School Reopening: ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಬಿಗ್ ಅಪ್ಡೇಟ್, ಈ ದಿನದಂದು ಶಾಲೆಗೆ ಹೋಗಲು ತಯಾರಾಗಿ.

2024 -25 ನೇ ಸಾಲಿನ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಬಗ್ಗೆ ಇಲಾಖೆಯಿಂದ ಬಿಗ್ ಅಪ್ಡೇಟ್

School Reopening Date: ಪ್ರಸ್ತುತ ಶಾಲಾ ಮಕ್ಕಳು ಬೇಸಿಗೆ ರಜೆಯಲ್ಲಿದ್ದಾರೆ. ಇದೀಗ 2023 -24 ರ ಶೈಕ್ಷಣಿಕ ವರ್ಷ ಮುಗಿದಿದ್ದು, ರಾಜ್ಯ ಪಠ್ಯಕ್ರಮದ ಸರ್ಕಾರೀ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024 -25 ಸಾಲಿನ ಶೈಕ್ಷಣಿಕ ವರ್ಷ ಇನ್ನೇನ್ನು ಸದ್ಯದಲ್ಲೇ ಆರಂಭವಾಗಲಿದೆ.

ವಿದ್ಯಾರ್ಥಿಗಳಿಗೆ ಪ್ರಸಕ್ತ ತರಗತಿಯ ಫಲಿತಾಂಶ ಪ್ರಕಟಿಸಿ, ಬೇಸಿಗೆ ರಜೆ ಘೋಷಣೆ ಆಗಲಿದೆ. ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿ 2024 -25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕೆಲ ಮಾರ್ಗಸೂಚಿಯನ್ನು ಪ್ರಕಟಿಸಿದೆ. 2024 -25 ನೇ ಸಾಲಿನ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಬಗ್ಗೆ ಇಲಾಖೆಯಿಂದ ಅಪ್ಡೇಟ್ ಹೊರಬಿದ್ದಿದೆ.

School Reopening Date
Image Credit: Thehindu

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಬಿಗ್ ಅಪ್ಡೇಟ್
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2024-25 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮೇ 29 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 18 ದಿನಗಳ ದಸರಾ ರಜೆ, 48 ದಿನಗಳ ಬೇಸಿಗೆ ರಜೆ ಮತ್ತು 244 ದಿನಗಳ ಶಾಲಾ ಕರ್ತವ್ಯದ ದಿನಗಳನ್ನು ನಿಗದಿಪಡಿಸಲಾಗಿದೆ. ಮಕ್ಕಳು ಮತ್ತು ಶಿಕ್ಷಕರು ಒಟ್ಟು 121 ದಿನಗಳ ರಜೆಯನ್ನು ಪಡೆಯುತ್ತಾರೆ. ಪ್ರಸಕ್ತ ವರ್ಷದಲ್ಲಿ ಎಂದಿನಂತೆ ಅಗತ್ಯ ಸಿದ್ಧತೆಗಾಗಿ ದಿನಾಂಕ: 29.05.2024 ರಿಂದ ಶಾಲೆಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ, ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

ಈ ದಿನದಂದು ಶಾಲೆಗೆ ಹೋಗಲು ತಯಾರಾಗಿ
ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ವರ್ಷದಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನಕ್ಕೆ ಸಹಾಯ ಮಾಡಲು, ಶೈಕ್ಷಣಿಕ ಚಟುವಟಿಕೆಯ ಅವಧಿಗಳು ಒಟ್ಟು ವಾರ್ಷಿಕ ದಿನಗಳು, ರಜೆಗಳ ಪ್ರಕಾರ, ವಾರ್ಷಿಕ ಕಾರ್ಯಸೂಚಿಯಲ್ಲಿ ಈ ಕೆಳಗಿನಂತೆ ಹೊಂದಿಸಲಾಗಿದೆ ಮತ್ತು ಎಲ್ಲಾ ಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮವನ್ನು ಅಳವಡಿಸಲು ಮತ್ತು ಅನುಸರಿಸಲು ಸೂಚಿಸಲಾಗಿದೆ.

School Reopening 2024-25
Image Credit: India

Join Nadunudi News WhatsApp Group

Join Nadunudi News WhatsApp Group