Traffic Rule: ಹಳೆಯ ವಾಹನಗಳಿಗೆ ಹೊಸ ನಿಯಮ, ವಾಹನ ವಶಪಡಿಸಿಕೊಂಡು ಹಣ ನಿಮ್ಮ ಖಾತೆಗೆ ಹಾಕಲಾಗುತ್ತದೆ.

ವಾಯುಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಹೊಸ ನಿಯಮ, ಹಳೆಯ ವಾಹನಗಳ ನೋಂದಣಿ ರದ್ದುಗೊಳಿಸಿದ ಸರ್ಕಾರ.

Scrap Vehicle policy: ದೇಶದಲ್ಲೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿದೆ. ಹೊಸ ಹೊಸ ರೀತಿಯ ನಿಯಮಗಳನ್ನು ಸಂಚಾರ ನಿಯಮದಲ್ಲಿ ಅಳವಡಿಸಲಾಗುತ್ತಿದೆ. ಇನ್ನು ಈ ಹಿಂದೆ ಸರ್ಕಾರ ಮೋಟಾರು ಕಾಯ್ದೆಯಡಿಯಲ್ಲಿ ವಿವಿಧ ನಿಯಮಗಳನ್ನು ಜಾರಿಗೊಳಿಸಿದೆ.

ಇನ್ನು ಸಂಚಾರ ನಿಯಮದಲ್ಲಿ ಅನೇಕ ನಿಯಮಗಳನ್ನು ಬದಲಾಯಿಸಿದರು ಕೂಡ ವಾಯುಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾಯುಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿತ್ತು.

10 ವರ್ಷಗಳ ಹಳೆಯ ವಾಹನಗಳ ನೋಂದಣಿ ರದ್ದುಗೊಳಿಸಿದ ಸರ್ಕಾರ
ಸದ್ಯ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಹೆಚ್ಚಾಗಿ ಕಾಣಿಸುತ್ತಿದೆ. ಇನ್ನು ಟ್ರಾಫಿಕ್ ನ ನಿಯಂತ್ರಣ ಮಾಡುವುದಕ್ಕೆ ಸರ್ಕಾರ ಸಾಕಷ್ಟು ನಿಯಮಗಳನ್ನು ಜಾರಿ ಮಾಡುತ್ತಿದೆ.

Govt cancels registration of 10 year old vehicles
Image Credit: News18

ಇನ್ನೊಂದೆಡೆ ಹಳೆಯ ವಾಹನಗಳು ನಗರದಲ್ಲಿ ಹೆಚ್ಚಿನ ಮಾಲಿನ್ಯವನ್ನು ಉಂಟು ಮಾಡುತ್ತಿವೆ. ಈ ನಿಟ್ಟಿನಲ್ಲಿ ಸರಕಾರ ಹಳೆಯ ವಾಹನಗಳ ನೋಂದಣಿ ರದ್ದುಗೊಳಿಸಲು ನಿರ್ಧರಿಸಿದೆ.

ಇನ್ನು ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಸಂಚಾರಿ ಪೊಲೀಸರು ಹಳೆಯ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.

Join Nadunudi News WhatsApp Group

ಹಳೆಯ ವಾಹನಗಳನ್ನು ಜಪ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸರು
ವಾಯುಮಾಲಿನ್ಯದ ಸಮಸ್ಯೆಯು ದೆಹಲಿಯಲ್ಲಿ ಹೆಚ್ಚುತ್ತಿರುವ ಕಾರಣ ಪೊಲೀಸರು ಹಳೆಯ ವಾಹನ ಜಪ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.ದೆಹಲಿಯಲ್ಲಿ ಇದೀಗ ರಸ್ತೆಗಿಳಿದ 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ವಶಪಡಿಸಿಕೊಂಡು ಸ್ಕ್ರಾಪ್ ನೀತಿಯಡಿ ಸ್ಕ್ರಾಪ್ ಘಟಕಗಳಿಗೆ ಕಳುಹಿಸಲಾಗುತ್ತಿದೆ.

Govt cancels registration of 10 year old vehicles
Image Credit: Financialexpress

ಸರ್ಕಾರವು ಸ್ಕ್ರ್ಯಾಪ್ ನೀತಿಯಡಿಯಲ್ಲಿ ಪಡೆದ ಮೊತ್ತವನ್ನು ವಾಹನವು ಯಾರ ಹೆಸರಿನಲ್ಲಿದೆಯೋ ಅವರ ಖಾತೆಗೆ ವರ್ಗಾಯಿಸುತ್ತದೆ. ನಿಮ್ಮ ಹಳೆಯ ವಾಹನವು ಸ್ಕ್ರ್ಯಾಪ್ ಆಗಿದ್ದರೂ ಸಹ ನಿಮ್ಮ ಹೊಸ ವಾಹನಕ್ಕೆ ಅದೇ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬಹುದು. ಇನ್ನು ನಿಮ್ಮ ಹಳೆಯ ವಾಹನಗಳಿದ್ದರೆ ಎಚ್ಚರ ವಹಿಸುವುದು ಸೂಕ್ತ.

Join Nadunudi News WhatsApp Group