Sobhita Dhulipala: ಗೊತ್ತಿಲ್ಲದೇ ಮಾತನಾಡುವವರಿಗೆ ನಾನು ಉತ್ತರ ನೀಡಬೇಕಿಲ್ಲ, ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಬಗ್ಗೆ ಮಾತನಾಡಿದ ನಟಿ ಶೋಭಿತಾ.

ಕಾರ್ಯಕ್ರಮ ಒಂದರಲ್ಲಿ ನಟಿ ಶೋಭಿತಾ ಡೇಟಿಂಗ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಗೊತ್ತಿಲ್ಲದೇ ಮಾತನಾಡುವವರಿಗೆ ನಾನು ಉತ್ತರ ನೀಡಬೇಕಿಲ್ಲ.

Actress Sobhita Dhulipala: ತೆಲುಗು ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಸಮಂತಾ ಜೊತೆಗಿನ ವಿಚ್ಛೇಧನದ ನಂತರ ನಟಿ ಶೋಭಿತಾ ಧೂಳಿಪಾಲ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೇ ವಿಚಾರಗಳು ವೈರಲ್ ಆದರೂ ಸಹ ನಾಗ ಚೈತನ್ಯ (Naga Chaitanya)ಅವರಾಗಲಿ ನಟಿ ಶೋಭಿತ ಅವರಾಗಲಿ ಒಂದು ಮಾತು ಆಡಿಲ್ಲ. ಇದೀಗ ಮೊದಲ ಬಾರಿಗೆ ನಟಿ ಶೋಭಿತಾ ಧೂಳಿಪಾಲ (Sobhita Dhulipala) ಡೇಟಿಂಗ್ ವಿಚಾರದ ಬಗ್ಗೆ ಮಾತನಾಡಿದ್ದಾರೆ.

Shobita about nagachaitanya
Image Source: Zee News

ನಟಿ ಶೋಭಿತ ಧೂಳಿಪಾಲ
ನಟ ನಾಗ ಚೈತನ್ಯ ಹಾಗು ನಟಿ ಶೋಭಿತಾ ಸೈಲೆಂಟ್ ಆಗಿ ಸುತ್ತಾಟ ನಡೆಸುತ್ತಿದ್ದಾರೆ. ಇವರಿಬ್ಬರು ಆಗಾಗ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಸುತ್ತಾಟ ನಡೆಸುತ್ತಾರೆ. ನಾಗ ಚೈತನ್ಯ ಅವರ ಹೊಸ ಮನೆಗೆ ಶೋಭಿತಾ ಹಲವಾರು ಬಾರಿ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರು ಮದುವೆ ಆಗುತ್ತಿದ್ದಾರೆ ಎಂದು ಕೂಡ ವರದಿ ಆಗಿದೆ. ಇತ್ತೀಚಿಗೆ ನಾಗ ಚೈತನ್ಯ ಜೊತೆ ನಟಿ ಶೋಭಿತಾ ಧೂಳಿಪಾಲ ಲಂಡನ್ ಡಿನ್ನರ್ ಡೇಟ್ ಗೆ ಹೋಗಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇವರಿಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂದು ಎಲ್ಲರೂ ತಿಳಿದುಕೊಂಡಿದ್ದರು. ಇದಕ್ಕೆ ನಟಿ ಶೋಭಿತಾ ಇದೀಗ ಸ್ಪಷ್ಟನೆ ನೀಡಿದ್ದಾರೆ.

Shobita about nagachaitanya
Image Source: India Today

ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಶೋಭಿತಾ
ಕಾರ್ಯಕ್ರಮ ಒಂದರಲ್ಲಿ ನಟಿ ಶೋಭಿತಾ ಡೇಟಿಂಗ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಗೊತ್ತಿಲ್ಲದೇ ಮಾತನಾಡುವವರಿಗೆ ನಾನು ಉತ್ತರ ನೀಡಬೇಕಿಲ್ಲ. ನಾನೇನು ತಪ್ಪು ಮಾಡಿಲ್ಲ ಎಂದರೆ ಸ್ಪಷ್ಟನೆ ಕೊಡುವ ಮಾತೆ ಮಾತೆ ಇಲ್ಲ. ಆ ಬಗ್ಗೆ ನನಗೆ ಭಯ ಇಲ್ಲ. ಇದು ನನಗೆ ಸಂಬಂಧಿಸಿದ ವಿಷಯ ಅಲ್ಲ ಎಂದಿದ್ದಾರೆ ನಟಿ ಶೋಭಿತ.

Shobita about nagachaitanya
Image Source: India Today

Join Nadunudi News WhatsApp Group

Join Nadunudi News WhatsApp Group