Ritu Singh: ನಾನು ಯಾವುದೇ ಕಾರಣಕ್ಕೂ ಸೀರಿಯಲ್ ನಲ್ಲಿ ನಟಿಸಲ್ಲ, “ಸೀತಾ ರಾಮ” ತಂಡಕ್ಕೆ ಟೆನ್ಶನ್ ಕೊಟ್ಟ ಬಾಲಕಿ.

ಸೀತಾ ರಾಮ ತಂಡಕ್ಕೆ ಟೆನ್ಶನ್ ಕೊಟ್ಟ ರೀತು ಸಿಂಗ್, ದಿನಾಂಕ ಪ್ರಕಟಿಸದೇ ನಟಿಸಲ್ಲ ಅಂದ ಬಾಲಕಿ.

Seetha Rama Serial New Promo: ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ (Vaishnavi Gowda) ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸೀತಾ ರಾಮ ಧಾರಾವಾಹಿ ಈಗಾಗಲೇ ಪ್ರೊಮೊ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಈ ಧಾರಾವಾಹಿ ಬಿಡುಗಡೆಗಾಗಿ ನಟಿ ವೈಷ್ಣವಿ ಗೌಡ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆದರೆ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದ್ದ ಈ ಧಾರಾವಾಹಿ ಇನ್ನು ಬಿಡುಗಡೆ ಆಗಿಲ್ಲ. ಹಲವಾರು ಅಭಿಮಾನಿಗಳು ಈ ಧಾರಾವಾಹಿ ಇನ್ನು ಯಾಕೆ ಬಿಡುಗಡೆಯಾಗಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

New update about Sita Ram serial
Image Credit: Kannada Tv Shows

ಸೀತಾ ರಾಮ ಧಾರಾವಾಹಿ ಬಗ್ಗೆ ಹೊಸ ಅಪ್ಡೇಟ್
ಇದೀಗ ಸೀತಾ ರಾಮ ಧಾರಾವಾಹಿಯ ದಿನಾಂಕ ನಿಗದಿ ಬಗ್ಗೆ ಅಪ್ಡೇಟ್ ಹೊರ ಬಿದ್ದಿದೆ. ಇನ್ನು ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ನಾಯಕನಾಗಿ ನಟಿಸುತ್ತಿದ್ದಾರೆ. ನಟಿ ವೈಷ್ಣವಿ ಗೌಡ ನಾಯಕಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ರೀತು ಸಿಂಗ್ ಹೆಸರಿನ ಬಾಲಕಿ ಈ ಧಾರಾವಾಹಿಯಲ್ಲಿ ವೈಷ್ಣವಿ ಮಗಳಾಗಿ ನಟಿಸುತ್ತಿದ್ದಾಳೆ.

ಸೀತಾ ರಾಮ ಧಾರಾವಾಹಿಯ ಹೊಸ ಪ್ರೊಮೊ
ಈ ಧಾರಾವಾಹಿ ಪ್ರೊಮೊ ರಿಲೀಸ್ ಆಗಿದ್ದು ಮಾರ್ಚ್ ತಿಂಗಳಿನಲ್ಲಿ ಆದರೆ, ಇಲ್ಲಿಯವರೆಗೆ ಸೀರಿಯಲ್ ರಿಲೀಸ್ ಡೇಟ್ ಅಂನೌನ್ಸ್ ಆಗಿಲ್ಲ. ಈ ಬಗ್ಗೆ ವೀಕ್ಷಕರಿಗೆ ಸಹ ಬೇಸರ ಇದೆ. ಸೋಶಿಯಲ್ ಮೀಡಿಯಾ ಮೂಲಕ ತಂಡವನ್ನು ಪ್ರಶ್ನೆ ಮಾಡಲಾಗತ್ತಿದೆ.

ರೀತು ಸಿಂಗ್ ಗೂ ಪ್ರಶ್ನೆಗಳು ಎದುರಾಗುತ್ತಿವೆ. ಈ ಪುಟ್ಟ ಬಾಲಕಿ ಈಗ ಸೀತಾ ರಾಮ ಸೀರಿಯಲ್ ರಿಲೀಸ್ ಡೇಟ್ ಹೇಳದೆ ಯಾಕ್ಟ್ ಮಾಡುವುದಿಲ್ಲ ಎಂದಿದ್ದಾರೆ. ಜೀ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಹೊಸ ಪ್ರೊಮೊ ಗಮನ ಸೆಳೆಯುತ್ತಿದೆ.

Join Nadunudi News WhatsApp Group

New update about Sita Ram serial
Image Credit: The Hindu

ಕಲರ್ಸ್ ಕನ್ನಡ ಚಾನಲ್ ಅಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡ ನಟಿ ವೈಷ್ಣವಿ ಗೌಡ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿ ತಮ್ಮ ನಟನೆಯ ಮೂಲಕ ನಟಿ ವೈಷ್ಣವಿ ಗೌಡ ಕರುನಾಡ ಜನರ ಮನೆ ಮಾತಾಗಿದ್ದರು.

ನಟಿ ವೈಷ್ಣವಿ ಗೌಡ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈಗ ಹೊಸ ಧಾರಾವಾಹಿ ಸೀತಾರಾಮ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ವೈಷ್ಣವಿ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Join Nadunudi News WhatsApp Group