SEBI Rule: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಜನವರಿ 1 ರಿಂದ ಹೊಸ ನಿಯಮ, SEBI ಆದೇಶ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ SEBI ಇಂದ ಹೊಸ ನಿಯಮ.

SEBI New Rule For Stock Market Investors: ಜನರು ಹೆಚ್ಚಾಗಿ ತಮ್ಮ ಉಳಿತಾಯದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇನ್ನು Stock Market ನಲ್ಲಿನ ಹೂಡಿಕೆಯು ಎಷ್ಟು ಲಾಭದಾಯಕವೋ ಒಮ್ಮೊಮ್ಮೆ ಅಷ್ಟೇ ಅಪಾಯವನ್ನು ನೀಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಎಂದರೆ ಕಂಪನಿಯ ಷೇರುಗಳನ್ನು ಖರೀದಿಸುವುದು.

ನೀವು ಷೇರುಗಳನ್ನು ಖರೀದಿಸಲು ಬಯಸಿದರೆ, ನೀವು ಮೊದಲು ಷೇರು ವಿನಿಮಯ ಕೇಂದ್ರದ SEBI ಯಲ್ಲಿ ನೋಂದಾಯಿಸಿಕೊಳ್ಳಬೇಕು. ನೀವು ಹೂಡಿಕೆಯನ್ನು ಪ್ರಾರಂಭಿಸುವ ಮೊದಲು ನೀವು ಹೂಡಿಕೆದಾರರಾಗಿ ನೋಂದಾಯಿಸಿಕೊಳ್ಳಬೇಕು.

 

Securities and Exchange Board of India (SEBI)
ಇನ್ನು ಷೇರು ಮಾರುಕಟ್ಟೆಯಲ್ಲಿನ ಹೂಡಿಕೆದಾರರಿಗಾಗಿ Securities and Exchange Board of India ಅನೇಕ ನಿಯಮಗಳನ್ನು ಪರಿಚಯಿಸಿದೆ. ತನ್ನ ಹೂಡಿಕೆದಾರರ ಭದ್ರತೆಗಾಗಿ SEBI ಹೆಚ್ಚಿನ ನಿಗಾ ವಹಿಸುತ್ತದೆ. ಸದ್ಯ SEBI ಪ್ರಮುಖ ನವೀಕರಣವನ್ನು ಬಿಡುಗಡೆ ಮಾಡಿದೆ. ಇದೀಗ SEBI ತನ್ನ ಹೂಡಿಕೆದಾರರಿಗೆ ಅಗತ್ಯ ಮಾಹಿತಿಯನ್ನು ನೀಡಿದೆ.

Image Credit: Original Source

ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ SEBI ಹೊಸ ನಿಯಮ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರ ಅಗತ್ಯಗಳಿಗೆ SEBI ನಿಂದ ಪ್ರಮುಖವಾದ ನವೀಕರಣವನ್ನು ಬಿಡುಗಡೆ ಮಾಡಲಾಗಿದೆ. ಹೊಸ ನವೀಕರಣದ ಜೊತೆಗೆ SEBI ಹೂಡಿಕೆದಾರರಿಗೆ ವಿವಿದ ನಿಯಮವನ್ನು ಪರಿಚಯಿಸಿದೆ. ಮಾರುಕಟ್ಟೆ ನಿಯಂತ್ರಕ SEBI, ಬಾಕಿ ಉಳಿದಿರುವ Non-Convertible Debt Securities (NCD) ಹೊಂದಿರುವ ಲಿಸ್ಟೆಡ್ ಕಂಪನಿಗಳಿಗೆ ಅಂತಹ ಸೆಕ್ಯುರಿಟಿಗಳ ಮುಂದಿನ ವಿತರಣೆಗಾಗಿ ಸ್ಟಾಕ್ ಎಕ್ಸ್‌ ಚೇಂಜ್‌ ಗಳಲ್ಲಿ ಪಟ್ಟಿ ಮಾಡುವುದನ್ನು ಕಡ್ಡಾಯಗೊಳಿಸಿದೆ.

Join Nadunudi News WhatsApp Group

 

ಮುಂದಿನ ಜನವರಿಗೆ ಜಾರಿಗೆ ಬರಲಿದೆ ಹೊಸ ನಿಯಮ
Securities and Exchange Board of India ತನ್ನ ವೆಬ್‌ ಸೈಟ್‌ ನಲ್ಲಿ ಬದಲಾವಣೆಯ ಬಗ್ಗೆ ಮಾಹಿತಿ ಪೋಸ್ಟ್ ಮಾಡಿದೆ. ಈ ಬದಲಾವಣೆಯು ಜನವರಿ 1, 2024 ರಿಂದ ಜಾರಿಗೆ ಬರಲಿದೆ ಎಂದು SEBI ತಿಳಿಸಿದೆ. NCD ಬೆಲೆಯಲ್ಲಿ ಪಾರದರ್ಶಕತೆಯನ್ನು ತರುವುದು ಈ ಹಂತದ ಉದ್ದೇಶವಾಗಿದೆ. ಲಿಸ್ಟೆಡ್ ಕಂಪನಿಗಳು ನೀಡುವ ಸೆಕ್ಯೂರಿಟಿಗಳು ಮೆಚ್ಯೂರಿಟಿ ಅವಧಿಯವರೆಗೆ ಇರುತ್ತವೆ ಮತ್ತು ಅದರ ನಂತರವೇ ಅವುಗಳನ್ನು ಎನ್‌ ಕ್ಯಾಶ್ ಮಾಡಬಹುದು ಎಂದು SEBI ಅಧಿಸೂಚನೆಯಲ್ಲಿ ತಿಳಿಸಿದೆ.

Join Nadunudi News WhatsApp Group