Pathaan 2: ಬರಲಿದೆ ಪಠಾಣ್ 2, ಬಿಗ್ ಅಪ್ಡೇಟ್ ನೀಡಿದ ಶಾರುಖ್ ಖಾನ್.

Shah Rukh Khan About Pathan 2: ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ (Pathaan) ಚಿತ್ರ ಇದೀಗ ಬಾರಿ ಸದ್ದು ಮಾಡುತ್ತಿದೆ.

ಜನವರಿ 25 ರಂದು ಪಠಾಣ್ ಚಿತ್ರ ತೆರೆ ಕಂಡಿದ್ದು ಭರ್ಜರಿ ಯಶಸ್ಸು ಗಳಿಸಿದೆ. ಇದೀಗ ಪಠಾಣ್ 2 (Pathan 2) ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ. ಪಠಾಣ್ 2 ಚಿತ್ರದ ಬಗ್ಗೆ ಶಾರುಖ್ ಇದೀಗ ಮಹತ್ವದ ಮಾಹಿತಿ ನೀಡಿದ್ದಾರೆ.

Pathan 2 is coming, Shah Rukh Khan gave a big update.
Image Source: India Today

ಶಾರುಖ್ ಖಾನ್ ಪಠಾಣ್ ಮೂವಿ
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ನಟನೆಯ ಪಠಾಣ್ ಸಿನಿಮಾ ಇದೀಗ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಇದೀಗ ಪಠಾಣ್ ಚಿತ್ರ ರಿಲೀಸ್ ಆಗಿ 5 ದಿನಕ್ಕೆ 400 ಕೋಟಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗುತ್ತಿದೆ.

ಪಠಾಣ್ ಚಿತ್ರದ ಅಬ್ಬರ ಎಲ್ಲೆಡೆ ಜೋರಾಗಿ ಕೇಳಿಬರುತ್ತಿದೆ. ಕೇಸರಿ ಬಿಕಿನಿ ವಿವಾದದ ನಡುವೆಯೂ ಪಠಾಣ್ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಪಡೆದುಕೊಂಡಿದೆ. ಪಠಾಣ್ ಚಿತ್ರವನ್ನು ವೀಕ್ಷಿಸಿದ ಸಿನಿಪ್ರಿಯರು ಪಠಾಣ್ 2 ಬಗ್ಗೆ ಕೇಳಿದ್ದಾರೆ. ಪಠಾಣ್ 2 ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿದೆ. ಇದೀಗ ಪಠಾಣ್ 2 ಬಗ್ಗೆ ಶಾರುಖ್ ಖಾನ್ ಮಾಹಿತಿ ನೀಡಿದ್ದಾರೆ.

Pathan 2 is coming, Shah Rukh Khan gave a big update.
Image Source: India Today

ಪಠಾಣ್ 2 ಬಗ್ಗೆ ಶಾರುಖ್ ಖಾನ್ ನೀಡಿದ ಮಾಹಿತಿ
ಶಾರುಖ್ ಖಾನ್ ಅವರಿಗೆ ಪಠಾಣ್ 2 ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಪಠಾಣ್ 2 ಬಗ್ಗೆ ಕಿಂಗ್ ಖಾನ್ ಉತ್ತರ ನೀಡಿದ್ದಾರೆ. “ಪಠಾಣ್ ಸಿನಿಮಾದಲ್ಲಿ ನಟಿಸಿದ್ದು ದೊಡ್ಡ ಅನುಭವ. ನಾನು ಇವತ್ತು ತುಂಬಾ ಸೀರಿಯಸ್ ಆಗಿದ್ದೇನೆ. ಸಿನಿಮಾದ ಪ್ರೀತಿ ಹಾಗೂ ಗೆಲುವು ನನ್ನ ಕುಟುಂಬಕ್ಕೆ ಹಾಗೂ ಸ್ನೇಹಿತರಿಗೆ ಖುಷಿ ತಂದಿದೆ.

Join Nadunudi News WhatsApp Group

ನನಗೆ ಸಿಕ್ಕಿದ ಅವಕಾಶದ ಬಗ್ಗೆ ತುಂಬಾ ಖುಷಿ ಇದೆ. ಒಂದು ವೇಳೆ ಸಿದ್ದಾರ್ಥ್ ಪಠಾಣ್ 2 ಮಾಡಲು ಬಯಸಿದರೆ ನಾನು ಅದರಲ್ಲಿ ಇರುತ್ತೇನೆ. ಸೀಕ್ವೆಲ್ ಸಿನಿಮಾಗೋಸ್ಕರ ನನ್ನ ಸೊಂಟದವರೆಗೆ ಕೂದಲು ಬೆಳೆಸೋಕು ನಾನು ರೆಡಿ.

Pathan 2 is coming, Shah Rukh Khan gave a big update.
Image Source: India Today

ಪಠಾಣ್ 2 ಗಾಗಿ ನನ್ನದೆಲ್ಲವನ್ನು ನೀಡಲು ನಾನು ಪ್ರಯತ್ನಿಸುತ್ತೇನೆ. ಅದು ನನಗೆ ಗೌರವ” ಎಂದು ಶಾರುಖ್ ಖಾನ್ ಪಠಾಣ್ 2 ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Join Nadunudi News WhatsApp Group