Anupama Gowda: ಅಪ್ಪ ಮತ್ತು ಕಷ್ಟದ ಬಗ್ಗೆ ಹೇಳಿಕೊಂಡು ಭಾವುಕರಾದ ನಟಿ ಅನುಪಮಾ ಗೌಡ, ಕಣ್ಣೀರ ಕಥೆ.

ಅಪ್ಪ ಕೊಟ್ಟ ನೋವು ಮತ್ತು ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ನಟಿ ಅನುಪಮಾ ಗೌಡ ಹೇಳಿಕೊಂಡಿದ್ದಾರೆ.

Actress Anupama Gowda Life Story: ಕನ್ನಡ ಕಿರುತೆರೆಯ ಸ್ಟಾರ್ ನಟಿಯರಲ್ಲಿ ಒಬ್ಬರಾದ ಅನುಪಮಾ ಗೌಡ (Anupama Gowda) ಇದೀಗ ಹೊಸ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನಟಿ ಅನುಪಮಾ ಗೌಡ ಅವರು ಕಿರುತೆರೆಯ ಅಕ್ಕ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು.

ಸಿನಿಮಾ ಹಾಗೂ ಸೀರಿಯಲ್ ತಾರೆಯರು ಬಹುತೇಕ ಕಷ್ಟಗಳನ್ನು ಕಂಡಿರುತ್ತಾರೆ. ಅದರಲ್ಲಿ ಅನುಮಪ ಗೌಡ ಕೂಡ ಒಬ್ಬರು. ನಟಿ ಅನುಮಪ ಗೌಡ ಅವರ ಬದುಕಿನ ನೋವಿನ ಕಥೆಯ ಬಗ್ಗೆ ತಿಳಿಯೋಣ.

Actress Anupama Gowda Life Story
Image Credit: pxfuel

ಕಿರುತೆರೆಯ ನಟಿ ಅನುಪಮಾ ಗೌಡ
ನಟಿ ಅನುಪಮಾ ಗೌಡ ದರ್ಶನ ಅಭಿನಯದ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಬಾಲ್ಯದಿಂದಲೇ ನಟನೆಯನ್ನು ಆರಂಭಿಸಿದ್ದರು. ಇಡೀ ಮನೆಯ ಜವಾಬ್ದಾರಿಯನ್ನು ಅನುಪಮಾ ಹೊತ್ತಿದ್ದರು. ಇವರ ತಂದೆ ಸಿನಿಮಾಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ತಂದೆಯ ಸಂಪಾದನೆಯಲ್ಲಿ ಮನೆ ನಡೆಸಲು ಕಷ್ಟವಾಗುತ್ತಿತ್ತು ಹಾಗೆ ಅನುಪಮಾ ಅವರ ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು.

ಇನ್ನು ಅನುಪಮಾ ಅವರ ತಂದೆ ಹೆಚ್ಚಾಗಿ ಮದ್ಯಪಾನ ಸೇವಿಸುತ್ತಿದ್ದರು. ತಂದೆ ಮದ್ಯಪಾನ ಸೇವಿಸಿ ಮನೆಯ ಜವಾಬ್ದಾರಿಯನ್ನೇ ಮರೆತುಬಿಟ್ಟಿದ್ದರು. ಹೆಂಡತಿ ಮಕ್ಕಳ ಬಗ್ಗೆ ತಂದೆ ಯೋಚಿಸುತ್ತಿರಲಿಲ್ಲ.

ತನ್ನ ತಾಯಿ ಜೊತೆ ಅನುಪಮಾ ಪ್ರತಿದಿನ ಕಣ್ಣೀರು ಹಾಕುತ್ತಿದ್ದರು. ಮನೆಯ ಕಷ್ಟದ ಕಾರಣ ಅನುಪಮಾ ಕೇವಲ 6 ನೇ ತರಗತಿ ಓದಿದ್ದಾರೆ ಎನ್ನಲಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಅನುಪಮಾ ಅವರು ಅನೇಕ ಕಷ್ಟಗಳನ್ನು ಕಂಡಿದ್ದರು.

Join Nadunudi News WhatsApp Group

 Anupama Gowda participated in Bigg Boss season 5 and 9
Image Credit: facebook

ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಅನುಪಮಾ ಗೌಡ ಖ್ಯಾತಿ ಪಡೆದರು. ಹಾಗೆ ಬಿಗ್ ಬಾಸ್ ಸೀಸನ್ 5 ಹಾಗೂ 9 ರಲ್ಲಿ ಸ್ಪರ್ಧಿಸುವ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದರು. ಇನ್ನು ಕಷ್ಟಗಳನ್ನು ಕಂಡಿದ್ದ ಅನುಪಮಾ ಗೌಡ ಇದೀಗ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಅನುಪಮಾ ಸಜ್ಜಾಗಿದ್ದಾರೆ.

Join Nadunudi News WhatsApp Group