details
Image Credit: Lehleo

2024 -25 ನೇ ಸಾಲಿನ ಶಾಲಾ ಮಕ್ಕಳ ಮತ್ತು ಶಿಕ್ಷಕರ ರಜಾ ಪಟ್ಟಿ ಬಿಡುಗಡೆ
ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2024-25 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ/ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಶೈಕ್ಷಣಿಕ ವರ್ಷದ 2023-24 ರ ಚಟುವಟಿಕೆಗಳು ಮುಕ್ತಾಯಗೊಳ್ಳುತ್ತಿವೆ ಮತ್ತು ಮುಂದಿನ ಶೈಕ್ಷಣಿಕ ವರ್ಷ 2024-25 ಪ್ರಾರಂಭವಾಗಲಿದೆ. ರಾಜ್ಯದಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನೂ ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ ಮಾರ್ಗಸೂಚಿಯನ್ನು ಸಿದ್ದಪಡಿಸಲಾಗಿದೆ.

ಇಷ್ಟು ದಿನ ರಜೆ ಘೋಷಣೆ
ಈ ಮಾರ್ಗಸೂಚಿಗಳಲ್ಲಿ, ವಾರ್ಷಿಕ/ಮಾಸಿಕ ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶ-ಆಧಾರಿತ ಚಟುವಟಿಕೆಗಳು, ಶನಿವಾರ (ನೋ ಬ್ಯಾಗ್ ಡೇ) ಆಚರಣೆಯ ಜೊತೆಗೆ ಪಠ್ಯಕ್ರಮ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಮತ್ತು ವಿವಿಧ ಶಾಲಾ ಮಟ್ಟದ CCE (ಪರೀಕ್ಷೆಗಳು/ ಮೌಲ್ಯಮಾಪನ, ವಿಶ್ಲೇಷಣೆ) ಚಟುವಟಿಕೆಗಳನ್ನು ಯೋಜಿಸಲಾಗಿದೆ ಮತ್ತು ಸಿದ್ಧಪಡಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಎಂದಿನಂತೆ ಅಗತ್ಯ ಸಿದ್ಧತೆಗಾಗಿ ದಿನಾಂಕ: 29.05.2024 ರಿಂದ ಶಾಲೆಯನ್ನು ಮರು ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ, ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

School Holiday Announcement
Image Credit: Informalnewz

Join Nadunudi News WhatsApp Group

Join Nadunudi News WhatsApp Group