ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿಯವರ ಒಟ್ಟು ಆಸ್ತಿ ಎಷ್ಟು ಗೊತ್ತಾ, ಯಾವ ನಟಿಗೂ ಕಡಿಮೆ ಇಲ್ಲ ನೋಡಿ.

ಕನ್ನಡ ಚಿತ್ರರಂಗ ಮಾತ್ರವಲ್ಲದೆ ದೇಶದ ಬೇರೆಬೇರೆ ಚಿತ್ರರಂಗದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಚಿತ್ರರಂಗಳಲ್ಲಿ ಕೆಜಿಎಫ್ ಚಿತ್ರ ಕೂಡ ಒಂದು ಎಂದು ಹೇಳಬಹುದು. ಹೌದು ಕೆಜಿಎಫ್ 2 ನೋಡಲು ಮೂರೂ ವರ್ಷಗಳಿಂದ ಅದೆಷ್ಟೋ ಸಿನಿ ರಸಿಕರು ಕಾದು ಕುಳಿತ್ತಿದ್ದರು ಮತ್ತು ಅದೇ ರೀತಿಯಲ್ಲಿ ಕೆಜಿಎಫ್ 2 ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಜಿಎಫ್ ಚಿತ್ರದಲ್ಲಿ ನಟಿಸಿದ ಅದೆಷ್ಟೋ ನಟರಿಗೆ ಈ ಚಿತ್ರದ ನಂತರ ಬೇಡಿಕೆ ಬಹಳ ಹೆಚ್ಚಾಗಿದೆ. ಇನ್ನು ಕೆಜಿಎಫ್ ಚಿತ್ರದ ನಂತರ ಈಗ ಬಹಳ ಬೇಡಿಕೆಯನ್ನ ಪಡೆದಿರುವ ನಟಿ ಅಂದರೆ ಅದೂ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಎಂದು ಹೇಳಬಹುದು.

ಹೌದು ಶ್ರೀನಿಧಿ ಶೆಟ್ಟಿ ಅವರಿಗೆ ಕೆಜಿಎಫ್ ಚಿತ್ರದ ನಂತರ ಹಲವು ಸಿನಿಮಾ ಆಫರ್ ಬರುತ್ತಿದ್ದು ಸದ್ಯ ನಟಿ ಶ್ರೀನಿಧಿ ಶೆಟ್ಟಿ ಕೆಲವು ಚಿತ್ರದ ಶೂಟಿಂಗ್ ಬಹಳ ಬ್ಯುಸಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೊದಲು ನಟಿ ಶ್ರೀನಿಧಿ ಶೆಟ್ಟಿ ಯಾವ ಕೆಲಸವನ್ನ ಮಾಡುತ್ತಿದ್ದರು ಮತ್ತು ಅವರ ಆಸ್ತಿ ಎಷ್ಟು ಅನ್ನುವ ಪ್ರಶ್ನೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂದಿದ್ದವು. ಹಾಗಾದರೆ ನಟಿ ಶ್ರೀನಿಧಿ ಶೆಟ್ಟಿ ಅವರ ಒಟ್ಟು ಆಸ್ತಿ ಎಷ್ಟು ಅನ್ನುವುದರ ಬಗ್ಗೆ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಇಲ್ಲಿದೆ ನೋಡಿ.

Srinidhi shetty

ನಟಿ ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗಕ್ಕೆ ಬರುವ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಬಹಳ ಹೆಸರನ್ನ ಮಾಡಿದ ಯುವತಿಯಾಗಿದ್ದರೆ. ನಟಿ ಶ್ರೀನಿಧಿ ಶೆಟ್ಟಿ ಅವರು 2016ರಲ್ಲಿ ಮಿಸ್ ಸುಪ್ರನ್ಯಾಶನಲ್ ಟೈಟಲ್ ಗೆದ್ದಿದ್ದರು ಮತ್ತು ಚಿತ್ರರಂಗಕ್ಕೆ ಕಾಲಿಡುವ ಮೊದಲು ನಟಿ ಶ್ರೀನಿಧಿ ಶೆಟ್ಟಿ ಅವರು ಆಕ್ಸೆಂಚರ್ ನಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಿಧಿ ಶೆಟ್ಟಿ ಅವರು ಮೂಲತಃ ಕರ್ನಾಟಕದ ಹುಡುಗಿ ಮತ್ತು ಅವರು ಕರ್ನಾಟಕದಲ್ಲಿಯೇ ವಾಸವಿದ್ದಾರೆ. ಸದ್ಯ ತಮಿಳಿನ ನಟ ವಿಕ್ರಂ ಅವರ ಕೋಬ್ರಾ ಸಿನಿಮಾಗೆ ನಾಯಕಿಯಾಗಿದ್ದಾರೆ ಶ್ರೀನಿಧಿ ಅವರು.

ಕೆಜಿಎಫ್ ನಂತರ ಬಹಳ ಬೇಡಿಕೆ ಹೆಚ್ಚಾಗಿರುವ ಕಾರಣ ನಟಿ ಶ್ರೀನಿಧಿ ಶೆಟ್ಟಿ ಅವರು ಒಂದು ಚಿತ್ರಕ್ಕೆ 3 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 38 ಲಕ್ಷ ರೂಪಾಯಿಯ ಒಂದು ಬಿಎಂಡಬ್ಲ್ಯು ಕಾರನ್ನ ಹೊಂದಿರುವ ನಟಿ ಶ್ರೀನಿಧಿ ಶೆಟ್ಟಿ ಅವರ ಒಟ್ಟು ಆಸ್ತಿ ಅಂದಾಜು 10 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಇದು ಮೂಲಗಳಿಂದ ತಿಳಿದುಬಂದಿರುವ ಅಂದಾಜು ಮಾಹಿತಿಯಾಗಿದ್ದು ಅವರ ನಿಖರ ಆಸ್ತಿ ಎಷ್ಟು ಅನ್ನುವುದು ಸರಿಯಾಗಿಲ್ಲ ತಿಳಿದಿಲ್ಲ. ಸ್ನೇಹಿತರೆ ನಟಿ ಶ್ರೀನಿಧಿ ಶೆಟ್ಟಿ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

Srinidhi shetty

Join Nadunudi News WhatsApp Group