Credit Card: ಯಾವ ಕ್ರೆಡಿಟ್ ಕಾರ್ಡ್ ಸುರಕ್ಷಿತ, ಯಾವ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಹೆಚ್ಚು ಲಾಭ.

ಬಳಕೆ ಮಾಡಲು ಯಾವ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಹಳ ಸುರಕ್ಷಿತ ಮತ್ತು ಲಾಭದಾಯಕ ತಿಳಿದುಕೊಳ್ಳಿ.

Secured Credit Card: ದೇಶದೆಲ್ಲೆಡೆ ಸಾಕಷ್ಟು ಜನರು ಕ್ರೆಡಿಟ್ ಕಾರ್ಡ್ (Credit Card) ಗಳನ್ನು ಬಳಸುತ್ತಾರೆ. ಕ್ರೆಡಿಟ್ ಕಾರ್ಡ್ ಸಾಕಷ್ಟು ರೀತಿಯಲ್ಲಿ ಸಹಾಯವಾಗಲಿದೆ. ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗಾಗಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಸೌಲಭ್ಯವನ್ನು ಒದಗಿಸುತ್ತದೆ.

ಇನ್ನು ಗ್ರಾಹಕರು ವಿವಿಧ ಕಾರ್ಡ್ ಗಳ ಸೌಲಭ್ಯವನ್ನು ಪಡೆಯುತ್ತಾರೆ. ಇದೀಗ ಯಾವ ಕ್ರೆಡಿಟ್ ಕಾರ್ಡ್ ಸುರಕ್ಷಿತ ಹಾಗೂ ಯಾವ ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Secured Credit Card
Image Credit: caknowledge

ಯಾವ ಕ್ರೆಡಿಟ್ ಕಾರ್ಡ್ ಹೆಚ್ಚು ಸುರಕ್ಷಿತ
ಸುರಕ್ಷಿತ ಕ್ರೆಡಿಟ್ ಕಾರ್ಡ್ (Secured Credit Card) ಗಳನ್ನೂ ಬಳಸುವುದರಿಂದ ಗ್ರಾಹಕರು ತಮ್ಮ ಕ್ರೆಡಿಟ್ ಸ್ಕೋರ್ ಗಳನ್ನೂ ರಚಿಸಲು ಮತ್ತು ಸುಧಾರಿಸಲು ಅವಕಾಶವನ್ನು ಪಡೆಯುತ್ತಾರೆ. ಬ್ಯಾಂಕುಗಳಲ್ಲಿ ಹೆಚ್ಚಿನ ಹಣದ ವ್ಯವಹಾರ ಮಾಡುವ ಜನರಿಗೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ, ಆದರೆ ಕ್ರೆಡಿಟ್ ಕಾರ್ಡುಗಳನ್ನ ಸರಿಯಾಗಿ ಬಳಕೆ ಮಾಡದೆ ಇದ್ದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತದೆ.

Credit cards are issued to people who do large amounts of money in banks
Image Credit: marketwatch

ಸಾಮಾನ್ಯ ಕ್ರೆಡಿಟ್ ಕಾರ್ಡ್ ಗಳ ರೀತಿ ಸುರಕ್ಷಿತ ಕ್ರೆಡಿಟ್ ಕಾರ್ಡ್ ಗಳು ಕಾರ್ಯನಿರ್ವಹಿಸುತ್ತದೆ. ಆದರೆ ಸುರಕ್ಷಿತ ಕ್ರೆಡಿಟ್ ಕಾರ್ಡ್ ಗಳಲ್ಲಿ ವಿಶೇಷ ವ್ಯತ್ಯಾಸವಿರುತ್ತದೆ. ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡುಗಳ ಶುಲ್ಕ ಕಡಿಮೆ ಆಗಿರುತ್ತದೆ ಮತ್ತು ಕೆಲವು ಬ್ಯಾಂಕುಗಳ ಶುಲ್ಕ ಹೆಚ್ಚಾಗಿರುತ್ತದೆ.

ಯಾವ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಸಾಲಗಳ ಮೇಲೆ ಕಡಿಮೆ EMI ಮತ್ತು ಬಡ್ಡಿಯನ್ನ ಪಡೆಯುತ್ತದೆಯೋ ಆ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಳಕೆಗೆ ಉತ್ತಮ ಆಗಿದೆ. ಅದೇ ರೀತಿಯಲ್ಲಿ ಸ್ಕರಿ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸುವುದು ಸುರಕ್ಷಿತ ಕೂಡ ಆಗಿದೆ.

Join Nadunudi News WhatsApp Group

Credit cards are issued to people who do large amounts of money in banks
Image Credit: zeebiz

ಸುರಕ್ಷಿತ ಕ್ರೆಡಿಟ್ ಕಾರ್ಡ್ ಗಳನ್ನೂ ಸ್ಥಿರ ಠೇವಣಿಗೆ ಬದಲಾಗಿ ವಿಸ್ತರಿಸಲಾಗುತ್ತದೆ. ಇದು ಕ್ರೆಡಿಟ್ ಕಾರ್ಡ್ ವಿತರಕರ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಕ್ರೆಡಿಟ್ ಕಾರ್ಡ್ ಗಳು ತಡವಾಗಿ ಪಾವತಿ ಮಾಡಿದ್ದಲ್ಲಿ ಅಥವಾ ಪಾವತಿ ಮಾಡದೇ ಇದ್ದರೆ ಕ್ರೆಡಿಟ್ ಕಾರ್ಡ್ ನೀಡುವವರು ಠೇವಣಿ ಮಾಡಿದ ನಿಧಿಯಿಂದ ಬಾಕಿ ಮೊತ್ತವನ್ನು ಕಡಿತಗೊಳಿಸುತ್ತದೆ.

Join Nadunudi News WhatsApp Group