SRK Dance: ಒಂದು ಡಾನ್ಸ್ ಮಾಡಲು ಶಾರುಖ್ ಖಾನ್ ಪಡೆಯುವ ಸಂಭಾವನೆ ಎಷ್ಟು, ದುಬಾರಿಯಾದ ಶಾರುಖ್.

ನೀತಾ ಅಂಬಾನಿ ಕಲ್ಚರಲ್ ಸೆಂಟರ್ ನಲ್ಲಿ ಒಂದು ಹಾಡಿಫ್ ಡಾನ್ಸ್ ಮಾಡಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ನಟ ಶಾರುಖ್ ಖಾನ್.

Shah Rukh Khan Salary For Dance: ಪಠಾಣ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಇದೀಗ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಶಾರುಖ್ ಖಾನ್ ಅವರ ಕುರಿತಾದ ಕೆಲವು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿದ್ದವು.

ಇದೀಗ ಶಾರುಖ್ ಖಾನ್ ಅವರ ಕುರಿತಾಗಿ ಹೊಸ ಮಾಹಿತಿಯೊಂದು ಲಭಿಸಿದೆ. ವೇದಿಕೆ ಮೇಲೆ ಕೇವಲ 10 ನಿಮಿಷ ಡಾನ್ಸ್ ಮಾಡಿದ ಕಾರಣ ಶಾರುಖ್ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Shah Rukh Khan Salary For Dance
Image Source: NDTV.com

10 ನಿಮಷದ ಡಾನ್ಸ್ ಗೆ 10 ಕೋಟಿ ಸಂಭಾವನೆ ಪಡೆದ ಶಾರುಖ್
ಇತ್ತೀಚೆಗಷ್ಟೇ ನೀತಾ ಮುಕೇಶ್ ಅಂಬಾನಿ ಅವರು ಕಲ್ಚರಲ್ ಸೆಂಟರ್ ಉದ್ಘಾಟನೆಯನ್ನು ಬಹಳ ಅದ್ದೂರಿಯಾಗಿ ಏರ್ಪಡಿಸಿದ್ದರು. ಈ ಕಾರ್ಯಮಕ್ಕೆ ವಿದೇಶಗಳ ಗಣ್ಯರು ಸೇರಿದಂತೆ ಬಾಲಿವುಡ್ ನ ಅನೇಕ ಸ್ಟಾರ್ ನಟ ನಟಿಯರು ಕೂಡ ಆಗಮಿಸಿದ್ದರು. ಈ ವೇಳೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ವೇದಿಕೆ ಮೇಲೆ 10 ನಿಮಿಷಗಳ ಕಾಲ ಡಾನ್ಸ್ ಮಾಡಿದ್ದಾರೆ.

Shah Rukh Khan Salary For Dance
Image Source: India Today

ಪಠಾಣ್ ಸಿನಿಮಾದ ಹಾಡಿಗೆ ಸ್ಟೆಪ್ ಹಾಕಿದ ಶಾರುಖ್ ಖಾನ್ 

ಪಠಾಣ್ ಸಿನಿಮಾದ (Pathan Movie) ಹಾಡಿಗೆ ಸೋಲೋ ಆಗಿ ಶಾರುಖ್ 10 ನಿಮಿಷಗಳ ಕಾಲ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಆದರೆ ಇದರಲ್ಲಿ ವಿಶೇಷವೇನೆಂದರೆ ಕೇವಲ 10 ನಿಮಿಷಕ್ಕೆ ಶಾರುಖ್ ಖಾನ್ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕೇವಲ 10 ನಿಮಿಷಕ್ಕೆ 10 ಕೋಟಿ ಸಂಭಾವನೆ ಪಡೆದಿರುವ ವಿಚಾರ ಕೇಳಿದವರು ಅಚ್ಚರಿ ಪಡುತ್ತಿದ್ದಾರೆ.

Join Nadunudi News WhatsApp Group

Shah Rukh Khan Salary For Dance
Image Source: News18

ಇನ್ನು ವಿಶ್ವದ ಅತ್ಯಂತ ಶ್ರೀಮಂತರಾಗಿರುವ ಅಂಬಾನಿ ಕುಟುಂಬದವರು 10 ಕೋಟಿ ಸಂಭಾವನೆ ನೀಡಿರುವುದು ಅಚ್ಚರಿಯ ವಿಷಯವಲ್ಲ. ಹಾಗೆಯೇ ಶಾರುಖ್ ಖಾನ್ ಕೂಡ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ದುಬಾರಿ ಸಂಭಾವನೆ ಪಡೆಯುವವರಲ್ಲಿ ಶಾರುಖ್ ಖಾನ್ ಕೂಡ ಒಬ್ಬರಾಗಿದ್ದಾರೆ.

Shah Rukh Khan Salary For Dance
Image Source: Times Of India

Join Nadunudi News WhatsApp Group