ಮಾನವ ನಿದ್ರೆಯನ್ನ ಮಾಡದೆ ಎಷ್ಟು ದಿನ ಬದುಕಬಹುದು ಗೊತ್ತಾ, ನಿದ್ರೆ ಇಲ್ಲದಿದ್ದರೆ ದೇಹದಲ್ಲಿ ಏನಾಗುತ್ತದೆ ನೋಡಿ.

ನಿದ್ರೆ ಅನ್ನುವುದು ಎಲ್ಲರಿಗೂ ಮುಖ್ಯ ಮತ್ತು ನಿದ್ರೆ ಕೂಡ ನಮ್ಮ ಆರೋಗ್ಯವನ್ನ ಕಾಪಾಡುವಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ನಾವು ಪ್ರತಿನಿತ್ಯ ಸರಿಯಾಗಿ ನಿದ್ರೆಯನ್ನ ಮಾಡಿದರೆ ಮಾತ್ರ ನಮ್ಮ ದೈನಂದಿನ ಜೀವನ ಬಹಳ ಚನ್ನಾಗಿ ಇರುತ್ತದೆ, ಇನ್ನು ವೈದ್ಯರು ಕೂಡ ಜನರಿಗೆ ಸರಿಯಾಗಿ ನಿದ್ರೆಯನ್ನ ಮಾಡಲು ಸಲಹೆಯನ್ನ ನೀಡುತ್ತಾರೆ. ಅದೇ ರೀತಿಯಲ್ಲಿ ನಿದ್ರೆ ಸರಿಯಾಗಿ ಮಾಡದೆ ಇದ್ದರೆ ನಾವು ಅನೇಕ ರೀತಿಯ ಆರೋಗ್ಯ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ. ಒಬ್ಬ ನಿದ್ರೆಯನ್ನ ಮಾಡದೆ ಎಷ್ಟು ದಿನ ಬದುಕಬಹುದು ಮತ್ತು ನಿದ್ರೆ ಮಾಡದೆ ಇದ್ದರೆ ನಮ್ಮ ದೇಹದಲ್ಲಿ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹೌದು ಸ್ನೇಹಿತರೆ ನಮಗೆ ಬದುಕಲು ಆಮ್ಲಜನಕ, ನೀರು, ಆಹಾರಗಳು ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ನಿದ್ರೆ ಕೂಡ ಬಹಳ ಮುಖ್ಯ. ಇನ್ನು ನಮಗೆ ಸರಿಯಾಗಿ ನಿದ್ರೆ ಆಗಲಿಲ್ಲ ಏನಂದ್ರೆ ತಲೆನೋವು, ತಲೆ ತಿರುಗುವುದು ಮತ್ತು ಇತರೆ ಸಮಸ್ಯೆ ಕಾಡುತ್ತದೆ. ವೈದ್ಯರು ಹೇಳುವ ಪ್ರಕಾರ ಮಾನವ ಮಲಗಿದಾಗ ಆತನ ದೇಹ ಹೆಚ್ಚಿನ ಕೆಲಸವನ್ನ ಮಾಡುತ್ತದೆ ಮತ್ತು ಈ ಕಾರಣಗಳಿಂದ ಆತ ನಿದ್ರೆಯಿಂದ ಎದ್ದ ತಕ್ಷಣ ಬಹಳ ಚುರುಕಾಗಿ ಇರುತ್ತಾನೆ.

Sleeping problem

ಒಬ್ಬ ವಯಸ್ಕ ಮಾನವ ದಿನಕ್ಕೆ ಎಂಟು ಘಂಟೆ ನಿದ್ರೆಯನ್ನ ಮಾಡಲೇಬೇಕು ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ, ಆದರೆ ಈ ಮೊಬೈಲ್ ಅನ್ನುವುದು ಬಂದಮೇಲೆ ಜನರು ನಿದ್ರೆ ಬಹಳ ಕಡಿಮೆ ಆಗಿದ್ದು ಜನರು ಹಲವು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿರುವುದು ಬೆಳಕಿಗೆ ಬಂದಿದೆ. ಇನ್ನು ಒಬ್ಬ ಮಾನವ ಆಹಾರ, ನೀರು ಮತ್ತು ಗಾಳಿ ಇಲ್ಲದೆ ಹೇಗೆ ಬದುಕಲು ಸಾಧ್ಯವಿಲ್ಲವೋ ಅದೇ ರೀತಿಯಲ್ಲಿ ನಿದ್ರೆ ಇಲ್ಲದೆ ಕೂಡ ಬದುಕಲು ಸಾಧ್ಯವಿಲ್ಲ. ವೈದ್ಯಕೀಯ ಶಾಸ್ತ್ರ ಹೇಳುವ ಪ್ರಕಾರ ಒಬ್ಬ ಮಾನವ ನಿದ್ರೆ ಇಲ್ಲದೆ ಸರಿಸುಮಾರು 11 ದಿನಗಳ ಕಾಲ ಬದುಕಬಹುದು ಎಂದು ತಿಳಿಯಬಹುದು.

ಹಲವು ದಿನಗಳ ಕಾಲ ನಿದ್ರೆಯನ್ನ ಮಾಡದೆ ಇದ್ದರೆ ಆತನಿಗೆ ಹೃದಯಾಘಾತ ಅಥವಾ ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಬಂದು ಆತ ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಸಂಶೋಧನೆಯಿಂದ ತಿಳಿದುಬಂದಿದೆ. ಜಾಸ್ತಿ ನಿದ್ರೆಯನ್ನ ಮಾಡದೆ ಇರುವುದು ಮಾನವನ ಕರುಳಿನ ಮೇಲೆ ಕೂಡ ಹೊಡೆತವನ್ನ ಬೀಳುವಂತೆ ಮಾಡುತ್ತದೆ. ಇನ್ನು ಜಾಸ್ತಿ ನಿದ್ರೆಯನ್ನ ಬಿಟ್ಟರೆ ಶೀತ, ಸ್ವರ ಮತ್ತು ತಲೆನೋವಿನ ಸಮಸ್ಯೆ ಕೂಡ ಹೆಚ್ಚಾಗಲಿದೆ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ. ಸ್ನೇಹಿತರೆ ಈ ಮಾಹಿತಿಯನ್ನ ಕಡಿಮೆ ನಿದ್ರೆ ಮಾಡುವ ನಿಮ್ಮ ಸ್ನೇಹಿತರಿಗೆ ತಲುಪಿಸಿ.

Join Nadunudi News WhatsApp Group

Sleeping problem

Join Nadunudi News WhatsApp Group