Electric Scooter: ಸಿಂಗಲ್ ಚಾರ್ಜ್ ನಲ್ಲಿ 150 Km ಮೈಲೇಜ್, ಓಲಾ ಮತ್ತು ಅಥೇರ್ ಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಅಗ್ಗದ EV.

ಒಂದೇ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ ಗಳವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ ಎಲೆಕ್ಟ್ರಿಕ್ ಸ್ಕೂಟರ್.

Simple Dot One Electric Scooter: ಕಚ್ಚಾ ತೈಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ Electric Scooter ಗಳ ಬೇಡಿಕೆ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಭವಿಷ್ಯದಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುವ ಸಾಧ್ಯತೆ ಕೂಡ ಇದೆ. 

ಇನ್ನು ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತಿಷ್ಠಿತ ಕಂಪನಿಗಳು ಹಾಗು ಕೆಲವು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸುತ್ತಿದೆ. ಇನ್ನು ಸಿಂಪಲ್ ಎನರ್ಜಿ (Simple Energy) ಕಂಪನಿ ಇತ್ತೀಚಿಗೆ ತನ್ನ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸಿಂಪಲ್ ಎನರ್ಜಿ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಸಂಚಲನ ಮೂಡಿಸುತ್ತಿದೆ.

Simple Dot One Electric Scooter
Image Credit: Autocarindia

ಸಿಂಗಲ್ ಚಾರ್ಜ್ ನಲ್ಲಿ 150 Km ಮೈಲೇಜ್
ಮಾರುಕಟ್ಟೆಯಲ್ಲಿ ಇದೀಗ Simple Energy ಕಂಪನಿ ತನ್ನ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಆದ Simple Dot One Electric Scooter  ಅನ್ನು ಪರಿಚಯಿಸಿದೆ. Simple Dot One Electric Scooter ನಲ್ಲಿ, ಕಂಪನಿಯು 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ನೀಡಿದ್ದು, ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 151 ಕಿಲೋಮೀಟರ್‌ ಗಳವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಒಟ್ಟು 4 ಬಣ್ಣಗಳಲ್ಲಿ ರೆಡ್, ಬ್ರೆಜೆನ್ ಬ್ಲ್ಯಾಕ್, ಗ್ರೇಸ್ ವೈಟ್ ಮತ್ತು ಅಜುರೆ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಡಾಟ್ ಒನ್ ಎಲೆಕ್ಟ್ರಿಕ್ Scooter 750W ಚಾರ್ಜರ್‌ ನೊಂದಿಗೆ ಬರುತ್ತದೆ.

ಓಲಾ ಮತ್ತು ಅಥೇರ್ ಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಅಗ್ಗದ EV
ಕಂಪನಿಯು ಈ ಸ್ಕೂಟರ್‌ನಲ್ಲಿ ಕಂಪನಿಯು 8.5kW ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಿದ್ದು ಅದು 72Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 12 ಇಂಚಿನ ಚಕ್ರಗಳನ್ನು ಹೊಂದಿರುವ ಈ ಸ್ಕೂಟರ್‌ ಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ಯೂಬ್‌ಲೆಸ್ ಟೈರ್‌ ಗಳನ್ನು ಬಳಸಲಾಗಿದೆ. ಈ ಸ್ಕೂಟರ್ ಕೇವಲ 2.77 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 40 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Simple Dot One Electric Scooter Price
Image Credit: Carandbike

ನೀವು ನಿಮ್ಮ ಅಗತ್ಯ ವಸ್ತುಗಳನ್ನು ಇರಿಸಲು ಸಹಾಯವಾಗಲು ಈ ಸ್ಕೂಟರ್‌ ಗೆ 35-ಲೀಟರ್ ಸೀಟಿನ ಕೆಳಗಿರುವ ಸಂಗ್ರಹಣೆಯನ್ನು ಒದಗಿಸಲಾಗಿದೆ. ಇದರ ಜೊತೆಗೆ ಟಚ್‌ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇತರ ವೈಶಿಷ್ಟ್ಯಗಳನ್ನು ನಿರ್ವಹಿಸಲು ಅಪ್ಲಿಕೇಶನ್ ಸಂಪರ್ಕದ ಸೌಲಭ್ಯವನ್ನು ಸಹ ಒದಗಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group