Karnataka Bandh: ನಾಳೆ ಅಖಂಡ ಕರ್ನಾಟಕ ಬಂದ್, ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಏನಿರುತ್ತೆ, ಏನಿರಲ್ಲ…?

ಕನ್ನಡಪರ ಸಂಘಟನೆಗಳು ನಾಳೆ ರಾಜ್ಯದಾದ್ಯಂತ ಬಂದ್ ನಡೆಸಲು ನಿರ್ಧರಿಸಿದೆ.

September 29 Karnataka Bandh: ಸದ್ಯ ಕರ್ನಾಟಕದಲ್ಲಿ ಕಾವೇರಿ ನೀರಿನ ಹೋರಾಟ (Cauvery Protest) ದಿನದಿಂದ ದಿನಕ್ಕೆ ಹೆಚ್ಚು ಚರ್ಚೆಯನ್ನು ಹುಟ್ಟುಹಾಕಿದೆ. ರಾಜ್ಯದಾದ್ಯಂತ ಕಾವೇರಿ ನೀರಿಗಾಗಿ ಹೋರಾಟ ನಡೆಸಲಾಗುತ್ತಿದೆ. ತಮಿಳುನಾಡಿನ ವಿರುದ್ಧ ಕರ್ನಾಟಕ ಕಿಡಿಕಾರುತ್ತಿದೆ. ಇನ್ನು ತಮಿಳುನಾಡಿದೆ ನೀರು ಬಿಡುತ್ತಿರುವ ಸರ್ಕಾರವನ್ನು ಖಂಡಿಸಿ ಈಗಾಗಲೇ September 26 ಮಂಗಳವಾರ ಬೆಂಗಳೂರನ್ನು ಬಂದ್ ಮಾಡಲಾಗಿತ್ತು.

September 29 Karnataka Bandh
Image Credit: Timesnownews

ನಾಳೆ ಅಖಂಡ ಕರ್ನಾಟಕ ಬಂದ್
ಸದ್ಯ ಕಾವೇರಿ ಹೋರಾಟಕ್ಕಾಗಿ September 29 ರಂದು ಇಡೀ ಕರ್ನಾಟಕವನ್ನೇ ಬಂದ್ ಮಾಡಲು ನಿರ್ಧರಿಸಲಾಗಿದೆ. ಇಡೀ ಕರ್ನಾಟಕವನ್ನೇ ಬಂದ್ ಮಾಡಲು ರಾಜ್ಯ ಕನ್ನಡ ಪರ ಸಂಘಟನೆಗಳು ಎಲ್ಲರಿಗು ಕರೆ ನೀಡಿದೆ. ಕರ್ನಾಟಕದ ಬಂದ್ ಗೆ ಬಹುತೇಕ ಬೆಂಬಲ ಲಭಿಸಿದೆ ಎನ್ನಬಹುದು. ಇಡೀ ಅಖಂಡ ಕರ್ನಾಟಕ ನಾಳೆ ಬಂಧ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾಳೆ ರಾಜ್ಯದಲ್ಲಿ ಅಂಗಡಿ, ಹೋಟೆಲ್, ಬಸ್, ಆಟೋ ಯಾವುದು ಕೊಡ ಲಭ್ಯವಾಗುದಿಲ್ಲ ಎನ್ನಬಹುದು. ಇನ್ನು ರಾಜ್ಯದ ಜನತೆಗೆ ನಾಳೆಯ ಬಂದ್ ಬಗ್ಗೆ ತಲೆಕೆಡಿಸಿಕೊಳ್ಳುವಂತಾಗಿದೆ.

ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಇಡೀ ಕರ್ನಾಟಕ ಬಂದ್
ನಾಳೆ ರಾಜ್ಯದಲ್ಲಿ ಏನೆಲ್ಲಾ ಇದೆ..? ಏನೆಲ್ಲಾ ಇರುವುದಿಲ್ಲ ಎನ್ನುವ ಬಗ್ಗೆ ಎಲ್ಲರು ಚಿಂತಿಸುತ್ತಿದ್ದಾರೆ. ಸದ್ಯ ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ಅವರು ನಾಳೆ ನಡೆಯುವ ಬಂದ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೆ. 29 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ಅವರು ಮಾಹಿತಿ ನೀಡಿದ್ದಾರೆ. ಟೌನ್ ಹಾಳ್ ನಿಂದ ಪ್ರೀಡಂ ಪಾರ್ಕ್ ನ ವರೆಗೆ ನಾಳೆ ಪ್ರತಿಭಟನೆ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ರಾಜ್ಯದಾದ್ಯಂತ ಬಂದ್ ನಡೆಸಲು ನಿರ್ಧರಿಸಿದೆ.

Karnataka Bandh latest update
Image Credit: Businesstoday

ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ಏನಿರುತ್ತೆ, ಏನಿರಲ್ಲ…?
ನಾಳೆ ರಾಜ್ಯದಲ್ಲಿ ಬಂದ್ ಇದ್ದರೂ ಕೂಡ ನಮ್ಮ ಮೆಟ್ರೋ, ಆಸ್ಪತ್ರೆಗಳು, ಮೆಡಿಕಲ್, ಸರ್ಕಾರೀ ಕಚೇರಿಗಳು, ಬ್ಯಾಂಕುಗಳ ಸೌಲಭ್ಯ ಲಭ್ಯವಾಗಲಿದೆ. ಆದರೆ ಖಾಸಗಿ ಟ್ಯಾಕ್ಸಿಗಳು, ಓಲಾ ಉಬರ್, ಅಂಗಡಿಗಳು, ಮಾಲ್ ಗಳು, ಚಲನ ಚಿತ್ರ ಮಂದಿರಗಳು, ಮಲ್ಟಿಫ್ಲೆಕ್ಸ್ ಗಳು, ವಿಮಾನ ನಿಲ್ದಾಣಗಳು, ಹೋಟೆಲ್ ರೆಸ್ಟೋರೆಂಟ್, ರಾಷ್ಟ್ರೀಯ ಹೆದ್ದಾರಿ, KSRTC ಬಸ್ ಗಳ ಸೇವೆ ಲಭ್ಯವಾಗುವುದಿಲ್ಲ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group