Shaheen Afridi: ಕಳೆದ ವಾರ ಜನಿಸಿದ ಬುಮ್ರಾ ಮಗುವಿಗೆ ಉಡುಗೊರೆ ನೀಡಿದ ಶಹೀನ್ ಅಫ್ರಿಧಿ, ಅಷ್ಟಕ್ಕೂ ಗಿಫ್ಟ್ ಏನು…?

ಬುಮ್ರಾ ಮಗುವಿಗೆ ಉಡುಗೊರೆ ನೀಡಿದ ಶಹೀನ್ ಆಫ್ರಿದಿ.

Shaheen Afridi Gift To Jasprit Bumrah: ಪ್ರಸ್ತುತ Asia Cup 2023 ರ ಮೂಲಕ ಎಲ್ಲ ಕ್ರಿಕೆಟ್ ಆಟಗಾರರು ಜನರನ್ನು ಸೆಳೆಯುತ್ತಿದ್ದಾರೆ. Asia Cup 2023 ರ India ಮತ್ತು Pakistan ಪಂದ್ಯ ಇದೀಗ ರೋಚಕ ತಿರುವನ್ನು ಪಡೆಯುತ್ತಿವೆ. Asia Cricket Council 2023 ರ Asia Cup ನಲ್ಲಿ India ಮತ್ತು Pakistan ಪಂದ್ಯಕ್ಕೆ ಮತ್ತೆ ಮೀಸಲು ದಿನವನ್ನು ಘೋಷಿಸಿದೆ. India ಮತ್ತು Pakistan ಸೂಪರ್ 4 ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ ಎಂದು Asia Cricket Council ಬಹಿರಂಗಪಡಿಸಿದೆ.

ಹವಾಮಾನ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ACC ಈ ನಿರ್ಧಾರವನ್ನು ಕೈಗೊಂಡಿದೆ. India ಮತ್ತು Pakistan ಸೂಪರ್ 4 ಪಂದ್ಯದ ಮೀಸಲು ದಿನವನ್ನು 10 ನೇ ಸೆಪ್ಟೆಂಬರ್ 2023 ರಂದು ಕೊಲಂಬೊದ ಆರ್. ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು. ಆದರೆ ಮಳೆಯ ಕಾರಣ ನಿನ್ನೆ ನಡೆಯಬೇಕಿದ್ದ ಪಂದ್ಯ ಮತ್ತೆ ರದ್ದಾಗಿದೆ. ಕ್ರಿಕೆಟ್ ಪ್ರಿಯರು ಮತ್ತೆ India ಮತ್ತು Pakistan ಸೂಪರ್ 4 ಪಂದ್ಯ ವೀಕ್ಷಣೆಗಾಗಿ ಕಾಯಬೇಕಿದೆ. ಈ ವೇಳೆ ಪಾಕಿಸ್ತಾನಿ ಇಂಟರ್ನ್ಯಾಷನಲ್ ಕ್ರಿಕೆಟ್ ಆಟಗಾರ Shaheen Afridi ಇದೀಗ ಸುದ್ದಿಯಾಗಿದ್ದಾರೆ.

Shaheen Afridi Gift To Jasprit Bumrah
Image Credit: Postsen

ಕಳೆದ ವಾರ ಜನಿಸಿದ ಬುಮ್ರಾ ಮಗುವಿಗೆ ಉಡುಗೊರೆ ನೀಡಿದ ಶಾಹೀನ್ ಅಫ್ರಿಧಿ
ಪಾಕಿಸ್ತಾನದ ವೇಗದ ಬೌಲರ್ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ. India ಮತ್ತು Pakistan ಸೂಪರ್ 4 ಪಂದ್ಯ ಮಳೆಯ ಕಾರಣ ರದ್ದಾಗಿದ್ದು ಇದಾದ ಬಳಿಕ ಶಾಹೀನ್ ಶಾ ಅಫ್ರಿಧಿ ಅವರು Jasprit Bumrah ಅವರ ಬಳಿ ತೆರಳಿ ಅವರ ಮೊದಲ ಮಗುವಿಗೆ ತಂದೆಯಾಗುರುವುದಕ್ಕೆ ಅಭಿನಂದಿಸಿ ಉಡುಗೊರೆ ನೀಡಿದ್ದಾರೆ.

ಜನರ ಮೆಚ್ಚುಗೆ ಪಡೆದುಕೊಂಡ ಶಾಹೀನ್ ಅಫ್ರಿಧಿ
ಆರ್. ಪ್ರೇಮದಾಸ್ ಸ್ಟೇಡಿಯಂ ನಲ್ಲಿ ಇಬ್ಬರು ಭೇಟಿಯಾದಾಗ ಅಫ್ರಿದಿ ಅವರು ಕಳೆದ ವಾರ ಜನಿಸಿದ ಬುಮ್ರಾ ಮಗುವಿಗೆ ಉಡುಗೊರೆ ನೀಡಿದ್ದಾರೆ.

Join Nadunudi News WhatsApp Group

Shaheen Afridi gives a gift to Jasprit Bumrah and congratulates him for becoming a father
Image Credit: Sportskeeda

ಉಡುಗೊರೆ ನೀಡಿ ಅಭಿನಂದಿಸಿ ಹಾರೈಸಿದ್ದಾರೆ. ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನು ಅಫ್ರಿದಿ ಅವರು ಬುಮ್ರಾ ಮಗುವಿಗೆ ಉಡುಗೊರೆ ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಸದ್ಯ Shaheen Afridi ಅವರ ಈ ನಡೆ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.

Join Nadunudi News WhatsApp Group