Summer Holiday: ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ಇಷ್ಟು ದಿನ ಬೇಸಿಗೆ ರಜೆ ಘೋಷಣೆ

ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಇಷ್ಟು ದಿನ ಬೇಸಿಗೆ ರಜೆ ಘೋಷಣೆ

School Summer Holidays 2024: ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಅನೇಕ ನಿಯಮಗಳ ಜೊತೆಗೆ ವಿವಿಧ ಸೌಲಭ್ಯವನ್ನು ಜಾರಿಗೆ ತಂದಿದ್ದಾರೆ. ಪ್ರಸ್ತುತ ಶಾಲಾ ವಿದ್ಯಾರ್ಥಿಗಳು 2023 -24 ರ ಶೈಕ್ಷಣಿಕ ಸಾಲಿನ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿದ್ದಾರೆ.

ಸದ್ಯ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬೇಸಿಗೆ ರಜೆ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಆದೇಶವನ್ನು ಹೊರಡಿಸಿದೆ. ಇದೀಗ ಶಾಲಾ ಮಕ್ಕಳಿಗೆ ಈ ಬಾರಿ ಎಷ್ಟು ದಿನಗಳ ಕಾಲ ರಜೆ ಇರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

School Summer Holidays 2024
Image Credit: Jagranjosh

ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಇಷ್ಟು ದಿನ ಬೇಸಿಗೆ ರಜೆ ಘೋಷಣೆ
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಶೈಕ್ಷಣಿಕ ಮಾರ್ಗದರ್ಶಿ 2023-24ರ ಪ್ರಕಾರ, ಶೈಕ್ಷಣಿಕ ವರ್ಷದ 1 ನೇ ತರಗತಿಯಿಂದ 9ನೇ ತರಗತಿವರೆಗಿನ ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಏಪ್ರಿಲ್ 1 ರಿಂದ 5 ರ ನಡುವೆ ಮೌಲ್ಯಮಾಪನ ಕಾರ್ಯ ನಡೆಯಲಿದೆ. ಏಪ್ರಿಲ್ 8 ರಂದು ಪ್ರಾಥಮಿಕ ಶಾಲಾ ತರಗತಿಗಳ ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 10 ರಂದು 8 ಮತ್ತು 9 ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ.

ಸದ್ಯ ಕರ್ನಾಟಕದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಈ ಬಾರಿ ಏಪ್ರಿಲ್ 11 ರಿಂದ ಮೇ 28 ರವರೆಗೆ ಬೇಸಿಗೆ ರಜೆಯನ್ನು ಶಾಲಾ ಶಿಕ್ಷಣ ಇಲಾಖೆ ಘೋಷಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಆದೇಶದಂತೆ ಶಾಲೆಗಳಿಗೆ ಏಪ್ರಿಲ್ 11ರಿಂದ ಮೇ 28ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದ್ದು ಮೇ 29 ರಿಂದ ಶಾಲೆಗಳು ಪುನರಾರಂಭವಾಗಲಿದೆ.

School Summer Holidays Update
Image Credit: Sakshi

ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಬಿಸಿಯೂಟ
ಇನ್ನುಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಕೂಡ ಬಿಸಿಯೂಟ ನೀಡಲಾಗುತ್ತದೆ. ಹೌದು ಇದೀಗ ಸರ್ಕಾರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರೀ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಮಧ್ಯಾಹ್ನದ ಬಿಸಿಯೂಟ ಮುಂದುವರೆಸಲು ಚಿಂತನೆ ನೆಡೆಸುತ್ತಿದೆ.

Join Nadunudi News WhatsApp Group

ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸದ್ಯ CM ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನೆಡೆಸಿ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿಯೂ ಬಿಸಿಯೂಟ ಮುಂದುವರೆಸಲು ಅನುಮೋದನೆ ಪಡೆದ ಬಳಿಕ ಆದೇಶ ಹೊರಡಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

School Summer Vacation 2024
Image Credit: Informal Newz

Join Nadunudi News WhatsApp Group