Newborn FD Scheme: ಮಗು ಹುಟ್ಟಿದ ತಕ್ಷಣ ಕೇಂದ್ರದ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಮಗುವಿನ ಸಂಪೂರ್ಣ ಖರ್ಚು ಭರಿಸಬಹುದು.

ನವಜಾತ ಶಿಶುವಿನ ಹೆಸರಿನಲ್ಲಿ ಸ್ಥಿರ ಠೇವಣಿ, ಮಾಡಿದರೆ ಮಗುವಿನ ಸಂಪೂರ್ಣ ಖರ್ಚು ಭರಿಸಬಹುದು

Shishu Samriddhi Yojana Newborn FD Scheme: ಪೋಷಕರಿಗೆ ತಮ್ಮ ಮಕ್ಕಳು ಹುಟ್ಟಿದ ತಕ್ಷಣ ಜವಾಬ್ದಾರಿಯ ಜೊತೆಗೆ ಮಕ್ಕಳ ಭವಿಷ್ಯದ ಚಿಂತೆ ಕೂಡ ಶುರುವಾಗುತ್ತದೆ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಡಲು ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ.

ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯನ್ನು ಮಾಡುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬಹುದು. ಸದ್ಯ ಈ ರಾಜ್ಯ ಸರ್ಕಾರ ಹುಟ್ಟಿದ ಮಕ್ಕಳಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಸಹಾಯಧನವನ್ನು ಪಡೆಯಬಹುದು.

Newborn baby FD Scheme
Image Credit: Informal Newz

ಮಗು ಹುಟ್ಟಿದ ತಕ್ಷಣ ಕೇಂದ್ರದ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಮಕ್ಕಳ ಭವಿಷ್ಯಕ್ಕೆ ಆರ್ಥಿಕ ನೆರವು ನೀಡುವುದರ ಜೊತೆಗೆ ರಾಜ್ಯದಲ್ಲಿ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಿಕ್ಕಿಂ ಸರ್ಕಾರವು ಹೊಸ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಹೆಸರು Shishu Samriddhi Yojana. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಸೋಮವಾರ ಹೊಸ ಯೋಜನೆಯನ್ನು (ಶಿಶು ಸಮೃದ್ಧಿ ಯೋಜನೆ) ಘೋಷಿಸಿದ್ದಾರೆ. ಇದರ ಅಡಿಯಲ್ಲಿ ಸರ್ಕಾರವು ನವಜಾತ ಶಿಶುವಿನ ಹೆಸರಿನಲ್ಲಿ 10,800 ರೂಪಾಯಿಗಳ ಸ್ಥಿರ ಠೇವಣಿ ಮಾಡುತ್ತದೆ.

ಮಗುವಿನ ಸಂಪೂರ್ಣ ಖರ್ಚು ಭರಿಸಬಹುದು
ಸೊರೆಂಗ್‌ ನಲ್ಲಿ ನಡೆದ ‘ಜನ ಭರೋಸಾ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಿದ ತಮಾಂಗ್, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ‘ಸಿಕ್ಕಿಂ ಶಿಶು ಸಮೃದ್ಧಿ ಯೋಜನೆ’ಯನ್ನು ಘೋಷಿಸಿದರು. ನಿಶ್ಚಿತ ಠೇವಣಿ ಮುಗಿದ ನಂತರ ಮತ್ತು ಮಗುವಿಗೆ 18 ವರ್ಷ ತುಂಬಿದಾಗ ಹಣವನ್ನು ಹಿಂಪಡೆಯಬಹುದು ಎಂದು ಅವರು ಹೇಳಿದರು.

Shishu Samriddhi Yojana
Image Credit: Yogiyojana

ಈ ಯೋಜನೆಯಡಿಯಲ್ಲಿ ನವಜಾತ ಶಿಶುವಿನ ಜನನದ ಮೇಲೆ ಸರ್ಕಾರವು ಯಾವುದೇ ದಂಪತಿಗಳ ಹೆಸರಿನಲ್ಲಿ 10,800 ರೂ. ಗಳನ್ನು ಸ್ಥಿರ ಠೇವಣಿ ಮಾಡುತ್ತದೆ ಮತ್ತು ಮಗುವು ವಯಸ್ಕನಾದಾಗ ಅಂದರೆ 18 ವರ್ಷ ವಯಸ್ಸಿನವನಾದಾಗ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಇನ್ನು ಈ FD ಯಲ್ಲಿ ಎಷ್ಟು ಬಡ್ಡಿಯನ್ನು ನೀಡಲಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ. ಕರ್ನಾಟಕ ಸರ್ಕಾರ ಶೀಘ್ರವೇ ಈ ಯೋಜನೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group