Land Tax: ನೀವು ಆಸ್ತಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು…? ತೆರಿಗೆ ಕಾನೂನು

ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ತೆರಿಗೆ ಇಲಾಖೆಯ ನಿಯಮ

Sale Or Purchase Property Tax: ಸಾಮಾನ್ಯವಾಗಿ ಜನರು ಹೆಚ್ಚಾಗಿ ಮನೆ ಅಥವಾ ಭೂಮಿಯನ್ನು ಖರೀದಿಸಲು ಇಷ್ಟಪಡುತ್ತಾರೆ. ಆಸ್ತಿ ಖರೀದಿಯು ಭವಿಷ್ಯಕ್ಕೆ ಆರ್ಥಿಕ ಸುರಕ್ಷತೆಯನ್ನು ನೀಡುತ್ತದೆ. ಇನ್ನು ಭೂಮಿ ಅಥವಾ ಮನೆ ಖರೀದಿ ಮಾಡಿದರೆ ನೀವು ಅದಕ್ಕೆ ಸಂಬಂಧಿಸಿದ ಎಲ್ಲ ನಿವೈಮವನ್ನು ತಿಳಿಯುವುದು ಅಗತ್ಯ ಏಕೆಂದರೆ ಭೂಮಿ ಖರೀದಿ,

ಮನೆ ಖರೀದಿಗೆ ಪ್ರತ್ಯೇಕ ತೆರಿಗೆ ನಿಯಮಗಳಿವೆ ಎನ್ನುವ ವಿಚಾರ ನಿಮಗೆ ತಿಳಿದಿರಲಿ. ಭೂಮಿ ಖರೀದಿ ಅಥವಾ ಮಾರಾಟವನ್ನು ಮಾಡಬೇಕಿದ್ದರೆ ತೆರಿಗೆ ನಿಯಮವನ್ನು ಅನುಸರಿಸಬೇಕಾಗುತ್ತದೆ. ದೊಡ್ಡ ಮೊತ್ತದ ವ್ಯವಹಾರಕ್ಕೆ ತೆರಿಗೆ ನಿಯಮಗಳು ಅನ್ವಯವಾಗುತ್ತದೆ.

Selling Property Tax
Image Credit: Housing

ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ತೆರಿಗೆ ಇಲಾಖೆಯ ನಿಯಮವೇನೂ..?
ತೆರಿಗೆ ಇಲಾಖೆಯ ನಿಯಮವನ್ನು ಹೇಳುವುದಾದರೆ, ನೀವು ಮನೆಯನ್ನು ಮಾರಾಟ ಮಾಡುವಾಗ ಪಡೆಯುವ ಮೊತ್ತಕ್ಕೂ ತೆರಿಗೆ ವಿಧಿಸಲಾಗುತ್ತದೆ. ಆಸ್ತಿ ಮಾರಾಟದಲ್ಲಿ ಲಾಭ ಅಥವಾ ನಷ್ಟವಾಗಲಿ ಆಸ್ತಿಯ ಮಾಲೀಕರು ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ನಿಯಮಗಳು ಹೇಳುತ್ತವೆ. ಈ ತೆರಿಗೆಯನ್ನು ಕ್ಯಾಪಿಟಲ್ ಗೇನ್ಸ್ ಅಡಿಯಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ಇದನ್ನು ಸಿ ಎಂದು ಕರೆಯಲಾಗುತ್ತದೆ.

ನೀವು ಆಸ್ತಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಸರ್ಕಾರಕ್ಕೆ ಎಷ್ಟು ತೆರಿಗೆ ಕಟ್ಟಬೇಕು…?
•Long Term Capital Gain
ಮನೆಯನ್ನು ಖರೀದಿಸಿದ 24 ತಿಂಗಳ ನಂತರ ಅಂದರೆ ಎರಡು ವರ್ಷಗಳ ನಂತರ ಮಾರಾಟ ಮಾಡಬೇಕು ಮತ್ತು ಮಾರಾಟದಿಂದ ಬರುವ ಲಾಭದ ಮೇಲೆ ಪಾವತಿಸುವ ತೆರಿಗೆಯನ್ನು ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಮಾರಾಟದಿಂದ ಬರುವ ಲಾಭಕ್ಕೆ ಶೇ. 20ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದಾಗ್ಯೂ, ಈ ಸಂದರ್ಭದಲ್ಲಿ ನೀವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

Property Tax Update
Image Credit: Piramalrealty

•Short Term Capital Gain
ನೀವು ಮನೆ ಅಥವಾ ಭೂಮಿಯನ್ನು ಖರೀದಿಸಿದ 24 ತಿಂಗಳೊಳಗೆ ಮಾರಾಟ ಮಾಡಿದರೆ ಮತ್ತು ಅದರಲ್ಲಿ ನೀವು ಗಳಿಸುವ ಲಾಭವನ್ನು ನಿಮ್ಮ ಆದಾಯದ ಭಾಗವೆಂದು ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ತೆರಿಗೆ ಸ್ಲ್ಯಾಬ್‌ ನ ಪ್ರಕಾರ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ.

Join Nadunudi News WhatsApp Group

ನಿಮ್ಮ ತೆರಿಗೆ ಹೊಣೆಗಾರಿಕೆ ಹೆಚ್ಚಾಗಬಹುದು
ನೀವು ಖರೀದಿಸಿದ ಆರ್ಥಿಕ ವರ್ಷದ ಅಂತ್ಯದ 5 ವರ್ಷಗಳೊಳಗೆ ಮನೆಯನ್ನು ಮಾರಾಟ ಮಾಡಿದರೆ ಅಥವಾ ವರ್ಗಾಯಿಸಿದರೆ ನೀವು ಪಡೆಯುತ್ತಿರುವ ಅಥವಾ ಈಗಾಗಲೇ ಪಡೆದಿರುವ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿಯ ಎಲ್ಲಾ ಪ್ರಯೋಜನಗಳನ್ನು ಹಿಂತಿರುಗಿಸಲಾಗುತ್ತದೆ. ಕಳೆದ ವರ್ಷ ಸೆಕ್ಷನ್ 80 ಸಿ ಅಡಿಯಲ್ಲಿ ಯಾವುದೇ ತೆರಿಗೆ ವಿನಾಯಿತಿಯನ್ನು ತೆಗೆದುಕೊಳ್ಳಲಾಗಿದೆಯೋ ಅದು ಮನೆಯನ್ನು ಮಾರಾಟ ಮಾಡಿದ ವರ್ಷದಲ್ಲಿ ನಿಮ್ಮ ಆದಾಯದ ಭಾಗವಾಗಿರುತ್ತದೆ.

Join Nadunudi News WhatsApp Group