SIP Investment: ಈ ಯೋಜನೆಯಲ್ಲಿ 5000 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 1 ಕೋಟಿ ರೂ, ಬೆಸ್ಟ್ ಇನ್ವೆಸ್ಟ್ಮೆಂಟ್

ಈ ಯೋಜನೆಯಲ್ಲಿ 5000 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 1 ಕೋಟಿ ರೂ

SIP Investment Profit: ಜನಸಮಾನ್ಯರಿಗಾಗಿ ವಿವಿಧ ಹೂಡಿಕೆಯ ಯೋಜನೆಗಳಿವೆ. ಜನರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆಯ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು Mutual Fund Investment ಒಂದು ರೀತಿಯ ಉತ್ತಮ ಹೂಡಿಕೆಯ ವಿಧಾನ ಎನ್ನಬಹುದು. ಮ್ಯೂಚುವಲ್ ಫಂಡ್ ನಲ್ಲಿನ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ.

ಈ ಹೂಡಿಕೆಯು ಮಾರುಕಟ್ಟೆಯ ಅಪಾಯಗಳಿಂದ ಮುಕ್ತವಾಗಿದೆ ಎಂದರೆ ತಪ್ಪಾಗಲಾರದು. ನೀವು ಹೂಡಿಕೆಗೆ ಯೋಜನೆಯ ಬಗ್ಗೆ ಯೋಚಿಸುತ್ತಿದ್ದರೆ Mutual Fund ನಲ್ಲಿ SIP Investment ಉತ್ತಮ ಆಯ್ಕೆಯಾಗಿದೆ.

SIP Investment Profit
Image Credit: Goodreturns

SIP ಎಂದರೆ…?
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಒಂದು ರೀತಿಯ ಹೂಡಿಕೆಯ ವಿಧಾನವಾಗಿದ್ದು, ಹೂಡಿಕೆದಾರರು ನಿಯಮಿತವಾಗಿ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಮಾಸಿಕ, ತ್ರೈಮಾಸಿಕ, ಹಾಗೆ ವಾರ್ಷಿಕವಾಗಿ ಹೂಡಿಕೆ ಮಾಡಬಹುದು. SIP ಅಲ್ಲಿ 5000, 10000, 15000 ಹೂಡಿಕೆ ಮಾಡುವ ಮೂಲಕ 1 ಕೋಟಿ ಲಾಭವನ್ನು ಗಳಿಸಬಹುದಾಗಿದೆ.

ಈ ಯೋಜನೆಯಲ್ಲಿ 5000 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ 1 ಕೋಟಿ ರೂ
ನೀವು ಮಾಸಿಕ 5,000 ರೂಪಾಯಿಗಳನ್ನು ಉಳಿಸುತ್ತೀರಿ ಮತ್ತು 12% ವಾರ್ಷಿಕ ಆದಾಯವನ್ನು ಪಡೆಯುತ್ತೀರಿ ಎಂದು ಭಾವಿಸೋಣ, ನಂತರ ನೀವು 26 ವರ್ಷಗಳಲ್ಲಿ ಸರಿಸುಮಾರು 1 ಕೋಟಿ ರೂಪಾಯಿಗಳ ನಿಧಿಯನ್ನು ಸಂಗ್ರಹಿಸಬಹುದು. ಇದರಲ್ಲಿ ನಿಮ್ಮ ಹೂಡಿಕೆ ರೂ 15,60,000 ಲಕ್ಷ ಆಗಿರುತ್ತದೆ. ನೀವು ರೂ 91,95,560 ಆದಾಯವನ್ನು ಪಡೆಯುತ್ತೀರಿ. 26 ವರ್ಷಗಳ ನಂತರ ಒಟ್ಟು ಕಾರ್ಪಸ್ ಫಂಡ್ 1,07,55,560 ರೂ. ಆಗಿರುತ್ತದೆ. ಆದರೆ SIP ಹೂಡಿಕೆಯಲ್ಲಿ ಮಾರುಕಟ್ಟೆ ಅಪಾಯವಿದೆ ಎಂದು ಇಲ್ಲಿ ನೀವು ತಿಳಿದಿರಬೇಕು. ಇದರರ್ಥ ನೀವು ಖಾತರಿಯ ಆದಾಯವನ್ನು ಪಡೆಯುವುದಿಲ್ಲ. ಮಾರುಕಟ್ಟೆಯ ಏರಿಳಿತಗಳಿಂದಾಗಿ ನಿಮ್ಮ ಆದಾಯವು ಹೆಚ್ಚು ಅಥವಾ ಕಡಿಮೆ ಆಗಿರಬಹುದು.

SIP Mutual Funds
Image Credit: ABP Live

Join Nadunudi News WhatsApp Group

Join Nadunudi News WhatsApp Group