SRH And RCB: SRH ತಂಡಕ್ಕೆ ದೊಡ್ಡ ಅವಮಾನ ಮಾಡಿದ RCB, ಕೋಪ ಹೊರಹಾಕಿದ SRH ಫ್ಯಾನ್ಸ್.

SRH ತಂಡಕ್ಕೆ ದೊಡ್ಡ ಅವಮಾನ ಮಾಡಿದ RCB

SRH v/s RCB: IPL 2024 ರ 41 ನೇ ಪಂದ್ಯದಲ್ಲಿ RCB v/s SRH ತಂಡ ಮುಖಾಮುಖಿಯಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ RCB ತಂಡಕ್ಕೆ ಡು ಓರ್ ಡೈ ಪಂದ್ಯವಾಗಿತ್ತು. ಸತತ ಸೋಲು ಕಂಡಿರುವ RCB ಈ ಪಂದ್ಯದಲ್ಲಿ ಜಯ ಸಾಧಿಸುವ ಪಣತೊಟ್ಟಿತ್ತು.

ಅದರಂತೆ ಗುರುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ RCB ಜಯ ಸಾಧಿಸಿದೆ. RCB ಗೆಲುವಿನ ಖುಷಿಯಲ್ಲಿ ಕನ್ನಡಿಗರು ತೇಲುತಿದ್ದಾರೆ. RCB ಈ ಜಯ ಫ್ಲೇ ಆಫ್ ಕನಸು ನನಸು ಮಾಡಿಕೊಳ್ಳೂ ದಾರಿ ಮಾಡಿಕೊಟ್ಟಿದೆ. ಈ ಮ್ಯಾಚ್ ನಲ್ಲೂ SRH ತಂಡ ಹೀನಾಯ ಸೋಲನ್ನು ಕಂಡಿದೆ ಎನ್ನಬಹುದು. ಈ ಸೀಸನ್ ನಲ್ಲಿ 266, 277, 287 ರಂತಹ ಬೃಹತ್ ಸ್ಕೋರ್‌ ಗಳನ್ನು ಗಳಿಸಿದ SRH, RCB ವಿರುದ್ಧದ 207 ರನ್‌ ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಯಿತು.

SRH vs RCB
Image Credit: Hindustantimes

SRH ತಂಡಕ್ಕೆ ದೊಡ್ಡ ಅವಮಾನ ಮಾಡಿದ RCB
ಗುರುವಾರ ನಡೆದ ಪಂದ್ಯದಲ್ಲಿ RCB ತಂಡ SRH ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಕನ್ನಡಿಗರಿಗೆ ಅಪಾರ ಸಂಸತ ಉಂಟಾಗಿದೆ. ಪಾನ್ ಕಮ್ಮಿನ್ಸ್ ಪಡೆಯನ್ನು ಕೆಟ್ಟದಾಗಿ ಅವಮಾನಿಸುವ ಮೂಲಕ ಫಾಪ್ ಡುಪ್ಲೆಸಿಸ್ ಪಡೆ ಸೇಡು ತೀರಿಸಿಕೊಂಡಿದೆ ಎಂದು ಹೇಳಲಾಗುತ್ತದೆ. ಈ ಪಂದ್ಯದಲ್ಲಿ ಆರ್ ಸಿಬಿ ನೀಡಿದ 207 ರನ್ ಗಳ ಗುರಿ ತಲುಪಲು ಅಖಾಡಕ್ಕಿಳಿದ ಎಸ್ ಆರ್ ಎಚ್ ಗೆ ಆರ್ ಸಿಬಿ ಆಲ್ ರೌಂಡರ್ ವಿಲ್ ಜಾಕ್ಸ್ ಶಾಕ್ ನೀಡಿದರು. SRH ನ ವಿಧ್ವಂಸಕ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಔಟ್ ಆದರು ಮತ್ತು ಸನ್ ರೈಸರ್ಸ್ ಪತನಕ್ಕೆ ಪ್ರಮುಖ ಕಾರಣರಾದರು.

ಅಭಿಷೇಕ್ ಶರ್ಮಾ, ಈಡನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಕೂಡ ಶೀಘ್ರದಲ್ಲೇ ಔಟಾದರು. SRH ತಮ್ಮ ಪ್ರಮುಖ ನಾಲ್ಕು ವಿಕೆಟ್‌ ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ತಂಡದ ಹಾರ್ಡ್ ಹಿಟ್ಟರ್ ಅಬ್ದುಲ್ ಸಮದ್ ಬ್ಯಾಟಿಂಗ್ ಗೆ ಬಂದರು. ಅದೇ ಸಮಯದಲ್ಲಿ, RCB ಮತ್ತು SRH ತಂಡವನ್ನು ಅವಮಾನಿಸಿದ್ದಾರೆ. ಆರ್‌ಸಿಬಿ ಯ ಈ ನಡೆಯನ್ನು ಕಂಡು ಎಸ್‌ಆರ್‌ಎಚ್ ಬ್ಯಾಟ್ಸ್‌ಮನ್‌ ಗಳು ಮಾತ್ರವಲ್ಲದೆ ಕ್ರೀಡಾಂಗಣದಲ್ಲಿದ್ದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಒಂದು ಕ್ಷಣ ಬೆಚ್ಚಿಬಿದ್ದರು.

IPL 2024 RCB Team
Image Credit: NDTV

ಕೋಪ ಹೊರಹಾಕಿದ SRH ಫ್ಯಾನ್ಸ್
ಅಬ್ದುಲ್ ಸಮದ್ ಕ್ರೀಸ್‌ ಗೆ ಬಂದ ನಂತರ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಟೆಸ್ಟ್ ಫೀಲ್ಡಿಂಗ್ ಸೆಟ್ ಮಾಡಿದರು. ಇದರಲ್ಲಿ ಕೊಹ್ಲಿಯ ಐಡಿಯಾ ಕೂಡ ಸೇರಿದೆ. ಸಿಲ್ಲಿ ಪಾಯಿಂಟ್‌ ನಲ್ಲಿ ಕೊಹ್ಲಿಯ ಸ್ಲಿಪ್ ಮತ್ತು ಫೀಲ್ಡರ್ ಕೂಡ ಸಮದ್ ಅವರನ್ನು ಒತ್ತಡಕ್ಕೆ ತಳ್ಳಿದರು. RCB ಟೆಸ್ಟ್ ಫೀಲ್ಡಿಂಗ್ ಮಾಡುವ ಮೂಲಕ SRH ತಂಡವನ್ನು ಅವಮಾನಿಸಿತು. ಈ ದೃಶ್ಯ ನೋಡಿ RCB ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ SRH ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

SRH Latest News
Image Credit: Business-standard

Join Nadunudi News WhatsApp Group