ಸರ್ಕಾರೀ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಸೀರಿಯಲ್ ನಟಿ ಪೂರ್ಣಿಮಾ, ಅಷ್ಟಕ್ಕೂ ಆಗಿದ್ದೇನು ಗೊತ್ತಾ.

ಪ್ಯಾಟೇ ಹುಡ್ಗಿ ಹಳ್ಳಿ ಲೈಫು ರಿಯಾಲಿಟಿ ಶೋ ಎಲ್ಲರೂ ನೋಡಿರುತ್ತಾರೆ. ಹೌದು ಒಂದು ಕಾಲದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ರಿಯಾಲಿಟಿ ಶೋ ಸಕತ್ ಫೇಮಸ್ ಆಗಿತ್ತು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದ ಹಲವು ಯುವತಿಯರು ಇಂದು ಸ್ಟಾರ್ ಆಗಿದ್ದಾರೆ ಎಂದು ಹೇಳಬಹುದು. ಇನ್ನು ಪ್ಯಾಟೇ ಹುಡ್ಗಿ ಹಳ್ಳಿ ಲೈಫು ರಿಯಾಲಿಟಿ ಶೋ ನಲ್ಲಿ ಮೊದಲು ಕಾಣಿಸಿಕೊಂಡು ನಂತರ ಕನ್ನಡದ ಹಲವು ಧಾರಾವಾಹಿಯಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಯನ್ನ ಗಳಿಸಿಕೊಂಡ ಯುವತಿಯರಲ್ಲಿ ನಟಿ ಪೂರ್ಣಿಮಾ ಕೂಡ ಒಬ್ಬರು ಎಂದು ಹೇಳಬಹುದು.

ಹೌದು ಮೊದಲು ಪ್ಯಾಟೇ ಹುಡ್ಗಿ ಹಳ್ಳಿ ಲೈಫು ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡ ನಟಿ ಪೂರ್ಣಿಮಾ ನಂತರ ಕನ್ನಡದ ಫೇಮಸ್ ಧಾರಾವಾಹಿಗಳಾದ ತಂಗಾಳಿ, ಬದುಕು, ಅಕ್ಕ ಮತ್ತು ಮಗಳು ಜಾನಕೀ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಇನ್ನು ಧಾರಾವಾಹಿಯಲ್ಲಿ ನಟನೆ ಮಾಡಿದ ನಂತರ ಕೆಲವು ಸಿನಿಮಾಗಳಲ್ಲಿ ಕೂಡ ಕೂಡ ನಟಿ ಪೂರ್ಣಿಮಾ ಕಾಣಿಸಿಕೊಂಡರು ಎಂದು ಹೇಳಬಹುದು. ಇನ್ನು ಸಿನಿಮಾ ನಟಿಯರು ಸಾಮಾನ್ಯವಾಗಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಹೆರಿಗೆಯನ್ನ ಮಾಡಿಸಿಕೊಳ್ಳುತ್ತಾರೆ, ಆದರೆ ನಟಿ ಪೂರ್ಣಿಮಾ ಮಾತ್ರ ಸರ್ಕಾರೀ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಸಕತ್ ಸುದ್ದಿಯಾಗಿದ್ದಾರೆ.

serial actress purnima

ಹಾಗಾದರೆ ಪ್ಯಾಟೇ ಹುಡ್ಗಿ ಹಳ್ಳಿ ಲೈಫು ಪೂರ್ಣಿಮಾ ಸರ್ಕಾರೀ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದು ಯಾಕೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಮದುವೆಯ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಪ್ಯಾಟೇ ಹುಡ್ಗಿ ಹಳ್ಳಿ ಲೈಫು ಖ್ಯಾತಿಯ ಪೂರ್ಣಿಮಾ ಅವರು ಗರ್ಭಿಣಿಯಾದ ನಂತರ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದರು. ಇನ್ನು ಹೆರಿಗೆ ದಿನ ಹತ್ತಿರವಾಗುತ್ತಿದ್ದಂತೆ ವೈದ್ಯರು ‘ಪ್ಲಸೆಂಟಾ’ ಕೆಳಗೆ ಬಂದಿದ್ದು ಹೆರಿಗೆ ಮಾಡಿದರೆ ತಾಯಿ ಮತ್ತು ಮಗುವಿಗೆ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಇನ್ನು ಇದರಿಂದ ಬಹಳ ಗಾಬರಿಗೊಂಡ ಪೂರ್ಣಿಮಾ ಬೇರೆ ವೈದ್ಯರ ಬಳಿ ಪರೀಕ್ಷೆಯನ್ನ ಮಾಡಿಸಿಕೊಂಡಾಗ ಕೂಡ ಆ ವೈದ್ಯರು ಹೀಗೆ ಹೇಳಿದ್ದಾರೆ.

ಇನ್ನು ಈ ಬಗ್ಗೆ ಕೀಲಾರ ಗ್ರಾಮದ ತಮ್ಮ ಹತ್ತಿರದ ಸಂಬಂಧಿಯೊಬ್ಬರ ಬಳಿ ಪೂರ್ಣಿಮಾ ಅಳಲು ತೋಡಿಕೊಂಡಾಗ ಕೀಲಾರ ಗ್ರಾಮದಲ್ಲೇ ಆಸ್ಪತ್ರೆಯಿದ್ದು ವೈದ್ಯರು ಚೆನ್ನಾಗಿ ನೋಡುತ್ತಾರೆ. ಎಲ್ಲ ರೀತಿಯ ಸೌಕರ‍್ಯಗಳೂ ಇದ್ದು ಇಲ್ಲಿಗೇ ಬಂದುಬಿಡು ಎಂದು ಸಂಬಂಧಿಕರು ಪೂರ್ಣಿಮಾಗೆ ಸಲಹೆ ನೀಡಿದರು. ಇನ್ನು ಅವರ ಮಾತಿನಂತೆ ಪೂರ್ಣಿಮಾ ಕೀಲಾರ ಗ್ರಾಮಕ್ಕೆ ಆಗಮಿಸಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡರು. ವೈದ್ಯರು ನಟಿ ಪೂರ್ಣಿಮಾಗೆ ಧೈರ‍್ಯ ಹೇಳಿ, ಸಿಸೇರಿಯನ್‌ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಸದ್ಯ ನಟಿ ಪೂರ್ಣಿಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

Join Nadunudi News WhatsApp Group

 

Join Nadunudi News WhatsApp Group